ಬೆಲೆ ಏರಿಕೆಗೆ ಕಾಂಗ್ರೆಸ್ ವಿರುದ್ದ ಜೆಡಿಎಸ್ ಕಿಡಿ

KannadaprabhaNewsNetwork |  
Published : Nov 14, 2026, 01:45 AM IST
13ಕೆಜಿಎಲ್81ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ಜನವಿರೋದಿ ಬಗೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಕ್ಷೇತ್ರಾಧ್ಯಕ್ಷ ಪುಟ್ಟಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ಡಿಢೀರ್ ಬಸ್ ದರ ಏರಿಕೆಯಿಂದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಜಾತ್ಯತೀತ ಜನತಾದಳದ ವತಿಯಿಂದ ಶುಕ್ರವಾರ ಸಾವಿರಾರು ಮಂದಿ ಕಾರ್ಯಕರ್ತರು ಕ್ಷೇತ್ರಾಧ್ಯಕ್ಷ ಪುಟ್ಟಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ಡಿಢೀರ್ ಬಸ್ ದರ ಏರಿಕೆಯಿಂದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಜಾತ್ಯತೀತ ಜನತಾದಳದ ವತಿಯಿಂದ ಶುಕ್ರವಾರ ಸಾವಿರಾರು ಮಂದಿ ಕಾರ್ಯಕರ್ತರು ಕ್ಷೇತ್ರಾಧ್ಯಕ್ಷ ಪುಟ್ಟಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಪಟ್ಟಣದ ಮುಳ್ಳಾಚಮ್ಮ ದೇಗುಲದ ಮುಂಭಾಗಸಮಾವೇಶಗೊಂಡ ಜೆಡಿಎಸ್ ಕಾರ್ಯಕರ್ತರು ಪ್ರಾರಂಭದಲ್ಲಿ ಕಾಂಗ್ರೆಸ್ ಸರ್ಕಾರದ ದಿನಬಳಿಕೆ ವಸ್ತುಗಳ ದರ ಏರಿಕೆ ಮಾಡಿದೆ. ಹಾಲು- ಮೊಸರಿನ ದರ ಏರಿಸುವ ಮೂಲಕ, ದಿಢೀರ್ ಬಸ್ ದರ ಏರಿಕೆ ಮಾಡಿ ಜನಾಕ್ರೋಶಕ್ಕೆ ಗುರಿಯಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಮಾತನಾಡಿ ಜನರನ್ನು ದಿಕ್ಕು ತಪ್ಪಿಸುವ ಮೂಲಕ ಜನರ ಮೇಲೆ ಬರೆ ಎಳೆಯುತ್ತಿದೆ ಎಂದು ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಕೂಡಲೆ ಬೆಲೆಏರಿಕೆ ಗದಪ್ರಹಾರ ನಿಲ್ಲಿಸಬೇಕು, ಬಸ್ ಏರಿಕೆ ಧರ ಮತ್ತೊಮ್ಮೆ ಪರಶಿಲಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆಗಳನ್ನು ನೀಡಿದರು.

ಇದಕ್ಕೂ ಮುನ್ನ ದೇವಾಲಯ ಮುಂಭಾಗ ಪ್ರತಿಭಟನಾ ಮೆರವಣಿಗೆಗೆ ಕ್ಷೇತ್ರಾಧ್ಯಕ್ಷ ಪುಟ್ಟಸ್ವಾಮಿ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರು,ಹಿಂದುಳಿದವರು, ರೈತ ವಿರೋಧಿಯಾಗಿದ್ದು ಬೆಲೆ ಏರಿಕೆ ಮೂಲಕ ಬಡವರ ಬದುಕಲ್ಲಿ ಬರೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ನಿಜಕ್ಕೂ ಕಾಂಗ್ರೆಸ್ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ, ಶಾಶ್ವತ ಯೋಜನೆ ರೂಪಿಸುವಲ್ಲಿ, ಡ್ಯಾಂಗಳನ್ನು ನಿರ್ಮಿಸಿ ರೈತಪರ ಕಾಳಜಿ ತೋರುವಲ್ಲಿ ಬಡವರ ಪರ ಯೋಜನೆ ಜಾರಿಗೊಳಿಸಿ ಅವರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ, ಯುವಕರಿಗೆ ಉದ್ಯೋಗ ಕಲ್ಸಿಸುವಲ್ಲಿ ವಿಫಲವಾಗಿದೆ. ಇದೊಂದು ಜನ ವಿರೋದಿ ಸರ್ಕಾರ ಎಂದು ಕಿಡಿಕಾರಿದರು.

ಕೂಡಲೆ ಸರ್ಕಾರ ಹಾಲು ಹಾಗೂ ಬಸ್ ಏರಿಕೆ ಧರ ಪರಾಮರ್ಶೆ ಮಾಡದಿದ್ದಲ್ಲಿ ಬಿಜೆಪಿ ಜೊತೆಗೂಡಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಮೂಲಕ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ. ಮನೆಯ ಮಹಿಳಾ ಸದಸ್ಯರೊಬ್ಬರಿಗೆ 2ಸಾವಿರ ನೀಡಿ ಆ ಮನೆಯ ಹಲವು ಸದಸ್ಯರಿಂದ 8 ಸಾವಿರ ಕಸಿಯುತ್ತಿದೆ. 2 ಸಾವಿರ ನೀಡಿ 10ಸಾವಿರ ಕಸಿಯುವ ಚಾನಾಕ್ಷ ನಡೆ ಸರಿಯಲ್ಲ, ಜನಸಾಮಾನ್ಯರಿಗೆ ಇದರಿಂದ ಹೆಚ್ಚಿನ ಹೊರೆಯಾಗುತ್ತಿದೆ ಎಂದರು.

ರಾಜ್ಯಕಾರ್ಯದರ್ಶಿ ಶಿವಮಲ್ಲೆಗೌಡ, ಜೆಡಿಎಸ್ ಕೊಳ್ಳೇಗಾಲ ಘಟಕದ ಅಧ್ಯಕ್ಷ ಸುರೇಶ್, ರಾಜ್ಯ ಕಾರ್ಯದರ್ಶಿ ಶಿವಮಲ್ಲೇಗೌಡ್ರು, ಸಿದ್ದಯ್ಯನಪುರ ರಾಚಯ್ಯ, ಚಾಮರಾಜನಗರ ವಿಧಾನಸಬಾ ಕ್ಷೇತ್ರದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು), ಪಣ್ಯದಹುಂಡಿ ರಾಜು, ಸುಬ್ಬಣ್ಣ, ಯಳಂದೂರು ಎಸ್ಸಿ ಘಟಕ ಅಧ್ಯಕ್ಷ ಮಹದೇವ, ಟಿ.ಹೊಸೂರು ಶ್ರೀನಿವಾಸ್ ಜಿ., ದೇವರಹಳ್ಳಿ ರಾಜಶೇಖರ, ಬನ್ನಿಸಾರಿಗೆ ಸಿ.ಪ್ರಕಾಶ್, ಜನ್ನೂರು ರೇವಣ್ಣ, ಮಹದೇವಮೂರ್ತಿ, ರವಿಕುಮಾರ್, ಹೊಮ್ಮ ಮಹದೇವಸ್ವಾಮಿ, ಕೃಷ್ಣ, ಕಾಂತರಾಜು, ಶಂಕರಪ್ಪ ಕಾವುದವಾಡಿ ಶಂಕರಪ್ಪ, ಸುರೇಶ್, ಮಹದೇವಪ್ರಭು, ಜೆಡಿಎಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಮಂಗಳಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾರಾಣಿ, ತೇಜಶ್ವಿನಿ, ಯಳಂದೂರು ತಾಲ್ಲೂಕು ಅಧ್ಯಕ್ಷೆ ಪುಷ್ಪಲತಾ, ಮದ್ದೂರು ವೆಂಕಟಮ್ಮ, ಪುಟ್ಟಣ್ಣ, ತಿರುಮಕೂಡಲು ಶ್ರೀನಿವಾಸ್ ಇತರರು ಇದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಾದಪ್ಪ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಈಶ್ವರ್‌ಗೆ ಗೌರವ
ನವೆಂಬರ್‌ 17ರಿಂದ ಆಶಾಗಳ ಅನಿರ್ದಿಷ್ಟಾವಧಿ ಹೋರಾಟ