ಇಂದಿನಿಂದ ಏನು ಬದಲು? ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ

Published : May 01, 2025, 06:15 AM IST
Money

ಸಾರಾಂಶ

ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ ಆಗಲಿವೆ. ಇವುಗಳಲ್ಲಿ ಕೆಲವು ಜನರ ಜೇಬು ಸುಡಲಿವೆ. ಇನ್ನು ಕೆಲವು ನಿರ್ಧಾರ ಗ್ರಾಹಕರಿಗೆ ಅನುಕೂಲವಾಗಲಿವೆ.  

ಇಂದಿನಿಂದ ಏನು ಬದಲು?

ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ ಆಗಲಿವೆ. ಇವುಗಳಲ್ಲಿ ಕೆಲವು ಜನರ ಜೇಬು ಸುಡಲಿವೆ. ಇನ್ನು ಕೆಲವು ನಿರ್ಧಾರ ಗ್ರಾಹಕರಿಗೆ ಅನುಕೂಲವಾಗಲಿವೆ. ಇವುಗಳ ಕಿರು ಮಾಹಿತಿ ಇಲ್ಲಿದೆ.

ಬ್ಯಾಂಕ್‌ ಬಡ್ಡಿ ಇಳಿಕೆ

ಠೇವಣಿ ದರ ಏರಿಕೆ

ಆರ್‌ಬಿಐ ಇತ್ತೀಚೆಗೆ ರೆಪೋದರವನ್ನು ಶೇ.0.25 ಇಳಿಸಿತ್ತು. ಪರಿಣಾಮ ಬ್ಯಾಂಕ್‌ಗಳು ಸಾಲದ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರ ಕಡಿತ ಮಾಡಿವೆ. ಇದು ಮೇ.1ರಿಂದ ಜಾರಿಗೆ ಬರಲಿದೆ.

ರಾಜ್ಯದಲ್ಲಿ ವಾಣಿಜ್ಯ

ವಾಹನ ಬೆಲೆ ಏರಿಕೆ

10 ಲಕ್ಷ ರು. ಒಳಗಿನ ವಾಣಿಜ್ಯ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಶೇ.5ರ ಜೀವಿತಾವಧಿ ತೆರಿಗೆ ಹಾಕಿದೆ. 25 ಲಕ್ಷ ರು.ಗಿಂತ ಅಧಿಕ ಮೌಲ್ಯದ ಎಲೆಕ್ಟ್ರಿಕ್‌ ವಾಣಿಜ್ಯ ವಾಹನಕ್ಕೆ ಶೇ.10 ತೆರಿಗೆ ಇರಲಿದೆ.

ಎಟಿಎಂ ವಿತ್‌ಡ್ರಾ

ಶುಲ್ಕದಲ್ಲಿ ಹೆಚ್ಚಳ

ಎಟಿಎಂಗಳಲ್ಲಿ ವಿತ್‌ ಡ್ರಾ ಮಿತಿ ಶುಲ್ಕ ಹೆಚ್ಚಿಸಿರುವ ನಿಯಮ ಮೇ 1ರಿಂದ ಜಾರಿಗೆ ಬರಲಿದೆ. ಉಚಿತ ಮಿತಿಯನ್ನು ಮೀರಿದ ನಂತರ ಪ್ರತಿ ವಹಿವಾಟಿಗೆ 2 ರು. ಹೆಚ್ಚಳದೊಂದಿಗೆ 23 ರು. ಶುಲ್ಕವಿಧಿಸಲಾಗುತ್ತದೆ.

ಒಂದು ರಾಜ್ಯ ಒಂದು

ಪ್ರಾದೇಶಿಕ ಬ್ಯಾಂಕ್

ಮೇ 1ರಿಂದ ದೇಶಾದ್ಯಂತ 1 ರಾಜ್ಯ 1 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ನೀತಿ ಜಾರಿಗೆ ಬರಲಿದೆ. ಇದರಿಂದ, ಪ್ರಸ್ತುತ 43 ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 28ಕ್ಕೆ ಇಳಿಕೆಯಾಗಲಿದೆ.

PREV

Recommended Stories

* ಅಮೆಜಾನ್‌ ಕ್ಲೌಡ್ ಸಮಸ್ಯೆ: ವಿಶ್ವದಹಲವು ವೆಬ್‌ಸೈಟ್‌, ಆ್ಯಪ್‌ ಡೌನ್‌
ಬಲೂಚಿಸ್ತಾನ ಪ್ರತ್ಯೇಕ ದೇಶ : ಸಲ್ಮಾನ್‌ ಖಾನ್‌