ತಂದೆಯಿಂದಲೇ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ; ನಟಿ ಖುಷ್ಬು ಸುಂದರ್‌ ಸ್ಫೋಟಕ ಹೇಳಿಕೆ

KannadaprabhaNewsNetwork |  
Published : Aug 30, 2024, 01:14 AM ISTUpdated : Aug 30, 2024, 04:30 AM IST
ಖುಷ್ಬು | Kannada Prabha

ಸಾರಾಂಶ

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ವಿವಾದದ ಹಿನ್ನೆಲೆಯಲ್ಲಿ ನಟಿ ಖುಷ್ಬು ಸುಂದರ್‌ ತಾವು ತಮ್ಮ ತಂದೆಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಈ ದೌರ್ಜನ್ಯ ನಡೆದಿದ್ದು, ವೃತ್ತಿ ಜೀವನದಲ್ಲಿ ತೊಂದರೆ ಆಗಬಾರದು ಎಂದು ಈ ಹಿಂದೆ ಬಾಯ್ಬಿಡಲಿಲ್ಲ ಎಂದಿದ್ದಾರೆ.

ಚೆನ್ನೈ: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ವಿವಾದ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ನಟಿ, ರಾಜಕಾರಣಿ ಖುಷ್ಬು ಸುಂದರ್‌ ಪ್ರತಿಕ್ರಿಯಿಸಿದ್ದು, ತಾವು ತಮ್ಮ ತಂದೆಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಮೊದಲೇ ತಿಳಿಸಬೇಕಿತ್ತು ಎಂದಿದ್ದಾರೆ.

ಬಾಲ್ಯದಲ್ಲಿ ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಖುಷ್ಬು ಹಿಂದೆಯೇ ಹೇಳಿಕೊಂಡಿದ್ದರು. ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾತನಾಡಿದ್ದಾರೆ.

‘ಇಂದು ಮಾತನಾಡುತ್ತಿರೋ, ನಾಳೆ ಮಾತನಾಡುತ್ತಿರೋ ಎನ್ನುವುದು ವಿಚಾರವಲ್ಲ. ಆದರೆ ಮಾತನಾಡಿ. ತಕ್ಷಣವೇ ಮಾತನಾಡಿದರೆ ಪರಿಣಾಮಕಾರಿ ತನಿಖೆಗೆ ಸಹಾಯವಾಗುತ್ತದೆ. ಆರೋಪಿ ಅಪರಿಚಿತನಾಗಿರಲಿ, ಪರಿಚಿತನಾಗಿರಲಿ. ಆಕೆಗೆ ಸಹಾಯ ಬೇಕು. ಕೆಲವರು ನಾನು ತಂದೆಯಿಂದ ಶೋಷಣೆಗೊಳಗಾದ ಬಗ್ಗೆ ಹೇಳಿದಾಗ ಯಾಕೆ ಇಷ್ಟು ಸಮಯ ತೆಗೆದುಕೊಂಡೆ ಎಂದಿದ್ದರು. ನಾನು ಮುಂಚೆಯೇ ಮಾತನಾಡಬೇಕಿತ್ತು. ಒಪ್ಪುತ್ತೇನೆ. ಆದರೆ ನನಗೆ ಏನಾಯಿತು? ವೃತ್ತಿ ಜೀವನ ಕಟ್ಟಿಕೊಳ್ಳುವುದರಲ್ಲಿ ರಾಜಿಯಾಗಲಿಲ್ಲ. ಬಿದ್ದಾಗ ಮೇಲೆತ್ತಬೇಕಾದವರಿಂದಲೇ ದೌರ್ಜನ್ಯಕ್ಕೆ ಒಳಗಾಗದೆ’ ಎಂದು ಬರೆದುಕೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ