ಎಲ್ಲರ ಮನೆ ಕೆಲಸ ಮಾಡುತ್ತಿದ್ದ ನನಗೆ ಜನರ ಸಮಸ್ಯೆ ಅರಿವಿದೆ. ರಸ್ತೆ, ಕುಡಿಯುವ ನೀರು, ಮಹಿಳೆಯರಿಗೆ ಭದ್ರತೆ, ಯುವಕರಿಗೆ ಉದ್ಯೋಗ ನನ್ನ ಆದ್ಯತೆಯಾಗಿರಲಿದೆ.ಕಲಿತಾ ಮಾಝಿ, ಬಿಜೆಪಿ ಶಾಸಕಿ
ಕೋಲ್ಕತಾ: ರಾಜಕೀಯ ಕೇವಲ ಹಣವಂತರಿಗೆ, ಪ್ರಭಾವಿಗಳಿಗೆ ಮಾತ್ರ ಎನ್ನುವ ಹೊತ್ತಿನಲ್ಲಿ ಜೀವನಕ್ಕಾಗಿ ಅವರಿವರ ಮನೆ ಪಾತ್ರೆ ತಿಕ್ಕುತ್ತಿದ್ದ ಬಡ ಮಹಿಳೆಯೊಬ್ಬರು ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.
ಕೆಲವೇ ವರ್ಷಗಳ ಹಿಂದಿನವರೆಗೂ 4 ಮನೆಗಳಲ್ಲಿ ಪಾತ್ರೆ ತಿಕ್ಕಿ ಮಾಸಿಕ ಕೇವಲ 2500 ರು. ಸಂಪಾದಿಸುತ್ತಿದ್ದ ಕಲಿತಾ ಮಾಝಿ ಇದೀಗ ಆಸ್ಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 107692 ಮತಗಳನ್ನು ಪಡೆಯುವ ಮೂಲಕ ಟಿಎಂಸಿಯ ಶ್ಯಾಮಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದ್ದಾರೆ.ಯಾರೀಕೆ?: ಗುಸ್ಕಾರ ಪುರಸಭೆಯ ನಿವಾಸಿಯಾದ ಮಾಝಿ, ರಾಜಕೀಯಕ್ಕೆ ಪ್ರವೇಶಿಸುವ ಮೊದಲು 4 ಮನೆಗಳಲ್ಲಿ ಪಾತ್ರೆ ತಿಕ್ಕುವ ಕೆಲಸ ಮಾಡುತ್ತಿದ್ದರು. 2021 ರಲ್ಲಿ ಬಿಜೆಪಿ ಇವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿತ್ತು. ಆದರೆ ತೃಣಮೂಲ ಕಾಂಗ್ರೆಸ್‌ನ ಅಭೇದಾನಂದ ಥಂಡರ್ ವಿರುದ್ಧ 11,815 ಮತಗಳಿಂದ ಸೋತಿದ್ದರು. ಆಗಿನಿಂದಲೂ ಸ್ವಲ್ಪ ರಾಜಕೀಯದ ನಂಟು ಉಳಿಸಿಕೊಂಡಿದ್ದ ಕಲಿತಾಗೆ ಬಿಜೆಪಿ ಈ ಬಾರಿ ಮತ್ತೆ ಟಿಕೆಟ್ ನೀಡಿತ್ತು. ಈ ಬಾರಿ ಲಲಿತಾಗೆ ಅದೃಷ್ಟ ಒಲಿದುಬಂದಿದ್ದು ಅವರನ್ನು ನೇರವಾಗಿ ವಿಧಾನಸಭೆಗೆ ಕಳುಹಿಸಿಕೊಟ್ಟಿದೆ.ಮೋದಿಗೆ ಅರ್ಪಣೆ:
==