ಭವಾನಿಪುರದಲ್ಲಿ ಸುವೇಂದು ವಿರುದ್ಧ ಮಮತಾ ಕಣಕ್ಕೆ

KannadaprabhaNewsNetwork |  
Published : Mar 18, 2026, 01:15 AM ISTUpdated : Mar 18, 2026, 08:17 AM IST
Mamatha Banerjee

ಸಾರಾಂಶ

ವಿಧಾನಸಭಾ ಚುನಾವಣೆಗೆ ಟಿಎಂಸಿ ತನ್ನ 291 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಬಾರಿ ನಂದಿಗ್ರಾಮದಲ್ಲಿ ಸುವೇಂದು ವಿರುದ್ಧ ಮಮತಾ ಸೋತಿದ್ದರು. ಆದರೆ ಬಳಿಕ ಭವಾನಿಪುರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಮಮತಾ ಗೆದ್ದಿದ್ದರು.

ಕೋಲ್ಕತಾ: ವಿಧಾನಸಭಾ ಚುನಾವಣೆಗೆ ಟಿಎಂಸಿ ತನ್ನ 291 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಣಕ್ಕೆ ಇಳಿಯಲಿದ್ದಾರೆ.  

ಕಳೆದ ಬಾರಿ ನಂದಿಗ್ರಾಮದಲ್ಲಿ ಸುವೇಂದು ವಿರುದ್ಧ ಮಮತಾ ಸೋತಿದ್ದರು. ಆದರೆ ಬಳಿಕ ಭವಾನಿಪುರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಮಮತಾ ಗೆದ್ದಿದ್ದರು. ರಾಜ್ಯದ 294 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳನ್ನು ಟಿಎಂಸಿಗೆ ಮಿತ್ರರಿಗೆ ಬಿಟ್ಟುಕೊಟ್ಟಿದೆ. 291 ಕ್ಷೇತ್ರಗಳ ಪೈಕಿ 52 ಮಹಿಳೆಯರು, 95 ಎಸ್‌ಸಿ ಎಸ್ಟಿ, 47 ಅಲ್ಪಸಂಖ್ಯಾತರಿಗೆ ಟಿಕೆಸ್‌ ನೀಡಿದೆ.

ಧುರಂಧರ್‌ 2 ರಿಲೀಸ್‌ ಮುನ್ನ ₹130 ಕೋಟಿ ಸಂಗ್ರಹ 

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಧುರಂಧರ್‌ನ 2ನೇ ಭಾಗ ಗುರುವಾರ ಬಿಡುಗಡೆಯಾಗಲಿದ್ದು, ಇದಕ್ಕೂ ಮೊದಲೇ ಬರೋಬ್ಬರಿ 130 ಕೋಟಿ ರು. ಸಂಗ್ರಹವಾಗಿದೆ. ಬಿಡುಗಡೆ ಮುನ್ನದ ಪ್ರದರ್ಶನಗಳಿಂದಲೇ 40 ಕೋಟಿ ರು. ಗಳಿಕೆಯಾಗಿದೆ. ಮೊದಲ ದಿನ 15,000 ಕಡೆಗಳಲ್ಲಿ ಏರ್ಪಡಲಿರುವ ಶೋಗಾಗಿ 4.70 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದು, ಇದರ ಒಟ್ಟು ಮೊತ್ತ 29 ಕೋಟಿ ರು. ಆಗಿದೆ. ಅತ್ತ ಉತ್ತರ ಅಮೆರಿಕದಲ್ಲಿ ರಿಲೀಸ್‌ಗೂ ಮುನ್ನ 46 ಕೋಟಿ ರು. ಸಂಗ್ರಹಿಸಿದ ಮೊದಲ ಭಾರತೀಯ ಚಿತ್ರ ಎಂಬ ದಾಖಲೆಯನ್ನೂ ಮಾಡಿದೆ. ಧುರಂಧರ್‌-1 ವಿಶ್ವಾದ್ಯಂತ 1,356 ಕೋಟಿ ರು. ಗಳಿಸಿತ್ತು.

ಒಡಿಶಾ : ಅಡ್ಡಮತದಾನ ಮಾಡಿದ್ದ 3 ಕಾಂಗ್ರೆಸ್‌ ಶಾಸಕರು ಅಮಾನತು

ಭುವನೇಶ್ವರ: ಸೋಮವಾರ ಒಡಿಶಾದಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಬಿಜೆಪಿ ಪರ ಮತ ಚಲಾಯಿಸಿದ್ದ ಮೂವರು ಕಾಂಗ್ರೆಸ್‌ ಶಾಸಕರನ್ನು ಪಕ್ಷ ಅಮಾನತು ಮಾಡಿದೆ. ಒಡಿಶಾದ ರಮೇಶ್‌ ಚಂದ್ರ ಜೆನಾ, ದಾಶರಥಿ ಗೊಮಾಂಗೊ ಸೋಫಿಯಾ ಫಿರ್ದೌಸ್ ಅವರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದರು. ಹೀಗಾಗಿ ‘ಪಕ್ಷಕ್ಕೆ ದ್ರೋಹ ಎಸಗಿದ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಕಾಂಗ್ರೆಸ್‌ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಹರ್ಯಾಣ ರಾಜ್ಯಸಭೆ ಎಲೆಕ್ಷನ್‌: ಕೈ, ಕಮಲ ತಲಾ ಒಂದರಲ್ಲಿ ಜಯ

ಚಂಡೀಗಢ: ಮಂಗಳವಾರ ಹೊರಬಿದ್ದ ಹರ್ಯಾಣ ರಾಜ್ಯಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌, ಬಿಜೆಪಿ ತಲಾ ಒಂದರಲ್ಲಿ ಜಯ ಗಳಿಸಿದೆ. ಬಿಜೆಪಿಯಿಂದ ಸಂಜಯ್ ಭಾಟಿಯಾ, ಕಾಂಗ್ರೆಸ್‌ನ ಕರ್ಮವೀರ್‌ ಸಿಂಗ್‌ ಗೆಲುವು ಸಾಧಿಸಿದ್ದಾರೆ.ಸೋಮವಾರ ಬಿಹಾರ, ಹರ್ಯಾಣ, ಒಡಿಶಾ ಸೇರಿ ಮೂರು ರಾಜ್ಯಗಳಲ್ಲಿ ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಹರ್ಯಾಣ ಹೊರತುಪಡಿಸಿ ಉಳಿದೆಡೆ ಸೋಮವಾರವೇ ಫಲಿತಾಂಶ ಹೊರಬಿದ್ದಿತ್ತು. ಕಾಂಗ್ರೆಸ್‌ ಶಾಸಕರು ಗೌಪ್ಯತೆ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ಕಾರಣ ಹರ್ಯಾಣದಲ್ಲಿ ಮತ ಎಣಿಕೆ ವಿಳಂಬವಾಗಿತ್ತು. 11 ಕ್ಷೇತ್ರಗಳಲ್ಲಿ ಬಿಜೆಪಿ 9, ಇತರರು ಎರಡರಲ್ಲಿ ಗೆಲುವು ಸಾಧಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

- ಇಂದು 5 ರಾಜ್ಯಗಳ ವಿಧಾನಸಭಾ ಫಲಿತಾಂಶ - ಪಂಚ ಗದ್ದುಗೆ ಯಾರಿಗೆ?
ಖಲಿಸ್ತಾನಿ ಧ್ವಜ ಪ್ರದರ್ಶನಕ್ಕೆ ಹಾಡು ನಿಲ್ಲಿಸಿ ಗಾಯಕ ದಿಲ್ಜೀತ್‌ ಗರಂ