ಗೌರ್ನರ್‌ ಗೆಹಲೋತ್ ಮಿತವ್ಯಯ ಮಂತ್ರ!

KannadaprabhaNewsNetwork |  
Published : May 15, 2026, 01:45 AM IST
Governor

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಿತವ್ಯಯ ಘೋಷಣೆಗೆ ಬೆಂಬಲಿಸಿರುವ ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಈಗ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧಕ್ಕಿಳಿಸಿದ್ದಾರೆ

  ಬೆಂಗಳೂರು :  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಿತವ್ಯಯ ಘೋಷಣೆಗೆ ಬೆಂಬಲಿಸಿರುವ ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಈಗ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧಕ್ಕಿಳಿಸಿದ್ದಾರೆ.

9 ಬೆಂಗಾವಲು ವಾಹನಗಳಿದ್ದವು

ಈ ಮೊದಲು ರಾಜ್ಯಪಾಲ ಗೆಹಲೋತ್ ಅವರಿಗೆ ಅಂಬ್ಯುಲೆನ್ಸ್‌ ಸೇರಿದಂತೆ ಒಟ್ಟು 9 ಬೆಂಗಾವಲು ವಾಹನಗಳಿದ್ದವು. ಮಧ್ಯಪ್ರಾಚ್ಯ ಕದನದ ಕಾರಣ ತೈಲದ ತತ್ವಾರ ಉಂಟಾಗಿರುವ ಕಾರಣ, ಪ್ರಧಾನ ಮಂತ್ರಿ ಅವರು ಇಂಧನ ಮಿತ ಬಳಕೆಗೆ ಇತ್ತೀಚೆಗೆ ಕರೆ ನೀಡಿದ್ದರು ಹಾಗೂ ಖುದ್ದು ಬೆಂಗಾವಲು ವಾಹನಗಳ ಸಂಖ್ಯೆಯನ್ನು ಇಳಿಸಿಕೊಂಡಿದ್ದರು. ಅವರ ಘೋಷಣೆಗೆ ಬೆಂಬಲಿಸಿ ರಾಜ್ಯಪಾಲ ಗೆಹಲೋತ್ ಅವರು, ತಮ್ಮ ಬೆಂಗಾವಲಿಗೆ ಗುರುವಾರದಿಂದ 4 ವಾಹನಗಳನ್ನು ಮಾತ್ರ ಬಳಸಲು ಆರಂಭಿಸಿದ್ದಾರೆ.

‘ಎಕ್ಸ್’ ಖಾತೆಯಲ್ಲಿ ರಾಜ್ಯಪಾಲರು ವಿಡಿಯೋ ಸಮೇತ ಮಾಹಿತಿ

ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ರಾಜ್ಯಪಾಲರು ವಿಡಿಯೋ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ 2 ದಿನಗಳಿಂದ ಮೋದಿ ಅವರ ಕರೆಯ ಅನುಸಾರ ಅನೇಕ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು ಬೆಂಗಾವಲು ವಾಹನ ಕಡಿತ ಸೇರಿ ಅನೇಕ ಮಿತವ್ಯಯ ಕ್ರಮಗಳನ್ನು ಕೈಗೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಇಸಿ ಆಯ್ಕೆಯಿಂದ ಸಿಜೆಐ ಕೈ ಬಿಟ್ಟಿದ್ದಕ್ಕೆ ಸುಪ್ರೀಂ ಚಾಟಿ
ಭೋಜಶಾಲಾ-ಮಸೀದಿ ವಿವಾದ ತೀರ್ಪು ಇಂದು