ಭಾರತದ ಜೈಲುಗಳಲ್ಲಿ ಸಾಮರ್ಥ್ಯ ಮೀರಿ ಕೈದಿಗಳನ್ನು ತುಂಬಲಾಗಿದ್ದು, ದೇಶಾದ್ಯಂತ ಬಹುತೇಕ ಎಲ್ಲಾ ಸೆರೆಮನೆಗಳು ತುಂಬಿ ತುಳುಕುತ್ತಿವೆ. 2024ರಲ್ಲಿ ಅವುಗಳು ಶೇ.112.7ರಷ್ಟು ಭರ್ತಿಯಾಗಿದ್ದವು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ದೇಶದ 609 ಜೈಲುಗಳಲ್ಲಿ ಈ ಸ್ಥಿತಿಯಿದೆ. ಅವುಗಳ ಪೈಕಿ ದೆಹಲಿಯ ಸೆರೆಮನೆಗಳು ಶೇ.194.6ರಷ್ಟು ಭರ್ತಿಯಾಗಿವೆ

ನವದೆಹಲಿ: ಭಾರತದ ಜೈಲುಗಳಲ್ಲಿ ಸಾಮರ್ಥ್ಯ ಮೀರಿ ಕೈದಿಗಳನ್ನು ತುಂಬಲಾಗಿದ್ದು, ದೇಶಾದ್ಯಂತ ಬಹುತೇಕ ಎಲ್ಲಾ ಸೆರೆಮನೆಗಳು ತುಂಬಿ ತುಳುಕುತ್ತಿವೆ. 2024ರಲ್ಲಿ ಅವುಗಳು ಶೇ.112.7ರಷ್ಟು ಭರ್ತಿಯಾಗಿದ್ದವು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ದೇಶದ 609 ಜೈಲುಗಳಲ್ಲಿ ಈ ಸ್ಥಿತಿ

 ದೇಶದ 609 ಜೈಲುಗಳಲ್ಲಿ ಈ ಸ್ಥಿತಿಯಿದೆ. ಅವುಗಳ ಪೈಕಿ ದೆಹಲಿಯ ಸೆರೆಮನೆಗಳು ಶೇ.194.6ರಷ್ಟು ಭರ್ತಿಯಾಗಿವೆ ಎಂದು ಬುಧವಾರ ರಾಜ್ಯಸಭೆಯಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಜೈಲುಗಳಲ್ಲಿ ಒಟ್ಟು 4,53,769 ಕೈದಿಗಳನ್ನಿಡಬಹುದು

ದೇಶಾದ್ಯಂತ ಇರುವ ಜೈಲುಗಳಲ್ಲಿ ಒಟ್ಟು 4,53,769 ಕೈದಿಗಳನ್ನಿಡಬಹುದು. ಆದರೆ 2024ರ ಡಿ.31ರ ದತ್ತಾಂಶದ ಪ್ರಕಾರ ಈ ಸಂಖ್ಯೆ 5,11,542 ಇದೆ. ಅರ್ಥಾತ್‌, ಇರಬೇಕಾದುದಕ್ಕಿಂತ 57,773 ಕೈದಿಗಳು ಅಧಿಕವಿದ್ದಾರೆ. ದೆಹಲಿ ಜೈಲುಗಳ ಸಾಮರ್ಥ್ಯ 10,026 ಇದ್ದು, ಅಲ್ಲಿರುವುದು 19,512(ಶೇ.194.6) ಕೈದಿಗಳು. ಮೇಘಾಲಯದಲ್ಲಿ 860ರ ಬದಲು 1,406(ಶೇ.163.5ರಷ್ಟು ಹೆಚ್ಚು), ಜಮ್ಮು ಕಾಶ್ಮೀರದಲ್ಲಿ 3,629ರ ಬದಲು 5,383 (ಶೇ.148.3ರಷ್ಟು ಅಧಿಕ) ಜೈಲುಹಕ್ಕಿಗಳಿದ್ದಾರೆ.