ಕೇಜ್ರಿಯಿಂದ ಶೀಶ್‌ ಮಹಲ್ - 2 ನಿರ್ಮಾಣ : ಬಿಜೆಪಿ ಆರೋಪ

KannadaprabhaNewsNetwork |  
Published : Apr 26, 2026, 02:45 AM ISTUpdated : Apr 26, 2026, 06:07 AM IST
Arvind Kejriwal

ಸಾರಾಂಶ

ಕೇಂದ್ರ ಸರ್ಕಾರ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರು ತಮಗೆ ಲೋಧಿ ಎಸ್ಟೇಟ್‌ನಲ್ಲಿ ನೀಡಿದ ಬಂಗಲೆಯನ್ನು ಶೀಶ್‌ ಮಹಲ್ 2 ರೀತಿ ಐಷಾರಾಮಿಯಾಗಿ ಪರಿವರ್ತಿಸಿದ್ದಾರೆ. ಇದಕ್ಕೆ ಖಾಸಗಿ ಹಣ ಬಳಸಿದ್ದಾರೆ ಎಂದು ಬಿಜೆಪಿ ಶನಿವಾರ ಆರೋಪಿಸಿದ್ದು, ಈ ಹಣದ ಮೂಲವನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದೆ. 

 ನವದೆಹಲಿ: ಕೇಂದ್ರ ಸರ್ಕಾರ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರು ತಮಗೆ ಲೋಧಿ ಎಸ್ಟೇಟ್‌ನಲ್ಲಿ ನೀಡಿದ ಬಂಗಲೆಯನ್ನು ಶೀಶ್‌ ಮಹಲ್ 2 ರೀತಿ ಐಷಾರಾಮಿಯಾಗಿ ಪರಿವರ್ತಿಸಿದ್ದಾರೆ. ಇದಕ್ಕೆ ಖಾಸಗಿ ಹಣ ಬಳಸಿದ್ದಾರೆ ಎಂದು ಬಿಜೆಪಿ ಶನಿವಾರ ಆರೋಪಿಸಿದ್ದು, ಈ ಹಣದ ಮೂಲವನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದೆ. ಅಲ್ಲದೆ, ಕೇಜ್ರಿವಾಲ್‌ ಧುರಂಧರ್‌ ಸಿನಿಮಾದ ರೆಹಮಾನ್ ಡಕಾಯಿತ್ ಇದ್ದಂತೆ ಎಂದು ಕಿಡಿಕಾರಿದೆ.

ಈ ಹಿಂದೆ ಕೇಜ್ರಿವಾಲ್ ಸಿಎಂ ಆಗಿದ್ದಾಗ ಸಿವಿಲ್‌ ಲೈನ್ಸ್‌ನಲ್ಲಿನ ಬಂಗಲೆಯನ್ನು ಸರ್ಕಾರಿ ವೆಚ್ಚದಲ್ಲಿ ಐಷಾರಾಮಿಯನ್ನಾಗಿ ಪರಿವರ್ತಿಸಲಾಗಿತ್ತು ಎಂದು ಆರೋಪಿಸಿ ಅದನ್ನು ‘ಶೀಶ್‌ ಮಹಲ್‌’ ಎಂದು ಕರೆದಿತ್ತು. ಇದೀಗ ಸಿಎಂ ಹುದ್ದೆ ಬಿಟ್ಟ ನಂತರ ನೀಡಲಾಗಿದ್ದ ಲೋಧಿ ಎಸ್ಟೇಟ್‌ ಬಂಗಲೆಯನ್ನೂ ಇದೇ ರೀತಿ ಪರಿವರ್ತಿಸಿದ್ದಾರೆ. ಆದರೆ ಈ ಸಲ ಖಾಸಗಿ ಹಣ ಬಳಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಟೈಪ್ 7 ಬಂಗಲೆಯ ಚಿತ್ರಗಳನ್ನು ಬಿಡುಗಡೆ

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೆಹಲಿ ಲೋಕೋಪಯೋಗಿ ಸಚಿವ ಪರ್ವೇಶ್‌ ವರ್ಮಾ, ಕೇಂದ್ರವು ಆಪ್ ರಾಷ್ಟ್ರೀಯ ಪಕ್ಷದ ಮುಖ್ಯಸ್ಥರಾದ ಕೇಜ್ರಿವಾಲ್ ಅವರಿಗೆ ನೀಡಿದ ಟೈಪ್ 7 ಬಂಗಲೆಯ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅರಮನೆ ರೀತಿ ನಿರ್ಮಾಣವಾಗಿರುವ ಬಂಗಲೆಯನ್ನು ಕಾಣಬಹುದು. ಬಳಿಕ ಮಾತನಾಡಿದ ಅವರು ‘ಸರ್ಕಾರ ಬಂಗಲೆಗಳಿಗೆ ಇಷ್ಟೊಂದು ಹಣ ಖರ್ಚು ಮಾಡುವುದಿಲ್ಲ. ಇಲ್ಲಿ ಖಾಸಗಿ ಹಣವನ್ನು ಬಳಸಿ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಸೃಷ್ಟಿಸಲಾಗಿದೆ. 

 ದೆಹಲಿಯ ಧುರಂಧರ ಮತದಾರರು ಕೇಜ್ರಿವಾಲ್‌ರನ್ನು ಶೀಶ್ ಮಹಲ್‌ನಿಂದ ಹೊರಹಾಕಿದ ನಂತರ ಅವರು ಪಂಜಾಬ್‌ಗೆ ತೆರಳಿ ಅಲ್ಲಿ ಬಂಗಲೆಯನ್ನು ತಮ್ಮದಾಗಿಸಿಕೊಂಡರು. ಈಗ ಲೋಧಿ ಎಸ್ಟೇಟ್‌ನಲ್ಲಿ ಶೀಶ್ ಮಹಲ್ 2 ಅನ್ನು ಸಿದ್ಧಪಡಿಸಿದ್ದಾರೆ. ಅವರು ರೆಹಮಾನ್‌ ಡಕಾಯಿತ್‌ ಇದ್ದಂತೆ. ಈ ಬಂಗಲೆಗೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಮತ್ತು ಅದರ ಮೂಲ ಏನು ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

 ಅದು ನಕಲಿ ಚಿತ್ರ, ಬಿಜೆಪಿ ಆರೋಪ ಸುಳ್ಳು: ಆಪ್‌ 

ನವದೆಹಲಿ: ಪರ್ವೇಶ್‌ ವರ್ಮಾ ಬಿಡುಗಡೆ ಮಾಡಿದ ಚಿತ್ರಗಳನ್ನು ಆಪ್‌ ನಕಲಿ ಎಂದು ಕರೆದಿದೆ.

ಇದು ‘ಭಾರತೀಯ ಜೂಠಾ ಪಾರ್ಟಿ’ (ನಕಲಿ ಪಕ್ಷ). ನಕಲಿ ಫೋಟೋಗಳನ್ನು ಪ್ರಕಟಿಸಿ ಸುಳ್ಳು ಹರಡುವ ಮೂಲಕ ಅವರು ಹಳೆಯ ವಿಧಾನಗಳನ್ನೇ ಬಳಸುತ್ತಿದ್ದಾರೆ. ಇವು ಪ್ರಿಂಟರ್‌ಸೆಟ್‌ನಿಂದ ಡೌನ್‌ಲೋಡ್ ಮಾಡಿದ ಚಿತ್ರಗಳು’ ಎಂದು ಆಪ್‌ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹಾಗೂ ಮಾಜಿ ಸಿಎಂ ಆತಿಶಿ ಕಿಡಿ ಕಾರಿದ್ದಾರೆ.

ಆ ಚಿತ್ರಗಳನ್ನು ಪ್ರಸಾರ ಮಾಡುವ ಟಿವಿ ಚಾನಲ್‌ಗಳ ವಿರುದ್ಧ ಮಾನಹಾನಿ ದಾವೆ ಹೂಡುತ್ತೇವೆ ಎಂದು ಎಚ್ಚರಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮುಂಗಾರು ಮಳೆ ಶೇ.42 ಕೊರತೆ: ದೇಶಾದ್ಯಂತ ಇನ್ನು ಚೇತರಿಕೆ ಕಷ್ಟ!
ಯುಎಇನಲ್ಲೂ 15 ವರ್ಷ ಒಳಗಿನ ಮಕ್ಕಳಿಗೆ ಜಾಲತಾಣ ಬಳಕೆ ನಿರ್ಬಂಧ