250 ವರ್ಷಗಳ ನಂತರ ಕೇರಳದಲ್ಲಿ ಕುಂಭಮೇಳ

Published : Feb 02, 2026, 09:56 AM IST
Kumbhamela

ಸಾರಾಂಶ

ಸುಮಾರು ಎರಡೂವರೆ ಶತಮಾನದ ಬಳಿಕ ಕೇರಳದಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿದೆ. ದಕ್ಷಿಣ ಗಂಗೆ ಎಂದೇ ಕರೆಯಲಾಗುವ ಭಾರತಪುಳ ನದಿಯ ತಟದಲ್ಲಿ ನಡೆಯುತ್ತಿರುವ ಮೇಳಕ್ಕೆ ಜ.18ರಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ ಅವರು ಚಾಲನೆ ನೀಡಿದ್ದರು.

ತಿರುವನಂತಪುರಂ: ಸುಮಾರು ಎರಡೂವರೆ ಶತಮಾನದ ಬಳಿಕ ಕೇರಳದಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿದೆ. ದಕ್ಷಿಣ ಗಂಗೆ ಎಂದೇ ಕರೆಯಲಾಗುವ ಭಾರತಪುಳ ನದಿಯ ತಟದಲ್ಲಿ ನಡೆಯುತ್ತಿರುವ ಮೇಳಕ್ಕೆ ಜ.18ರಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ ಅವರು ಚಾಲನೆ ನೀಡಿದ್ದರು. ಇದು 18 ದಿನ ನಡೆಯಲಿದ್ದು, ಈಗಾಗಲೇ ಸಾವಿರಾರು ಭಕ್ತರು ಮಾಮಾಂಕಂ ಮೈದಾನಕ್ಕೆ ಭೇಟಿ ನೀಡಿದ್ದಾರೆ.

12 ವರ್ಷಗಳಲ್ಲೊಮ್ಮೆ ಮೇಳ

ಉತ್ತರಭಾರತದಲ್ಲಿ ನಡೆಯುವ ಕುಂಭಮೇಳದಂತೆ ಇಲ್ಲೂ 12 ವರ್ಷಗಳಲ್ಲೊಮ್ಮೆ ಮೇಳ ನಡೆಯುತ್ತಿತ್ತು. ಆದರೆ ಬ್ರಿಟಿಷ್‌ ಆಡಳಿತದಲ್ಲಿ ಇದನ್ನು ನಿಲ್ಲಿಸಲಾಗಿತ್ತು. ಸ್ವಾತಂತ್ರ್ಯ ದೊರತಮೇಲೆ ಪುನಾರಂಭಗಳ ಯತ್ನಗಳು ನಡೆದಿದ್ದವಾದರೂ ಯಶಸ್ವಿಯಾಗಿರಲಿಲ್ಲ.

ರಾಜಕೀಯ ಲೆಕ್ಕಾಚಾರ:

250 ವರ್ಷಗಳ ಬಳಿಕ ಕೇರಳದಲ್ಲಿ ಕುಂಭಮೇಳವನ್ನು ಆರಂಭಿಸಿರುವುದ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ ಎಂಬ ವಿಶ್ಲೇಷಣೆಗಳಿವೆ. ಕೆಲ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ, ಹಿಂದೂಗಳ ಮತಗಳನ್ನು ಸೆಳೆಯಲು ಆಡಳಿತಾರೂಢ ಕಮ್ಯುನಿಸ್ಟ್‌ ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರೈಲ್ವೆಗೆ ₹2.77 ಲಕ್ಷ ಕೋಟಿ ಅನುದಾನ : ದಾಖಲೆ ಪ್ರಮಾಣದ ಹಣ
ತೆಂಗು, ಗೋಡಂಬಿ, ಶ್ರೀಗಂಧ ಕೃಷಿಗೆ ಕೇಂದ್ರ ಬಂಪರ್‌-ರೈತರ ಆದಾಯ ಹೆಚ್ಚಿಸಲು ಹಲವು ಕ್ರಮ