ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗಿಯಾಗಿ, ಎಲ್ಲವನ್ನೂ ಸುಲಲಿತವಾಗಿ ನಡೆಸಿಕೊಂಡು ಬಂದು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆ ಭಾಗದಲ್ಲಿ ಕೆಲಸ ಮಾಡಿ ಜನಪ್ರಿಯತೆ ಗಳಿಸಿದ ಈಶ್ವರ್ ಅವರಿಗೆ ನಮ್ಮ ಪಕ್ಷ ಇವತ್ತು ಒಳ್ಳೆಯ ಅಧಿಕಾರ ಕೊಟ್ಟಿದೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗಿಯಾಗಿ, ಎಲ್ಲವನ್ನೂ ಸುಲಲಿತವಾಗಿ ನಡೆಸಿಕೊಂಡು ಬಂದು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆ ಭಾಗದಲ್ಲಿ ಕೆಲಸ ಮಾಡಿ ಜನಪ್ರಿಯತೆ ಗಳಿಸಿದ ಈಶ್ವರ್ ಅವರಿಗೆ ನಮ್ಮ ಪಕ್ಷ ಇವತ್ತು ಒಳ್ಳೆಯ ಅಧಿಕಾರ ಕೊಟ್ಟಿದೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.

ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ನೂತನ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಈಶ್ವರ್ ಅವರನ್ನು ಸನ್ಮಾನಿಸಿದ ನಂತರ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಅವರು ರಾಜ್ಯದ್ಯಂತ ಹಲವು ನಿಗಮ ಮಂಡಳಿಗಳಿಗೆ 400 ಜನರನ್ನು ನೇಮಕ ಮಾಡಿದ್ದಾರೆ ಎಂದರು.

ಕರ್ನಾಟಕದಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಯಾರು ಬ್ಲಾಕ್ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೋ, ಅವರನ್ನು ಗುರುತಿಸಿ, ಮೊದಲನೇ ಆದ್ಯತೆ ಕೊಟ್ಟಿದ್ದಾರೆ. ಅದರಲ್ಲಿ ಈಶ್ವರ್ ಅವರು ಕೂಡ ಒಬ್ಬರು ಎಂದು ತಿಳಿಸಿದರು.

ಸಂಘಟನೆಯನ್ನು ಮಾಡುತ್ತ, ಪಕ್ಷವನ್ನು ಕಟ್ಟಿಕೊಂಡು ಇದುವರೆಗೂ ಬಂದಿರುವುದಕ್ಕೋಸ್ಕರ, ಅವರ ಸೇವೆಯನ್ನು ಮನಗೊಂಡು ಈ ಒಂದು ಪ್ರಾಧಿಕಾರದ ಸದಸ್ಯರನ್ನಾಗಿ ಅವರನ್ನು ನೇಮಕ ಮಾಡಿದ್ದಾರೆ. ಅದಕ್ಕೋಸ್ಕರ ನಮ್ಮ ಪಕ್ಷದ ಮುಖಂಡರಾದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಅವರಿಗೆ ಮತ್ತು ಎಲ್ಲರಿಗೂ ಕೂಡ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

ಇವರ ಅವಧಿಯಲ್ಲಿ ಮಲೆ ಮಹದೇಶ್ವರ ಪ್ರಾಧಿಕಾರ ಇನ್ನು ಹೆಚ್ಚು ಇವರನ್ನು ಉಪಯೋಗಿಸಿಕೊಂಡು, ಅಲ್ಲಿನ ಸಮಸ್ಯೆಗಳ ಬಗ್ಗೆ, ಜನರ ಸಮಸ್ಯೆ ಬಗ್ಗೆ, ಭಕ್ತಾದಿಗಳ ಬಗ್ಗೆ ಹೆಚ್ಚಿನ ಸೌಕರ್ಯ ಕೊಡುವಂತಹ ನಿಟ್ಟಿನಲ್ಲಿ ಇವರ ಸೇವೆಯನ್ನು ಪ್ರಾಧಿಕಾರದವರು ಉಪಯೋಗಿಸಿಕೊಳ್ಳಲಿ ಎಂದರು.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ನೂತನ ನಾಮನಿರ್ದೇಶಿತ ಸದಸ್ಯ ಈಶ್ವರ್ ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಸನ್ಮಾನಿಸಿದರು.

ಬಳಿಕ ಈಶ್ವರ್ ಮಾತನಾಡಿ, ನಾನು ಕಳೆದ 30-40 ವರ್ಷಗಳ ಕಾಲ ಸತತವಾಗಿ ರಾಜುಗೌಡರ ಕುಟುಂಬದ ಅಭಿಮಾನಿಯಾಗಿ, ಅನುಯಾಯಿಯಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇನೆ ಎಂದರು.

ಕಳೆದ 12 ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದು ನಮ್ಮ ನಾಯಕರಾದ ನರೇಂದ್ರ ರವರು. ಅವರ ಮಾರ್ಗದರ್ಶನದಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಜಿಲ್ಲೆಯಲ್ಲಿ, ಹನೂರು ಭಾಗದಲ್ಲಿ ಮೊದಲನೇ ಸ್ಥಾನ ಗಳಿಸಿಕೊಂಡು ಬಂದಿರುವುದರಲ್ಲಿ ಪಕ್ಷದ ಕಾರ್ಯಕ್ರಮವೇ ಮೊದಲನೆಯದಾಗಿತ್ತು.

ಅದರ ನಂತರ ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಮಾಜಿ ಶಾಸಕರು ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.

ಆರಾಧನ ಕಮಿಟಿ ಸದಸ್ಯ ಅಸ್ತೂರು, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಗಿರೀಶ್, ಮುಖಂಡರಾದ ಕೆ.ಈಶ್ವರ್, ಮೈಲ್ ಸ್ವಾಮಿ, ಮುರುಗೇಶ್, ಶ್ರೀಕಾಂತ್, ನಾಗರಾಜ್, ಗೌಡ್ರು ಪುಟ್ಟಪ್ಪ, ಪ್ರಕಾಶಣ್ಣ, ಚೇಲು ತಂಬಡಿ, ಮಾದೇಸ್ವಾಮಿ, ರಮೇಶ್, ಜಯಚಂದ್ರ, ಮಾಧು, ಪುಟ್ಟ ಮಾದಪ್ಪ,ರ್ರಾಮು, ರಾಜಾ, ರಾಜ್ ಗೋಪಾಲ್, ಪ್ರಭು ಪಾಲ್ಗೊಂಡಿದ್ದರು.