ಅಮೆರಿಕದಲ್ಲಿನ ಸ್ವಯಂ ಶ್ರೀಮಂತರಲ್ಲಿ ಜಯಶ್ರೀ: 64000 ಕೋಟಿ ರು.ಆಸ್ತಿ

KannadaprabhaNewsNetwork |  
Published : Jun 14, 2026, 03:15 AM ISTUpdated : Jun 14, 2026, 04:31 AM IST
Jayashri ullala

ಸಾರಾಂಶ

ಪ್ರಸಿದ್ಧ ನಿಯತಕಾಲಿಕೆ ಫೋರ್ಬ್ಸ್‌ ಬಿಡುಗಡೆ ಮಾಡಿದ 2026ನೇ ಸಾಲಿನ ಅಮೆರಿಕದ ಸ್ವಯಂ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಭಾರತ ಮೂಲದ ಜಯಶ್ರೀ ಉಳ್ಳಾಲ್‌ ಸ್ಥಾನ ಪಡೆದಿದ್ದಾರೆ. ಅರಿಸ್ಟಾ ನೆಟ್‌ವರ್ಕ್ಸ್‌ನ ಅಧ್ಯಕ್ಷೆ ಮತ್ತು ಸಿಇಒ ಆಗಿರುವ ಜಯಶ್ರೀ

ನವದೆಹಲಿ: ಪ್ರಸಿದ್ಧ ನಿಯತಕಾಲಿಕೆ ಫೋರ್ಬ್ಸ್‌ ಬಿಡುಗಡೆ ಮಾಡಿದ 2026ನೇ ಸಾಲಿನ ಅಮೆರಿಕದ ಸ್ವಯಂ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಭಾರತ ಮೂಲದ ಜಯಶ್ರೀ ಉಳ್ಳಾಲ್‌ ಸ್ಥಾನ ಪಡೆದಿದ್ದಾರೆ. ಅರಿಸ್ಟಾ ನೆಟ್‌ವರ್ಕ್ಸ್‌ನ ಅಧ್ಯಕ್ಷೆ ಮತ್ತು ಸಿಇಒ ಆಗಿರುವ ಜಯಶ್ರೀ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಅವರ ಆಸ್ತಿ ಅಂದಾಜು 64000 ಕೋಟಿ ರು.ನಷ್ಟಿದೆ. ಅರಿಸ್ಟಾ, ಕ್ರೌಡ್‌ ನೆಟ್‌ವರ್ಕಿಂಗ್‌ ಕಂಪನಿಯಾಗಿದೆ.

ರಜೇಲೂ ಕೆಲ್ಸ ಮಾಡಿದ ಭಾರತೀಯಗೆ ನಾರ್ವೆ ಕಂಪನಿ ಬಾಸ್‌ ತರಾಟೆ

ನವದೆಹಲಿ: ಉದ್ಯೋಗಿಗಳು ಹೆಚ್ಚೆಚ್ಚು ಕೆಲಸ ಮಾಡಬೇಕು, ರಜೆ ಹಾಕಬಾರದು ಎಂದು ಬಯಸುವ ಬಾಸ್‌ಗಳ ನಡುವೆ ನಾರ್ವೆಯಲ್ಲಿ ರಜಾ ದಿನ, ಸಮಯ ಮುಗಿದರೂ ಕೆಲಸ ಮಾಡ್ತಿದ್ದ ಭಾರತ ಮೂಲದ ಉದ್ಯೋಗಿಯೊಬ್ಬರಿಗೆ ಮ್ಯಾನೇಜರ್‌ ಬೈದು ಎಚ್ಚರಿಕೆ ಕೊಟ್ಟಿರುವ ಅಪರೂಪದ ಘಟನೆ ನಡೆದಿದೆ. 

ವಿನೋದ್‌ ಎನ್ನುವವರು ಜಾಲತಾಣದಲ್ಲಿ ನಾರ್ವೆಯಲ್ಲಿನ ಕೆಲಸ ಸಂಸ್ಕೃತಿ ಬಗ್ಗೆ ತಮ್ಮ ಸ್ವ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಭಾರತದಿಂದ 15 ವರ್ಷಗಳ ಹಿಂದೆ ನಾರ್ವೆಗೆ ತೆರಳಿದ್ದ ವಿನೋದ್‌ ಅಲ್ಲಿಯೂ ಭಾರತದ ಕೆಲಸ ಸಂಸ್ಕೃತಿ ಪಾಲಿಸುತ್ತಿದ್ದರು.. ವಾರಾಂತ್ಯ, ಸಮಯ ಮುಗಿದರೂ ಕೆಲಸ, ಹುಷಾರಿಲ್ಲದಿದ್ದರೂ ರಜೆ ಹಾಕುತ್ತಿರಲಿಲ್ಲ. 

 ಇದನ್ನೆಲ್ಲ ಗಮನಿಸಿದ್ದ ಬಾಸ್‌ ಒಮ್ಮೆ ಕಚೇರಿಗೆ ಕರೆದಿದ್ದರಂತೆ. ತಮ್ಮನ್ನು ಹೊಗಳುತ್ತಾರೆ ಎಂದು ಭಾವಿಸಿದ್ದ ವಿನೋದ್‌ಗೆ ಬಾಸ್‌ ನಡೆ ಅಚ್ಚರಿಗೆ ಕಾರಣಾಗಿತ್ತು. ‘ಉದ್ಯೋಗಿಗಳು ರಜೆ ತೆಗೆದುಕೊಳ್ಳುವುದು ಅತ್ಯಗತ್ಯ. ರಜೆ ಹಾಕದೇ ಕೆಲಸ ಮಾಡುವುದು ಕಿರಿಯ ಉದ್ಯೋಗಿಗಳಿಗೂ ತಪ್ಪು ಸಂದೇಶ. ಇನ್ನೊಂದು ಸಲ ಹೀಗೆ ಮಾಡಿದರೆ ಸುಮ್ಮನಿರಲ್ಲ’ ಎಂದು ಎಚ್ಚರಿಸಿದ್ದರು ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಭಾರೀ ವೈರಲ್‌ ಆಗಿದ್ದು ಬಹುತೇಕರು ನಾರ್ವೆಯಲ್ಲಿನ ಔದ್ಯೋಗಿಕ ವಾತಾವರಣ ಶ್ಲಾಘಿಸಿದ್ದಾರೆ.

ನೇಮಕಾತಿ ಹಗರಣ: ಟಿಎಂಸಿ ಶಾಸಕ ಮಿತ್ರಾ ಮನೆ ಮೇಲೆ ಇ.ಡಿ. ದಾಳಿ

ಕೋಲ್ಕತಾ: ಪುರಸಭೆ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಹಾಲಿ ಟಿಎಂಸಿ ಶಾಸಕ ಮದನ್‌ ಮಿತ್ರಾ ಅವರ ಮನೆ ಸೇರಿದಂತೆ 7 ಕಡೆಗಳಲ್ಲಿ ಜಾರಿ ನಿರ್ದೇಶಾನಲಯದ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪುರಸಭೆಯಲ್ಲಿ ಅಕ್ರಮವಾಗಿ 125 ಉದ್ಯೋಗಿಗಳ ನೇಮಕಾತಿ ನಡೆಸಿ, ಅವರಿಂದ ಲಂಚದ ರೂಪದಲ್ಲಿ ಚಿನ್ನ ಮತ್ತು ನಗದು ಪಡೆದಿರುವ ಆರೋಪ ಮಿತ್ರಾ ಮೇಲೆ ಕೇಳಿಬಂದಿತ್ತು. ಈ ಹಿನ್ನೆಲೆ ಮಿತ್ರಾ ಅವರ ಭವಾನಿಪುರದ ನಿವಾಸ ಸೇರಿದಂತೆ 7 ಕಡೆ ದಾಳಿ ನಡೆದಿದೆ. ಬಂಗಾಳದಾದ್ಯಂತ ಉದ್ಯೋಗ ಕೊಡಿಸುವ ನೆಪದಲ್ಲಿ ಆಕಾಂಕ್ಷಿಗಳಿಂದ 200 ಕೋಟಿ ರು.ಗೂ ಹೆಚ್ಚಿನ ಹಣ ಪೀಕಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಉದ್ಯಮಿ ಅಯಾನ್‌ ಸಿಲ್‌ ಎಂಬಾತ ನೀಡಿದ್ದ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆದಿದೆ.

ಅಖಿಲೇಶ್‌ ಆರೋಪ ಹಿನ್ನೆಲೆ ರಾಮಮಂದಿರ ದೇಣಿಗೆ ಕಾಣೆ ಕೇಸ್‌ ಬಗ್ಗೆ ತನಿಖೆಗೆ ಎಸ್‌ಐಟಿ

ಲಖನೌ: ‘ಅಯೋಧ್ಯೆಯ ರಾಮ ಮಂದಿರಕ್ಕೆಂದು ಸಂಗ್ರಹಿಸಲಾಗಿದ್ದ ದೇಣಿಗೆಯಿಂದ ಕೋಟ್ಯಂತರ ರುಪಾಯಿ ಕಾಣೆಯಾಗಿದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಆರೋಪಿಸಿದ ಬೆನ್ನಲ್ಲೇ ಅದರ ತನಿಖೆಗೆ ಉತ್ತರಪ್ರದೇಶ ಸರ್ಕಾರ ವಿಶೇಷ ತಂಡವನ್ನು ರಚಿಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮನವಿಯಂತೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ಎಸ್‌ಐಟಿ ರಚನೆಯ ಆದೇಶ ಹೊರಡಿಸಿದ್ದಾರೆ.  

ಈ ತಂಡದಲ್ಲಿ ಲಖನೌನ ವಿಭಾಗೀಯ ಆಯುಕ್ತರಾಗಿರುವ ಐಎಎಸ್‌ ಅಧಿಕಾರಿ ವಿಜಯ್‌ ವಿಶ್ವಾಸ್‌ ಪಂಥ್‌, ಪೊಲೀಸ್ ಮಹಾನಿರ್ದೇಶಕ ಕಿರಣ್‌ ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್‌ ರತನ್‌ ಇರಲಿದ್ದಾರೆ. ಅತ್ತ ಕಾಂಗ್ರೆಸ್‌, ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪುರುಷ ಶವ ಬಗ್ಗೆ ಕೀಳು ಹೇಳಿಕೆ ನೀಡಿದ್ದ ವೈದ್ಯೆಗೆ ಕಡ್ಡಾಯ ರಜೆ
14 ದಿನ ಹಡಗಿನಲ್ಲಿದ್ದ ಕ್ಷಿಪಣಿ ಸಿಡಿತಲೆ ಹೊರತೆಗೆದ ಸೇನೆ