ರಾಂಚಿ: ಮನೆಕೆಲಸದವರ ಬಳಿ ಭಾರೀ ಪ್ರಮಾಣದ ಹಣದ ರಾಶಿ ಪತ್ತೆಯಾದ ಪ್ರಕರಣ ಸಂಬಂಧ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂರ ಆಪ್ತ ಸಹಾಯಕ ಸಂಜೀವ್ ಲಾಲ್ ಮತ್ತು ಸಂಜೀವ್‌ಲಾಲ್‌ನ ಮನೆ ಕೆಲಸದಾಳು ಜಹಾಂಗೀರ್ ಆಲಂರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಈ ನಡುವೆ ಸಂಜೀವ್ ಆಲಂಗೆ ಸೇರಿದ ಇನ್ನೂ ಹಲವು ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಈ ವೇಳೆ ಮತ್ತಷ್ಟು ನಗದು ಪತ್ತೆಯಾಗಿದೆ. ಇದರೊಂದಿಗೆ ಕಳೆದ 2 ದಿನಗಳಲ್ಲಿ ದಾಳಿ ವೇಳೆ ವಶಪಡಿಸಿಕೊಂಡ ನಗದಿನ ಮೊತ್ತ 36.75 ಕೋಟಿ ರು. ತಲುಪಿದೆ. ಕೆಲಸದಾಳಿನ ಮನೆಯಲ್ಲಿ 32 ಕೋಟಿ ರು. ಹಾಗೂ ಮಿಕ್ಕ 4.5 ಕೋಟಿ ರು. ಅನ್ಯ ಸ್ಥಳಗಳಲ್ಲಿ ಸಿಕ್ಕಿದೆ.