ಸುಲಿಗೆ ಮಾಡಿದ್ದ ಟಿಎಂಸಿಗನ ತಲೆ ಬೋಳಿಸಿದ ಜನ!

KannadaprabhaNewsNetwork |  
Published : Jun 08, 2026, 01:45 AM IST
ಟಿಎಂಸಿ | Kannada Prabha

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾಗ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಫಲಾನುಭವಿಗಳಿಂದ ಹಣ ಸುಲಿಗೆ (ಕಟ್‌ ಮನಿ) ಮಾಡಿದ್ದ ಎನ್ನಲಾದ ಟಿಎಂಸಿ ನಾಯಕನೊಬ್ಬನಿಗೆ, ತಲೆ ಬೋಳಿಸಿ ಶೂಗಳ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಭಾನುವಾರ ಹೌರಾದಲ್ಲಿ ನಡೆದಿದೆ.

ದೀದಿ ಅವಧಿಯಲ್ಲಿ ಫಲಾನುಭವಿಗಳ ಹಣ ಪೀಕಿದ್ದ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾಗ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಫಲಾನುಭವಿಗಳಿಂದ ಹಣ ಸುಲಿಗೆ (ಕಟ್‌ ಮನಿ) ಮಾಡಿದ್ದ ಎನ್ನಲಾದ ಟಿಎಂಸಿ ನಾಯಕನೊಬ್ಬನಿಗೆ, ತಲೆ ಬೋಳಿಸಿ ಶೂಗಳ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಭಾನುವಾರ ಹೌರಾದಲ್ಲಿ ನಡೆದಿದೆ.ಸನ್ನಾಶಿ ಮನ್ನಾ ಎಂಬ ಟಿಎಂಸಿ ನಾಯಕ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಸವಲತ್ತುಗಳನ್ನು ಪಡೆಯುವುದಕ್ಕೆ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಎಂದು ಅಮರ್ದಹಾ ಗ್ರಾಮದ ಜನರು ಆರೋಪಿಸಿದ್ದಾರೆ. ಅಲ್ಲದೇ ಮಾನ್ ಮನೆಯಲ್ಲಿ ಹಲವರ ಆಧಾರ್‌ ಕಾರ್ಡ್‌ ಮತ್ತು ಮನರೇಗಾ ಉದ್ಯೋಗ ಕಾರ್ಡ್‌ ಕೂಡ ಪತ್ತೆಯಾಗಿವೆ. ಆತನ ಮೇಲೆ ಆಕ್ರೋಶಿತರಾಗಿದ್ದ ಜನರು ತಲೆ ಬೋಳಿಸಿದ್ದಾರೆ. ಮಾತ್ರವದೇ ಶೂಗಳ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇತ್ತೀಚೆಗೆ ಮಮತಾ ನಿರ್ಗಮಿಸಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಅನೇಕ ಟಿಎಂಸಿಗರು ತಾವು ಮಮತಾ ಅವಧಿಯಲ್ಲಿ ಪೀಕಿದ್ದ ಭ್ರಷ್ಟಾಚಾರದ ಹಣ ಹಿಂತಿರುಗಿಸಿದ್ದರು.

==

ಬಂಧನ ಭೀತಿಯಿಂದ ಸೀರೆ ರಾಶೀ ಅಡಿ ಅವಿತ ಟಿಎಂಸಿ ನಾಯಕ ಚಕ್ರವರ್ತಿ ಸೆರೆ

ಕೋಲ್ಕತಾ: ಅಕ್ರಮವಾಗಿ ಲಂಚ ಪಡೆದ ಆರೋಪದಲ್ಲಿ ಬಂಧಿಸಲ್ಪಡುವ ಭೀತಿಯಿಂದ ಟಿಎಂಸಿ ನಾಯಕ ಬ್ರಹ್ಮಾನಂದ ಚಕ್ರವರ್ತಿ, ಬಟ್ಟೆ ಅಂಗಡಿಯೊಂದರ ಗೋದಾಮಿನಲ್ಲಿ ಸೀರೆ ರಾಶಿಗಳ ಅಡಿಯಲ್ಲಿ ಅವಿತಿದ್ದ ಘಟನೆ ನಡೆದಿದೆ. ಆದರೆ ಆ ಸ್ಥಳ ಪತ್ತೆ ಮಾಡಿದ ಪೊಲೀಸರು, ಚರ್ಕ್ರವರ್ತಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಸರ್ಕಾರದ ವಸತಿ ಯೋಜನೆ ನಿಧಿಯ ಹಣದಲ್ಲಿ ಅದರ ಫಲಾನುಭವಿಗಳಿಂದ ಪಾಲನ್ನು ಕೇಳುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು, ಪ್ರಕರಣ ದಾಖಲಾಗಿತ್ತು. ತಾವು ಬಂಧಿಸಲ್ಪಡುವುದು ಖಚಿತ ಎಂದರಿತ ಚಕ್ರವರ್ತಿ, ಹತ್ತಿರದ ಸೀರೆ ಅಂಗಡಿಯನ್ನು ಹೊಕ್ಕು, ಸೀರೆ ಅಟ್ಟಿಗಳನ್ನು ಮೈಮೇಲೆಳೆದುಕೊಂಡು ಕುಳಿತಿದ್ದರು. ಆದರೆ ಅಲ್ಲಿಗೆ ಬಂದ ಪೊಲೀಸರಿಗೆ ಸೀರೆಗಳನ್ನು ಸೆರಿಸಿ ಚಕ್ರವರ್ತಿಯನ್ನು ಹಿಡಿಯುವುದರಲ್ಲಿ ಹೆಚ್ಚು ಸಮಯ ಹಿಡಿಸಲಿಲ್ಲ.-

₹1 ಲಕ್ಷ ಮರಳಿಸಿದ

ಟಿಎಂಸಿ ಕೌನ್ಸಿಲರ್‌ಸ್ಥಳೀಯರಿಂದ ಅಕ್ರಮವಾಗಿ ವಸೂಲಿ ಮಾಡಿದ್ದ 1 ಲಕ್ಷ ರು.ವನ್ನು ಮಠಭಂಗ ಪುರಸಭೆಯ ಕೌನ್ಸಿಲರ್‌ ಆಗಿರುವ ಟಿಎಂಸಿಯ ಕಕೋಲಿ ಘೋಷ್‌ ಮರಳಿಸಿದ್ದಾರೆ. ಉಳಿದ ಹಣವನ್ನೂ ಕಂತುಗಳಲ್ಲಿ ನೀಡುವುದಾಗಿ ಭರವಸೆ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹೈಡ್ರಾ ಸ್ಥಾಪನೆಗೆ ಹಿಟ್ಲರ್‌ ಸ್ಫೂರ್ತಿ: ರೇವಂತ್ ವಿವಾದ
ಇಂದು ಇಂಡಿಯಾ ಕೂಟದ ಮಹತ್ವದ ಸಭೆ