ಐಸಿಸ್‌ ನಂಟು: ಯುಪೀಲಿ19 ವರ್ಷದ ವೈದ್ಯಕೀಯವಿದ್ಯಾರ್ಥಿ ಬಂಧನ

KannadaprabhaNewsNetwork |  
Published : Mar 18, 2026, 01:15 AM IST
ಯುಪಿ | Kannada Prabha

ಸಾರಾಂಶ

ಐಸಿಸ್‌ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ದಂತ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ. ಸಹರಾನ್‌ಪುರ ಹ್ಯಾರಿಸ್‌ ಅಲಿ (19) ಬಂಧಿತ. ಗುಪ್ತಚರ ಮಾಹಿತಿ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಲಖನೌ: ಐಸಿಸ್‌ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ದಂತ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ. ಸಹರಾನ್‌ಪುರ ಹ್ಯಾರಿಸ್‌ ಅಲಿ (19) ಬಂಧಿತ. ಗುಪ್ತಚರ ಮಾಹಿತಿ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಹ್ಯಾರಿಸ್ ಸಹಚರ ಜತೆಗೂಡಿ ವಿಧ್ವಂಸಕ ಕೃತ್ಯಕ್ಕಾಗಿ ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆ ಬಳಸುತ್ತಿದ್ದ. ಇದರ ಮೂಲಕ ದೇಶದಲ್ಲಿ ಐಸಿಸ್‌ ಜಾಲ ವಿಸ್ತರಿಸಲು, ಜನರನ್ನು ನೇಮಿಸಿಕೊಳ್ಳಲು ಚರ್ಚೆ ನಡೆಯುತ್ತಿದ್ದ. ಈ ಕೃತ್ಯಗಳ ಮೂಲಕ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಿತೂರಿ ನಡೆಸಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಜೊತೆಗೆ, ತನಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಬದಲಾಗಿ ಷರಿಯಾ ಕಾನೂನು ಮತ್ತು ಕ್ಯಾಲಿಫೇಟ್ ಸ್ಥಾಪನೆಗೆ ಬೆಂಬಲವಿತ್ತು ಎಂದು ವಿಚಾರಣೆ ವೇಳೆ ಹ್ಯಾರಿಸ್‌ ತಿಳಿಸಿದ್ದಾನೆ.

==

ಭಾರತದ ಮೂಲಕ ಮ್ಯಾನ್ಮಾರ್‌ಗೆ ಪ್ರಯಾಣಿಸಿ ಅಲ್ಲಿ ಸಂಚು

ಭಾರತ ವಿರೋಧಿಗಳಿಗೆ ಯುರೋಪ್‌ನ ಡ್ರೋನ್‌ ಪೂರೈಕೆ

ನವದೆಹಲಿ: ಭಾರತದ ವಿರುದ್ಧ ಭಯೋತ್ಪಾದನೆ ಸಂಚು ರೂಪಿಸಿದ್ದ ಆರೋಪದ ಮೇರೆಗೆ ಉಕ್ರೇನ್‌ನ 6 ಮತ್ತು ಅಮೆರಿಕ ಮೂಲಕ ಒಬ್ಬ ಶಂಕಿತ ಉಗ್ರನನ್ನು ಎನ್‌ಐಎ ಬಂಧಿಸಿದೆ. ಬಂಧಿತರನ್ನು ದೆಹಲಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಎಲ್ಲಾ ಆರೋಪಿಗಳನ್ನು ಮಾ.27ರವರೆಗೂ ಎನ್‌ಐಎ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ಹೊರಡಿಸಿದೆ.ಉಗ್ರ ಸಂಚು: ಅಧಿಕೃತ ವೀಸಾದೊಂದಿಗೆ ಭಾರತಕ್ಕೆ ಆಗಮಿಸಿದ್ದ ಆರೋಪಿಗಳು, ಅನುಮತಿ ಇಲ್ಲದೆಯೇ ಮಿಜೋರಾಂನ ಸಂಘರ್ಷ ಪೀಡಿತ ಪ್ರದೇಶ ಪ್ರವೇಶ ಮಾಡಿದ್ದರು. ಬಳಿಕ ಅಲ್ಲಿಂದ ಮ್ಯಾನ್ಮಾರ್‌ಗೆ ತೆರಳಿ ಅಲ್ಲಿ ಭಾರತ ವಿರೋಧಿ ಸಂಘಟನೆಗಳನ್ನು ಭೇಟಿಯಾಗಿ ಅವರಿಗೆಡ್ರೋನ್‌ ತರಬೇತಿ ಹಾಗೂ ಉಗ್ರ ಕೃತ್ಯಕ್ಕಾಗಿ ಹಾರ್ಡ್‌ವೇರ್‌ಗಳನ್ನು ಪೂರೈಸಿದ್ದರು. ಅಲ್ಲದೆ ಯುರೋಪ್‌ನಿಂದ ಡ್ರೋನ್‌ ತರಿಸಿ ಅದನ್ನು ಭಾರತ ವಿರೋಧಿ ಶಕ್ತಿಗಳಿಗೆ ನೀಡಿದ್ದು ಕೂಡಾ ತನಿಖೆ ವೇಳೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಉಗ್ರರ ಮೇಲೆ ನಿಗಾ ಇಟ್ಟಿದ್ದ ಎನ್‌ಐಎ ಕೆಲ ದಿನಗಳ ಹಿಂದೆ ಕೋಲ್ಕತಾ, ದೆಹಲಿ, ಲಖನೌ ಏರ್‌ಪೋರ್ಟ್‌ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 7 ಜನರನ್ನು ಬಂಧಿಸಿದೆ. ಈ ಪೈಕಿ ಅಮೆರಿಕ ಪ್ರಜೆಯನ್ನು ಕೋಲ್ಕತಾ ಏರ್ಪೋರ್ಟ್‌ ಮತ್ತು ಉಳಿದವರನ್ನು ಲಖನೌ, ದೆಹಲಿ ಏರ್ಪೋರ್ಟ್‌ನಲ್ಲಿ ಬಂಧಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಧಿಕೃತ ವೀಸಾದೊಂದಿಗೆ ಭಾರತಕ್ಕೆ ಆಗಮಿಸಿದ್ದ ಆರೋಪಿಗಳು, ಅನುಮತಿ ಇಲ್ಲದೆಯೇ ಮಿಜೋರಾಂನ ಸಂಘರ್ಷ ಪೀಡಿತ ಪ್ರದೇಶ ಪ್ರವೇಶ ಮಾಡಿದ್ದರು. ಬಳಿಕ ಅಲ್ಲಿಂದ ಮ್ಯಾನ್ಮಾರ್‌ಗೆ ತೆರಳಿ ಅಲ್ಲಿ ಭಾರತ ವಿರೋಧಿ ಸಂಘಟನೆಗಳನ್ನು ಭೇಟಿಯಾಗಿ ಅವರಿಗೆಡ್ರೋನ್‌ ತರಬೇತಿ ಹಾಗೂ ಉಗ್ರ ಕೃತ್ಯಕ್ಕಾಗಿ ಹಾರ್ಡ್‌ವೇರ್‌ಗಳನ್ನು ಪೂರೈಸಿದ್ದರು. ಅಲ್ಲದೆ ಯುರೋಪ್‌ನಿಂದ ಡ್ರೋನ್‌ ತರಿಸಿ ಅದನ್ನು ಭಾರತ ವಿರೋಧಿ ಶಕ್ತಿಗಳಿಗೆ ನೀಡಿದ್ದು ಕೂಡಾ ತನಿಖೆ ವೇಳೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಉಗ್ರರ ಮೇಲೆ ನಿಗಾ ಇಟ್ಟಿದ್ದ ಎನ್‌ಐಎ ಕೆಲ ದಿನಗಳ ಹಿಂದೆ ಕೋಲ್ಕತಾ, ದೆಹಲಿ, ಲಖನೌ ಏರ್‌ಪೋರ್ಟ್‌ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 7 ಜನರನ್ನು ಬಂಧಿಸಿದೆ. ಈ ಪೈಕಿ ಅಮೆರಿಕ ಪ್ರಜೆಯನ್ನು ಕೋಲ್ಕತಾ ಏರ್ಪೋರ್ಟ್‌ ಮತ್ತು ಉಳಿದವರನ್ನು ಲಖನೌ, ದೆಹಲಿ ಏರ್ಪೋರ್ಟ್‌ನಲ್ಲಿ ಬಂಧಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನೆತನ್ಯಾಹು ಮತ್ತೆ 3 ವಿಡಿಯೋ, ಎರಡೂ ನಕಲಿ?
ಭವಾನಿಪುದಲ್ಲಿ ಸುವೇಂದುವಿರುದ್ಧ ಮಮತಾ ಕಣಕ್ಕೆ