ಲಾಲು ಪುತ್ರನಿಂದ ಪತ್ನಿ ಮೇಲೆ ದೌರ್ಜನ್ಯ ಮೇಲ್ನೋಟಕ್ಕೆ ಸಾಬೀತು: ಕೋರ್ಟ್‌

KannadaprabhaNewsNetwork |  
Published : Oct 14, 2023, 01:01 AM IST

ಸಾರಾಂಶ

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ಹಾಗೂ ಬಿಹಾರ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಅವರು ತಮ್ಮ ಪತ್ನಿ ಐಶ್ವರ್ಯ ರಾಯ್‌ ಮೇಲೆ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪಟನಾ ಕೌಟುಂಬಿಕ ನ್ಯಾಯಾಲಯ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ

ಪಟನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ಹಾಗೂ ಬಿಹಾರ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಅವರು ತಮ್ಮ ಪತ್ನಿ ಐಶ್ವರ್ಯ ರಾಯ್‌ ಮೇಲೆ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪಟನಾ ಕೌಟುಂಬಿಕ ನ್ಯಾಯಾಲಯ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ ಹಾಗೂ ಆಕೆಗೆ ಬೇರೆ ಮನೆ ಮಾಡಿಕೊಡಲು ಸೂಚಿಸಿದೆ. ಐಶ್ವರ್ಯ ಸಲ್ಲಿಸಿದ್ದ ಕೌಟುಂಬಿಕ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಐಶ್ವರ್ಯ ಅವರು ತಮ್ಮ ಮನೆ ಪ್ರವೇಶಿಸುವುದನ್ನು ತಡೆಯುವ ಮೂಲಕ ತೇಜ್‌ ಅವರು ಐಶ್ವರ್ಯ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬುದು ಪ್ರಾಥಮಿಕವಾಗಿ ತಿಳಿದು ಬಂದಿದೆ’ ಎಂದಿದೆ. ಹೀಗಾಗಿ ಐಶ್ವರ್ಯ ಅವರಿಗೆ ರಕ್ಷಣೆ ನೀಡುವಂತೆ ಹಾಗೂ ಒಂದು ತಿಂಗಳೊಳಗಾಗಿ ಪ್ರತ್ಯೇಕ ವಸತಿ ವ್ಯವಸ್ಥೆ ಒದಗಿಸುವಂತೆ ಸೂಚಿಸಿದೆ. ಮನೆಯ ವಿದ್ಯುತ್‌ ಬಿಲ್‌, ನೀರು ಹಾಗೂ ಇತರ ತೇಜ್‌ ಭರಿಸಬೇಕು ಎಂದು ಆದೇಶಿಸಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ