ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ

Published : Dec 25, 2025, 07:50 AM IST
 isro

ಸಾರಾಂಶ

ಅಮೆರಿಕದ ಎಎಸ್‌ಟಿ ಸ್ಪೇಸ್‌ ಮೊಬೈಲ್‌ ಕಂಪನಿಗೆ ಸೇರಿದ ಬ್ಲ್ಯೂಬರ್ಡ್‌ ಬ್ಲಾಕ್-2 ಉಪಗ್ರಹವನ್ನು ಇಸ್ರೋದ ಎಲ್‌ವಿಎಂ3- ಎಂ6 ರಾಕೆಟ್‌ ಬುಧವಾರ ಯಶಸ್ವಿಯಾಗಿ ಕಕ್ಷೆ ಸೇರಿಸಿದೆ. ಇದು, ಇಸ್ರೋ ಇದುವರೆಗೆ ಕೆಳಕಕ್ಷೆಗೆ ಸೇರಿಸಿದ ಅತ್ಯಂತ ಭಾರದ ಉಪಗ್ರಹವಾಗಿದೆ.

 ಶ್ರೀಹರಿಕೋಟಾ: ಅಮೆರಿಕದ ಎಎಸ್‌ಟಿ ಸ್ಪೇಸ್‌ ಮೊಬೈಲ್‌ ಕಂಪನಿಗೆ ಸೇರಿದ ಬ್ಲ್ಯೂಬರ್ಡ್‌ ಬ್ಲಾಕ್-2 ಉಪಗ್ರಹವನ್ನು ಇಸ್ರೋದ ಎಲ್‌ವಿಎಂ3- ಎಂ6 ರಾಕೆಟ್‌ ಬುಧವಾರ ಯಶಸ್ವಿಯಾಗಿ ಕಕ್ಷೆ ಸೇರಿಸಿದೆ. ಇದು, ಇಸ್ರೋ ಇದುವರೆಗೆ ಕೆಳಕಕ್ಷೆಗೆ ಸೇರಿಸಿದ ಅತ್ಯಂತ ಭಾರದ ಉಪಗ್ರಹವಾಗಿದೆ. ಮುಂಬರುವ ಮಾನವ ಸಹಿತ ಗಗನಯಾನಕ್ಕೆ ಕೂಡಾ ಇಸ್ರೋ, ಇದೇ ರಾಕೆಟ್‌ ಬಳಕೆ ಮಾಡಲು ಉದ್ದೇಶಿಸಿರುವ ಕಾರಣ, ಬುಧವಾರ ಸಾಧನೆ ಇಸ್ರೋದ ಕನಸಿಗೆ ಮತ್ತಷ್ಟು ಬೆಂಬಲ ನೀಡಿದೆ.

ಬ್ಲ್ಯೂಬರ್ಡ್‌ ಬ್ಲಾಕ್‌-2 ಉಪಗ್ರಹ ಹೊತ್ತ ಬಾಹುಬಲಿ ಖ್ಯಾತಿಯ ಎಲ್‌ವಿಎಂ3-ಎಂಸಿ ರಾಕೆಟ್‌ ಬುಧವಾರ ಬೆಳಗ್ಗೆ 9.55ಕ್ಕೆ ನಭಕ್ಕೆ ನೆಗೆದು, 15 ನಿಮಿಷಗಳ ಬಳಿಕ ಉಪಗ್ರಹವನ್ನು ಯಶಸ್ವಿಯಾಗಿ ಕೆಳಹಂತದ ಕಕ್ಷೆಗೆ ಸೇರಿಸಿತು.

ಇಸ್ರೋದ ಈ ಸಾಧನೆಗೆ, ಬೆಂಗಳೂರು ಮೂಲದ ಸಂಸ್ಥೆಯ ಅಧ್ಯಕ್ಷ ನಾರಾಯಣನ್‌ ಮತ್ತು ಪ್ರಧಾನಿ ನರೇಂದ್ರ ಮೋದಯಾಗಿ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಉಪಗ್ರಹ ಹಿರಿಮೆ:

ಉಪಗ್ರಹದಿಂದಲೇ ನೇರವಾಗಿ ಮೊಬೈಲ್‌ಗೆ ಬ್ರ್ಯಾಡ್‌ಬ್ಯಾಂಡ್‌ ಸೇವೆ ಒದಗಿಸುವ ಸಲುವಾಗಿ ಅಮೆರಿಕದ ಎಎಸ್‌ಟಿ ಸ್ಪೇಸ್‌ ಮೊಬೈಲ್‌ ಹಲವು ಉಪಗ್ರಹಗಳನ್ನು ಹಾರಿಬಿಡಲು ನಿರ್ಧರಿಸಿದ್ದು, ಅದರ ಭಾಗವಾಗಿ ಇದೀಗ ಬ್ಲ್ಯೂಬರ್ಡ್‌ ಬ್ಲಾಕ್‌-2 ಉಪಗ್ರಹ ಹಾರಿಬಿಡಲಾಗಿದೆ. ಇದರಿಂದ ವಿಶ್ವದ ಯಾವುದೇ ಮೂಲೆಗೆ ಬೇಕಾದರು 4ಜಿ ಮತ್ತು 4ಜಿ ಬ್ರ್ಯಾಂಡ್‌ಬ್ಯಾಂಡ್‌ ಇಂಟರ್ನೆಟ್‌ ಸೇವೆಯನ್ನು ಯಾವುದೇ ಅಡೆತಡೆಯಿಲ್ಲದೆಯೇ ನೀಡಬಹುದಾಗಿದೆ. ಈ ಉಡ್ಡಯನದೊಂದಿಗೆ ಭಾರತ ಇದುವರೆಗೆ 34 ದೇಶಗಳ 434 ಉಪಗ್ರಹಗಳನ್ನು ಹಾರಿಬಿಟ್ಟಂತಾಗಿದೆ.

ಕನಸಿಗೆ ಬಲ:

43.5 ಮೀಟರ್‌ ಉದ್ದ, 6.4 ಲಕ್ಷ ಕೆಜಿ ತೂಕದ ಎಲ್‌ವಿಎಂ3- ಎಂಸಿ (ಈ ಹಿಂದಿನ ಜಿಎಸ್‌ಎಲ್‌ವಿ), 518 ಕಿ.ಮೀ ಎತ್ತರದ ಕೆಳಹಂತದ ಕಕ್ಷೆಗೆ 10000 ಕೆಜಿ ತೂಕದ ಉಪಗ್ರಹ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಬುಧವಾರ ಇದು ಅಮೆರಿಕದ 6100 ಕೆಜಿ ತೂಕದ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿತು. ಇದು ಭಾರತದ ನೆಲದಿಂದ ಇದುವರೆಗೆ ಹಾರಿಬಿಟ್ಟ ಅತಿ ಭಾರದ ಉಪಗ್ರಹವಾಗಿದೆ. ಈ ಹಿಂದೆ 4400 ಕೆಜಿ ತೂಕದ ಉಪಗ್ರಹವೇ ಇಸ್ರೋ ಹಾರಿಬಿಟ್ಟ ಅತಿಭಾರದ ಉಪಗ್ರಹವಾಗಿತ್ತು. ಭಾರತದ ಭವಿಷ್ಯದ ಮಾನವ ಸಹಿತ ಗಗನಯಾನಕ್ಕೂ ಇದೇ ರಾಕೆಟ್‌ ಬಳಸಲು ಉದ್ದೇಶಿಸಿದ್ದು, ಅದರ ಮತ್ತೊಂದು ಯಶಸ್ವಿ ಉಡ್ಡಯನ ಗಗನಯಾನದ ಕನಸಿಗೆ ಮತ್ತಷ್ಟು ನೀರೆರೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!
ಶಬರಿಮಲೆ ಚಿನ್ನ ಕದ್ದವರಿಗೆ ಸೋನಿಯಾ ಗಾಂಧಿ ನಂಟು-ಕೇರಳ ಸಿಎಂ ಪಿಣರಾಯಿ ಗಂಭೀರ ಆರೋಪ