ಭಾರತದ ದಾಳಿ ಭೀತಿಗೆ ಪಾಕ್‌ ಮುಂಚೂಣಿ ನೆಲೆಗಳು ಖಾಲಿ!

Published : May 01, 2025, 06:24 AM IST
Pakistan Army

ಸಾರಾಂಶ

ಪಹಲ್ಗಾಂ ನರಮೇಧ ಪ್ರತೀಕಾರವಾಗಿ ಭಾರತದ ತಿರುಗೇಟಿಗೆ ಬೆದರಿರುವ ಪಾಕಿಸ್ತಾನ, ಇದೀಗ ಭಾರತದೊಂದಿಗಿನ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿನ ತನ್ನ ಸೇನೆಯ ಮುಂಚೂಣಿ ಪಡೆಗಳನ್ನು ತೆರವುಗೊಳಿಸಿದೆ.

ನವದೆಹಲಿ: ಪಹಲ್ಗಾಂ ನರಮೇಧ ಪ್ರತೀಕಾರವಾಗಿ ಭಾರತದ ತಿರುಗೇಟಿಗೆ ಬೆದರಿರುವ ಪಾಕಿಸ್ತಾನ, ಇದೀಗ ಭಾರತದೊಂದಿಗಿನ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿನ ತನ್ನ ಸೇನೆಯ ಮುಂಚೂಣಿ ಪಡೆಗಳನ್ನು ತೆರವುಗೊಳಿಸಿದೆ. ಜೊತೆಗೆ ಗಡಿ ಪೋಸ್ಟ್‌ಗಳ ಬಳಿ ಹಾಕಿದ್ದ ತನ್ನ ದೇಶದ ಧ್ಜಜಗಳನ್ನು ತೆರವುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಕಳೆದ 6 ದಿನಗಳಿಂದ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಕಡೆ ಸತತವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತ ಕೂಡಾ ಸೂಕ್ತ ತಿರುಗೇಟು ನೀಡಿದೆ. ಅದರ ಬೆನ್ನಲ್ಲೇ ಪಾಕ್‌ ಸರ್ಕಾರದ ಹಲವು ಸಚಿವರೇ ಭಾರತದ ದಾಳಿ ಖಚಿತ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ದಾಳಿಯ ಭೀತಿಗೆ ಒಳಗಾಗಿರುವ ಪಾಕ್‌ ಸೇನೆ ಮುಂಜಾಗ್ರತಾ ಕ್ರಮವಾಗಿ ತನ್ನ ಮುಂಚೂಣಿ ಪಡೆಗಳನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ. ಇದು ಸಂಭವನೀಯ ಯುದ್ಧಕ್ಕಿಂತ ಮೊದಲೇ ಪಾಕಿಸ್ತಾನ ಸೇನೆಯ ನೈತಿಕ ಸ್ಥೈರ್ಯ ಕುಸಿದಿರುವ ಸಂಕೇತ ಎಂದು ವಿಶ್ಲೇಷಿಸಲಾಗಿದೆ.

ಮತ್ತೊಂದೆಡೆ ರಾಜಧಾನಿ ಇಸ್ಲಾಮಾಬಾದ್‌, ವಾಣಿಜ್ಯ ರಾಜಧಾನಿ ಕರಾಚಿ ಸೇರಿದಂತೆ ಪ್ರಮುಖ ನಗರಗಳನ್ನು ಮೇ 2ರವರೆಗೂ ಸಂಚಾರ ನಿಷೇಧಿತ ವಲಯ ಎಂದು ಘೋಷಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

₹1.1 ಕೋಟಿ ಇನಾಮು ಇದ್ದ ಟಾಪ್ ನಕ್ಸಲ್‌ ಹತ್ಯೆ
3500 ಕಿ.ಮೀ ಸಾಗಬಲ್ಲ ಕೆ - 4ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ