ವಾಷಿಂಗ್ಟನ್: ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಅಮೆರಿಕದಲ್ಲಿ ತನಿಖೆ ಎದುರಿಸುತ್ತಿರುವ ಅದಾನಿ ಗ್ರೂಪ್ ಸಂಸ್ಥೆಗೆ ನೆಮ್ಮದಿ ನೀಡುವ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ವಿದೇಶಿ ನೆಲದಲ್ಲಿನ ಭ್ರಷ್ಟಾಚಾರದ ತನಿಖೆಗೆ ಅವಕಾಶ ಮಾಡಿಕೊಡುವ ಐದು ದಶಕಗಳಷ್ಟು ಹಳೆಯ ಕಾನೂನಿಗೆ ತಡೆ ನೀಡುವ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಇದೇ ಕಾನೂನಿನಡಿ ಅದಾನಿ ಕಂಪನಿ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಕಳೆದ ವರ್ಷ ದೋಷಾರೋಪಣೆ ಸಲ್ಲಿಸಲಾಗಿತ್ತು.
==
ಸ್ಟೀಲ್ ಮೇಲೆ ಟ್ರಂಪ್ 25% ಸುಂಕ: ಇಯು ತೆರಿಗೆ ತಿರುಗೇಟು ಎಚ್ಚರಿಕೆವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗುತ್ತಿದ್ದಂತೆ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಸಾಲುಸಾಲು ತೆರಿಗೆಗಳನ್ನು ಘೋಷಿಸುತ್ತಿರುವ ಡೊನಾಲ್ಡ್ ಟ್ರಂಪ್ ಸ್ಟೀಲ್ ಹಾಗೂ ಅಲ್ಯುಮಿನಿಯಂ ಆಮದಿನ ಮೇಲೆ ಶೇ.25ರಷ್ಟು ಸುಂಕ ಹೇರಿದ್ದಾರೆ.
ಮೊದಲ ಅವಧಿಯಲ್ಲೂ ಇದೇ ಕತೆ:
==
ಟ್ರಂಪ್ ಯೋಜನೆಗೆ ಅರಬ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅಲ್ಲದೆ, ಜೋರ್ಡನ್ ರಾಜ ಅಬ್ದುಲ್ಲಾ II ವೈಟ್‌ಹೌಸ್‌ಗೆ ಭೇಟಿ ನೀಡುವ ಮುನ್ನಾದಿನ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಓಪನ್‌ಎಐ ಖರೀದಿಗೆ 8.45 ಲಕ್ಷ ಕೋಟಿ ರು. ಬಿಡ್ ಸಲ್ಲಿಸಿದ ಮಸ್ಕ್
ಎಲಾನ್ ಮಸ್ಕ್ ತಮ್ಮ ವಕೀಲರ ಮೂಲಕ ಒಪನ್ ಎಐ ಬೋರ್ಡ್ ಮುಂದೆ ಸೋಮವಾರ ಭಾರೀ ಮೊತ್ತದ ಖರೀದಿ ಆಫರ್ ನೀಡಿದ್ದರು. ಆದರೆ ಓಪನ್‌ಎಐ ಅನ್ನು ಮಾರಾಟಮಾಡುವ ಸಾಧ್ಯತೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಳ್ಳಿಹಾಕಿದ ಸಿಇಒ ಆಲ್ಟ್‌ಮನ್, ಈ ಆಫರ್‌ಗಾಗಿ ಧನ್ಯವಾದಗಳು. ಆದರೆ ನಾವು ಓಪನ್ ಎಐ ಅನ್ನು ಮಾರಾಟ ಮಾಡಲು ಇಚ್ಛಿಸುವುದಿಲ್ಲ. ಬದಲಾಗಿ ಮಸ್ಕ್ ಬಯಸಿದರೆ 84 ಸಾವಿರ ಕೋಟಿಗೆ ಸಾಮಾಜಿಕ ಜಾಲತಾಣ ''''''''ಎಕ್ಸ್'''''''' ಅನ್ನೇ ಖರೀದಿಸಲು ಸಿದ್ಧ ಎಂದು ಹೇಳಿದ್ದಾರೆ.ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಸ್ಕ್, ಆಲ್ಟ್‌ಮನ್ ಅವರನ್ನು ಮೋಸಗಾರ ಎಂದು ಕರೆದಿದ್ದಾರೆ. ಜತೆಗೆ, ಆಲ್ಟ್‌ಮನ್ ಹಗರಣ ಎಂದು ಪೋಸ್ಟ್ ಮಾಡಿದ್ದಾರೆ.
ಗೋಹತ್ಯೆ ನಿಷೇಧ: ಕೇಂದ್ರ ಸರ್ಕಾರಕ್ಕೆ 33 ದಿನಗಳ ಗಡುವಿತ್ತ ಶಂಕರಾಚಾರ್ಯಮಹಾಕುಂಭ ನಗರ: ದೇಶದಲ್ಲಿ ಗೋ ಹತ್ಯೆ ನಿಷೇಧಿಸಿ, ಗೋವುಗಳನ್ನು ರಾಷ್ಟ್ರಮಾತಾ ಎಂದು ಘೋಷಿಸಬೇಕು ಎಂದು ಉತ್ತರಾಖಂಡದ ಜ್ಯೋತಿಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ 33 ದಿನಗಳ ಗಡುವು ನೀಡಿದ್ದಾರೆ. ಒಂದು ವೇಳೆ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳದೇ ಹೋದಲ್ಲಿ ಮಾ.17ರ ನಂತರ ಕಠಿಣ ನಿಲುವು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಒಂದೂವರೆ ವರ್ಷಗಳಿಂದ ನಾವು ಹಸುವನ್ನು ರಾಷ್ಟ್ರಮಾತಾ ಎಂದು ಘೋಷಿಸಲು ಆಂದೋಲನವನ್ನು ನಡೆಸುತ್ತಿದ್ದೇವೆ. ಈಗ ನಾವು ಮಾಘ ಪೂರ್ಣಿಮೆಯ ಮರುದಿನದಿಂದ 33 ದಿನಗಳ ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದೇವೆ. ಈ ಯಾತ್ರೆ ಮಾರ್ಚ್ 17ರಂದು ದೆಹಲಿಗೆ ಹೋಗುವ ಮೂಲಕ ಪೂರ್ಣಗೊಳ್ಳಲಿದೆ. ಈ 33 ದಿನಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಮಾರ್ಚ್ 17ರಂದು ಸಂಜೆ 5 ಗಂಟೆಯ ನಂತರ ಕಠಿಣ ನಿಲುವು ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.
==ಸೆನ್ಸೆಕ್ಸ್ 1018 ಅಂಕ ಇಳಿಕೆ: ಟ್ರಂಪ್ ತೆರಿಗೆ ಶಾಕ್‌ಗೆ 5 ದಿನಕ್ಕೆ 17 ಲಕ್ಷ ಕೋಟಿ ನಷ್ಟಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 1018 ಅಂಕಗಳ ಭಾರೀ ಕುಸಿತ ಕಂಡು 76293ರಲ್ಲಿ ಮುಕ್ತಾಯವಾಗಿದೆ. ನಿಫ್ಟಿ 309 ಅಂಕ ಕುಸಿದು 23071 ಅಂಕಗಳಲ್ಲಿ ಕೊನೆಗೊಂಡಿದೆ.ವಿವಿಧ ದೇಶಗಳ ಮೇಲೆ ಅಮೆರಿಕ ಹೇರುತ್ತಿರುವ ತೆರಿಗೆ ಮತ್ತು ಅದಕ್ಕೆ ವಿದೇಶಗಳ ತಿರುಗೇಟು ಜಾಗತಿಕ ಷೇರುಪೇಟೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಕಳೆದ 5 ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟಾರೆ 2290 ಅಂಕ ಕುಸಿತ ಕಂಡಿದೆ. ಜೊತೆಗೆ ಷೇರುಪೇಟೆಯಲ್ಲಿ ನೊಂದಯಿತ ಕಂಪನಿಗಳ ಷೇರು ಮೌಲ್ಯ ಕುಸಿತದ ಕಾರಣ 5 ದಿನಗಳಲ್ಲಿ ಹೂಡಿಕೆದಾರರ 16.97 ಲಕ್ಷ ಕೋಟಿ ರು.ನಷ್ಟು ಸಂಪತ್ತು ಕರಗಿ ಹೋಗಿದೆ.
==ಗಲ್ಲು ಶಿಕ್ಷೆಗೊಳಗಾದ 544 ಕೈದಿಗಳು ಜೈಲಲ್ಲಿ: 32 ಜನರು ಕರ್ನಾಟಕದಲ್ಲಿನವದೆಹಲಿ: 2022ರ ಡಿ.31ರ ವೇಳೆಗೆ ದೇಶಾದ್ಯಂತ ವಿವಿಧ ಜೈಲುಗಳಲ್ಲಿ ಮರಣದಂಡನೆ ಶಿಕ್ಷೆಗೊಳಗಾದ 544 ಮಂದಿಯನ್ನು ಇರಿಸಲಾಗಿತ್ತು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದು, ‘2022ರ ಡಿ.31ರ ವೇಳೆಗೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಒಟ್ಟು 95 ಕೈದಿಗಳು ಜೈಲಿನಲ್ಲಿದ್ದರು. ನಂತರ ಗುಜರಾತ್ (49), ಜಾರ್ಖಂಡ್ ಮತ್ತು ಮಹಾರಾಷ್ಟ್ರ (45), ಮಧ್ಯಪ್ರದೇಶ (39) ಕರ್ನಾಟಕ (32), ಬಿಹಾರ (27),ಪಶ್ಚಿಮ ಬಂಗಾಳ (26), ಹರ್ಯಾಣ (21), ರಾಜಸ್ಥಾನ ಮತ್ತು ಉತ್ತರಾಖಂಡ (20), ಕೇರಳ (19), ಆಂಧ್ರಪ್ರದೇಶ (15) ತಮಿಳುನಾಡು (19), ದೆಹಲಿ (9), ಜಮ್ಮು ಕಾಶ್ಮೀರ (8) ಕೈದಿಗಳಿದ್ದರು’ ಎಂದಿದ್ದಾರೆ.