‘ಸೂಪರ್‌ನೋವಾ’ ಬೆಳಕು ಸೆರೆ ಹಿಡಿದ ಎಕ್ಸ್‌ಪೋಸ್ಯಾಟ್‌

KannadaprabhaNewsNetwork |  
Published : Jan 12, 2024, 01:46 AM ISTUpdated : Jan 12, 2024, 11:21 AM IST
ಇಸ್ರೋ | Kannada Prabha

ಸಾರಾಂಶ

ಕ್ಷ-ಕಿರಣಗಳ ಸಹಾಯದಿಂದ ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ‘ಎಕ್ಸ್‌ಪೋ ಸ್ಯಾಟ್‌’ ಉಪಗ್ರಹವು ‘ಕ್ಯಾಸ್ಸಿಯೋಪಿಯಾ ಎ’ ಎಂಬ ಸೂಪರ್‌ನೋವಾದ ಅವಶೇಷದ ಬೆಳಕನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಪಿಟಿಐ ಬೆಂಗಳೂರುಕ್ಷ-ಕಿರಣಗಳ ಸಹಾಯದಿಂದ ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ‘ಎಕ್ಸ್‌ಪೋ ಸ್ಯಾಟ್‌’ ಉಪಗ್ರಹವು ‘ಕ್ಯಾಸ್ಸಿಯೋಪಿಯಾ ಎ’ ಎಂಬ ಸೂಪರ್‌ನೋವಾದ ಅವಶೇಷದ ಬೆಳಕನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಅಂಡ್‌ ಟೈಮಿಂಗ್‌ (ಎಕ್ಸ್‌ಸ್ಪೆಕ್ಟ್‌) ಸಹಾಯದಿಂದ ಈ ಬೆಳಕನ್ನು ಸೆರೆ ಹಿಡಿದಿದೆ. ಜ.1ರಂದು ಉಡಾವಣೆಯಾಗಿರುವ ಎಕ್ಸ್‌ಪೋಸ್ಯಾಟ್‌ ಎರಡು ಉಪಕರಣಗಳನ್ನು ಹೊಂದಿದೆ. 

ಪೋಲಿಕ್ಸ್‌ ಹಾಗೂ ಹಾಗೂ ಎಕ್ಸ್‌ಸ್ಪೆಕ್ಟ್‌ ಎಂಬ ಈ ಉಪಕರಣಗಳು ಬ್ರಹ್ಮಾಂಡದ ಕ್ಷಕಿರಣಗಳನ್ನು ಅಧ್ಯಯನ ನಡೆಸುತ್ತವೆ. ಜ.5ರಂದು ಎಕ್ಸ್‌ಸ್ಪೆಕ್ಟ್‌ ಸಾಧನವು ಕ್ಯಾಸ್ಸಿಯೋಪಿಯಾ ಎ ಅನ್ನು ವೀಕ್ಷಿಸಿ ಬೆಳಕನ್ನು ಸೆರೆ ಹಿಡಿದಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಸ್ಸಾಂನಲ್ಲಿ ಇನ್ನು 18 ವರ್ಷ ಮೇಲಿನವರಿಗೆ ಆಧಾರ್‌ ಇಲ್ಲ
ಪರೀಕ್ಷಾ ಅಕ್ರಮ ವಿರುದ್ಧ 17ರಿಂದ ಕೈ ದೇಶವ್ಯಾಪಿ ಆಂದೋಲನ