ಪಿಟಿಐ ಬೆಂಗಳೂರು
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್), ‘4,700 ಕೆಜಿ ತೂಕದ ಜಿಸ್ಯಾಟ್-ಎನ್2 ಉಪಗ್ರಹವನ್ನು ನಿರೀಕ್ಷೆಯಂತೆ ನಿರ್ದಿಷ್ಟ ಕಕ್ಷೆಗೆ ಸೇರಿಸಲಾಗಿದೆ. ಜಿಯೋ-ಸಿಂಕ್ರೊನಸ್ ಟ್ರಾನ್ಸ್‌ಫರ್ ಕಕ್ಷೆಗೆ ಸೇರಿರುವ ಉಪಗ್ರಹವನ್ನು ಇಸ್ರೋ ನಿಯಂತ್ರಿಸುತ್ತಿದೆ. ಆರಂಭಿಕ ಮಾಹಿತಿಯ ಪ್ರಕಾರ ಉಪಗ್ರಹ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದೆ.
ಸಂವಹನ ಉಪಗ್ರಹವಾಗಿರುವ ಇದು ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಮತ್ತು ವಿಮಾನ ಸಂಪರ್ಕವನ್ನು ವೃದ್ಧಿಸುವುದರಲ್ಲಿ ಸಹಕಾರಿಯಾಗಿರಲಿದೆ. ಇದನ್ನು ಅಮೆರಿಕದ ಫ್ಲೋರಿಡಾದಿಂದ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್‌ನ ಫಾಲ್ಕನ್ 9 ರಾಕೆಟ್ ಮೂಲಕ ಸೋಮವಾರ ತಡರಾತ್ರಿ 12 ಗಂಟೆಗೆ (ಭಾರತೀಯ ಕಾಲಮಾನ) ಉಡಾವಣೆ ಮಾಡಲಾಗಿತ್ತು.