ಎಐ ರಚಿತ ನಕಲಿ ತೀರ್ಪಿಗೆ ಸುಪ್ರೀಂ ಕಿಡಿ

KannadaprabhaNewsNetwork |  
Published : Jul 03, 2026, 02:00 AM ISTUpdated : Jul 03, 2026, 04:31 AM IST
supreme court

ಸಾರಾಂಶ

ಎಐನಿಂದ ರಚಿಸಿದ ಅಸ್ತಿತ್ವದಲ್ಲಿಲ್ಲದ, ನಕಲಿ ಮತ್ತು ಕಾಲ್ಪನಿಕ ತೀರ್ಪುಗಳನ್ನು ಸಹಿಸಲು ಸಾಧ್ಯವಿಲ್ಲ. ಇಂಥ ತೀರ್ಪುಗಳು ಬಹಳ ಅಪಾಯಕಾರಿ. ಅದು ನ್ಯಾಯದ ಜೀವನಾಡಿಯನ್ನೇ ನಾಶಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ತೀಕ್ಷ್ಣವಾಗಿ ನುಡಿದಿದೆ.

 ನವದೆಹಲಿ :  ಎಐನಿಂದ ರಚಿಸಿದ ಅಸ್ತಿತ್ವದಲ್ಲಿಲ್ಲದ, ನಕಲಿ ಮತ್ತು ಕಾಲ್ಪನಿಕ ತೀರ್ಪುಗಳನ್ನು ಸಹಿಸಲು ಸಾಧ್ಯವಿಲ್ಲ. ಇಂಥ ತೀರ್ಪುಗಳು ಬಹಳ ಅಪಾಯಕಾರಿ. ಅದು ನ್ಯಾಯದ ಜೀವನಾಡಿಯನ್ನೇ ನಾಶಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ತೀಕ್ಷ್ಣವಾಗಿ ನುಡಿದಿದೆ. 

 ಇದೇ ವೇಳೆ, ಎಐ ಬಳಸಿ ನಕಲಿ ತೀರ್ಪು ನೀಡಿದ ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್‌ನ (ಎನ್‌ಸಿಎಲ್‌ಟಿ) ಆದೇಶವನ್ನೇ ರದ್ದುಗೊಳಿಸಿದೆ. ಪೂಜಾ ರಮೇಶ್ ಸಿಂಗ್ ಮತ್ತು ಜಮ್ಮು-ಕಾಶ್ಮೀರ ಬ್ಯಾಂಕ್ ನಡುವಿನ ದಿವಾಳಿತನ ಪ್ರಕರಣದಲ್ಲಿ, ಎನ್‌ಸಿಎಲ್‌ಟಿಯ ಮುಂಬೈ ಪೀಠ ಎಐ ಬಳಸಿ ತೀರ್ಪು ನೀಡಿತ್ತು. 

ತೀರ್ಪಿನಲ್ಲಿ ಉಲ್ಲೇಖಿಸಿದ ಅಂಶಗಳು ಸಂಪೂರ್ಣ ನಕಲಿ

 ಬಳಿಕ ತೀರ್ಪಿನಲ್ಲಿ ಉಲ್ಲೇಖಿಸಿದ ಅಂಶಗಳು ಸಂಪೂರ್ಣ ನಕಲಿ ಎಂದು ತಿಳಿದುಬಂದಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ. ಎಸ್‌. ನರಸಿಂಹ ಹಾಗೂ ನ್ಯಾ. ಅಲೋಕ್‌ ಆರಾಧೆ ಅವರ ಪೀಠ, ‘ಕಾನೂನು ಕ್ಷೇತ್ರದಲ್ಲಿ ಎಐನಿಂದ ನಕಲಿ, ಅಸ್ತಿತ್ವದಲ್ಲಿಲ್ಲದ ಮತ್ತು ಕಾಲ್ಪನಿಕ ಅಂಶಗಳನ್ನು ಸೃಷ್ಟಿಸಿ ಅವುಗಳನ್ನು ತೀರ್ಪುಗಳಂತೆ ಬಳಸುವುದು ಮಿಥೈಲ್ ಐಸೋಸಯನೇಟ್ ಅನಿಲ ಬಿಡುಗಡೆ ಮಾಡಿದಂತೆ.  

ಅದು ಕಣ್ಣಿಗೆ ಕಾಣುವುದಿಲ್ಲ, ಆದರೆ ಬಹಳ ಅಪಾಯಕಾರಿ

ಅದು ಕಣ್ಣಿಗೆ ಕಾಣುವುದಿಲ್ಲ, ಆದರೆ ಬಹಳ ಅಪಾಯಕಾರಿ. ಅದು ನ್ಯಾಯದ ಜೀವನಾಡಿಯನ್ನೇ ನಾಶಪಡಿಸುತ್ತದೆ. ಕೋರ್ಟುಗಳು ಎಐನ ನಕಲಿ ತೀರ್ಪುಗಳನ್ನು ಉಲ್ಲೇಖಿಸುವುದನ್ನು ಅಥವಾ ಬಳಸುವುದನ್ನು ಸಹಿಸಲಾಗದು’ ಎಂದು ಸ್ಪಷ್ಟಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತ-ಜಪಾನ್‌ ವಿವಿಧ ಒಪ್ಪಂದಗಳಿಗೆ ಅಂಕಿತ
* ಕಚ್ಚಾತೈಲ ಬೆಲೆ ಕಮ್ಮಿ ಇದ್ದರೆ ಪೆಟ್ರೋಲ್‌ ಬೆಲೆ ಇಳಿಕೆ: ಪುರಿ