ಟಿಸಿಎಸ್‌, ಇನ್ಫಿ, ವಿಪ್ರೋದಿಂದ 64,000 ಉದ್ಯೋಗಿಗಳಿಗೆ ಕೊಕ್‌

KannadaprabhaNewsNetwork |  
Published : Apr 21, 2024, 02:18 AM ISTUpdated : Apr 21, 2024, 09:14 AM IST
ಟೆಕ್‌ ಕಂಪನಿಗಳು | Kannada Prabha

ಸಾರಾಂಶ

ಒಂದೇ ವರ್ಷದಲ್ಲಿ ನೌಕರರ ಸಂಖ್ಯೆ ಕಡಿತಗೊಂಡ ಹಿನ್ನೆಲೆಯಲ್ಲಿ ಈ ವರ್ಷವೂ ಬಿಇ ಪದವೀಧರರಿಗೆ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣಿಸಿವೆ.

ಬೆಂಗಳೂರು: ಎಂಜಿನಿಯರಿಂಗ್‌ ಹಾಗೂ ತಾಂತ್ರಿಕ ಪದವೀಧರರನ್ನು ಕಳೆದ 2 ದಶಕಗಳಿಂದ ಭಾರಿ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದ ದೇಶದ ಮೂರು ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಟಿಸಿಎಸ್‌, ಇನ್ಫೋಸಿಸ್ ಹಾಗೂ ವಿಪ್ರೋ ಇದೀಗ ಉದ್ಯೋಗ ಕಡಿತ ಆರಂಭಿಸಿವೆ.

ಕಳೆದ ಹಣಕಾಸು ವರ್ಷದಲ್ಲಿ ಈ ಮೂರು ಕಂಪನಿಗಳ ಒಟ್ಟು ನೌಕರರ ಸಂಖ್ಯೆಯಲ್ಲಿ 64000ದಷ್ಟು ಇಳಿಕೆ ಕಂಡುಬಂದಿದೆ. ಇದರರ್ಥ- ಅಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ!

ಪ್ರಸಕ್ತ ಹಣಕಾಸು ವರ್ಷದಲ್ಲೂ ಬಿಇ ಪದವೀಧರರಿಗೆ ಶುಭ ಸೂಚನೆ ಕಂಡುಬರುತ್ತಿಲ್ಲ. ಏಕೆಂದರೆ, ಈ ಹಣಕಾಸು ವರ್ಷದಲ್ಲಿ ತನ್ನ ಆದಾಯ ಬೆಳವಣಿಗೆ ಶೇ.1ರಿಂದ ಶೇ.3ರಷ್ಟು ಮಾತ್ರವೇ ಇರುವ ಸಾಧ್ಯತೆ ಇದೆ ಎಂದು ಇನ್ಫೋಸಿಸ್ ಹೇಳಿಕೊಂಡಿದೆ. ತನ್ನ ಆದಾಯದಲ್ಲಿ ಶೇ.1.5ರಷ್ಟು ಕುಸಿತ ಕಂಡುಬರಬಹುದು. ಜೂನ್‌ ತ್ರೈಮಾಸಿಕದಲ್ಲಿ ಮಾತ್ರ ಶೇ.0.5ರಷ್ಟು ಏರಿಕೆಯಾಗಬಹುದು ಎಂದು ವಿಪ್ರೋ ಹೇಳಿದೆ. 

ಹೀಗಾಗಿ ಈ ಕಂಪನಿಗಳು ಹೊಸ ಉದ್ಯೋಗ ನೇಮಕಾತಿ ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಗಿ, ಹಾಲಿ ನೌಕರರ ಕಡಿತವನ್ನು ಹೆಚ್ಚಳ ಮಾಡಬಹುದು ಎಂಬ ಭೀತಿ ಆರಂಭವಾಗಿದೆ.ಕೋವಿಡ್‌ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ನೌಕರರನ್ನು ಕಂಪನಿಗಳು ನೇಮಕ ಮಾಡಿಕೊಂಡಿದ್ದವು. ಹೀಗಾಗಿ ಕಡಿತ ಮಾಡುತ್ತಿವೆ ಎಂದು ಕೆಲ ಖಾಸಗಿ ಸಲಹೆಗಾರರು ಹೇಳಿದರೆ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಕಂಡುಬರುವ ಸಾಧ್ಯತೆ ಕಂಡುಬರುವ ಕಾರಣ ಕಂಪನಿಗಳು ನೌಕರಿ ಕಡಿತ ಮಾಡುತ್ತಿವೆ ಎಂದು ಇನ್ನೂ ಕೆಲವರು ತಿಳಿಸುತ್ತಾರೆ. ಇನ್ನೂ ಕೆಲವರು ಎಐನಿಂದಾಗಿ ಈ ರೀತಿ ಆಗುತ್ತಿದೆ ಎನ್ನುತ್ತಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ