ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದ ಅಂತ್ಯಕ್ಕೆ ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನ

KannadaprabhaNewsNetwork |  
Published : Feb 21, 2025, 12:46 AM ISTUpdated : Feb 21, 2025, 04:47 AM IST
ಅಪರೂಪ | Kannada Prabha

ಸಾರಾಂಶ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ, ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವವೆಂದೇ ಖ್ಯಾತವಾಗಿರುವ ಮಹಾಕುಂಭ ಮೇಳ ಫೆ.26ರ ಶಿವರಾತ್ರಿಯಂದು ಮುಕ್ತಾಯವಾಗಲಿದ್ದು, ಆ ಸಂದರ್ಭದಲ್ಲಿ ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನವೊಂದು ಘಟಿಸಲಿದೆ.

ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ, ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವವೆಂದೇ ಖ್ಯಾತವಾಗಿರುವ ಮಹಾಕುಂಭ ಮೇಳ ಫೆ.26ರ ಶಿವರಾತ್ರಿಯಂದು ಮುಕ್ತಾಯವಾಗಲಿದ್ದು, ಆ ಸಂದರ್ಭದಲ್ಲಿ ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನವೊಂದು ಘಟಿಸಲಿದೆ. ಅಂದು ಭಾರತದಿಂದ ಸೌರವ್ಯೂಹದ ಎಲ್ಲಾ 7 ಗ್ರಹಗಳು ಗೋಚರಿಸಲಿವೆ. ಈ ಹಿನ್ನೆಲೆಯಲ್ಲಿ ಮಹಾಕುಂಭಕ್ಕೆ ವೈಜ್ಞಾನಿಕತೆಯೂ ಜೋಡಿಸಿಕೊಂಡಿದ್ದು, ಜನರಲ್ಲಿ ಆಧ್ಯಾತ್ಮಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಈ ವರ್ಷ ಜನವರಿಯಲ್ಲಿ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್‌ ಗ್ರಹಗಳ ಗೋಚರತೆ ಆರಂಭವಾಯಿತು. ಫೆಬ್ರವರಿಯಲ್ಲಿ ಇವುಗಳ ಸಾಲಿಗೆ ಬುಧಗ್ರಹವೂ ಸೇರಲಿದ್ದು, ಫೆ.28ರಂದು ಎಲ್ಲಾ 7 ಗ್ರಹಗಳು ಸೂರ್ಯನ ಒಂದು ಬದಿಯಲ್ಲಿ ಜೋಡಿಸಲ್ಪಡುತ್ತವೆ.

ಅಂದು ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಗಳನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಮಂಕಾಗಿರುವುದರಿಂದ ಬೈನಾಕ್ಯುಲರ್ ಅಗತ್ಯ. ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯಕ್ಕೆ ಮೊದಲು ವೀಕ್ಷಣೆಗೆ ಉತ್ತಮ ಸಮಯ. ಖಗೋಳಶಾಸ್ತ್ರಜ್ಞರ ಪ್ರಕಾರ, 2025ರ ಆಗಸ್ಟ್ ಮಧ್ಯಭಾಗದಲ್ಲಿ ಹಗಲಿನ ವೇಳೆ ಇದೇ ರೀತಿ ದೃಶ್ಯವನ್ನು ನೋಡಲು ಮತ್ತೊಂದು ಅವಕಾಶ ಸಿಗಲಿದೆ. ಆಗ ಆಕಾಶದಲ್ಲಿ 6 ಗ್ರಹಗಳು ಗೋಚರಿಸಲಿವೆ.

ಕುಂಭ: ಯುವತಿಯರ ಸ್ನಾನ ದೃಶ್ಯ ಸೆರೆ ಹಿಡಿದು ಮಾರಿದರೆ ಕೇಸ್‌

ಲಖನೌ: ಮಹಾಕುಂಭದಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ವೀಡಿಯೊಗಳನ್ನು ಖರೀದಿಸುವವರನ್ನು ಮತ್ತು ಅಂತಹ ವೀಡಿಯೊಗಳನ್ನು ಮಾರಾಟ ಮಾಡುವವರನ್ನು ಬಂಧಿಸಲಾಗುವುದು ಎಂದು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಡಿಐಜಿ ವೈಭವ್ ಕೃಷ್ಣ ‘ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ಕುಂಭದಲ್ಲಿ ಸ್ನಾನ ಮಾಡುವ ಯುವತಿಯರ ಖಾಸಗಿ ಚಿತ್ರಗಳನ್ನು ಸೆರೆ ಹಿಡಿದು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿವೆ. ಅವುಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಇದುವರೆಗೆ ಕ್ರಮಕ್ಕಾಗಿ 103 ಖಾತೆಗಳನ್ನು ಗುರುತಿಸಲಾಗಿದೆ. ಮಹಿಳೆಯರ ಖಾಸಗಿತನ ಮತ್ತು ಗೌರವಕ್ಕೆ ಧಕ್ಕೆ ತರುವುದು ಕ್ರಿಮಿನಲ್ ಅಪರಾಧ’ ಎಂದು ತಿಳಿಸಿದ್ದಾರೆ.

PREV

Recommended Stories

ಗುಂಡಿ ಬಿದ್ದ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಇಲ್ಲ: ಸುಪ್ರೀಂ ತೀರ್ಪು
ಆರೋಗ್ಯ, ಜೀವ ವಿಮೆಗೆ ಶೂನ್ಯ ಜಿಎಸ್‌ಟಿಗೆ ಸರ್ಕಾರದ ಒಲವು