ಮಣಿಪುರದಲ್ಲಿ ಸರ್ಕಾರ ರಚನೆಗೆ 44 ಶಾಸಕರ ಬೆಂಬಲ : ಬಿಜೆಪಿ

KannadaprabhaNewsNetwork |  
Published : May 29, 2025, 02:09 AM ISTUpdated : May 29, 2025, 04:29 AM IST
BJP Flag

ಸಾರಾಂಶ

ಮಣಿಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ಘಟಿಸಿದ್ದು, 44 ಶಾಸಕರ ನೆರವಿನಿಂದ ಹೊಸ ಸರ್ಕಾರವನ್ನು ರಚಿಸಲು ಸಿದ್ಧವಾಗಿದ್ದೇವೆ ಎಂದು ಶಾಸಕ ತೊಕ್ಚೊಂ ರಾಧೇಶ್ಯಾಮ್ ಸಿಂಗ್ ರಾಜ್ಯಪಾಲ ಅಜಯ್‌ ಕುಮಾರ್ ಭಲ್ಲಾಗೆ ಮಾಹಿತಿ ನೀಡಿದ್ದಾರೆ.

ಇಂಫಾಲ: ಮೈತೇಯಿ, ಕುಕಿಗಳ ನಡುವಿನ ನಡುವಿನ ಸಂಘರ್ಷ, ಮುಖ್ಯಮಂತ್ರಿ ಎನ್‌ ಬಿರೇನ್ ಸಿಂಗ್ ರಾಜೀನಾಮೆಯಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದ ಮಣಿಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ಘಟಿಸಿದ್ದು, 44 ಶಾಸಕರ ನೆರವಿನಿಂದ ಹೊಸ ಸರ್ಕಾರವನ್ನು ರಚಿಸಲು ಸಿದ್ಧವಾಗಿದ್ದೇವೆ ಎಂದು ಶಾಸಕ ತೊಕ್ಚೊಂ ರಾಧೇಶ್ಯಾಮ್ ಸಿಂಗ್ ರಾಜ್ಯಪಾಲ ಅಜಯ್‌ ಕುಮಾರ್ ಭಲ್ಲಾಗೆ ಮಾಹಿತಿ ನೀಡಿದ್ದಾರೆ.

ಬುಧವಾರ ಶಾಸಕ ಸಿಂಗ್ ಮತ್ತು ಇತರ 9 ಶಾಸಕರು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ, ಸರ್ಕಾರ ರಚನೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಶಾಸಕ, ‘ ಜನರ ಆಸೆಯಂತೆ 44 ಶಾಸಕರು ಸರ್ಕಾರ ರಚಿಸಲು ಉತ್ಸುಕರಾಗಿದ್ದಾರೆ. ಇದನ್ನು ನಾವು ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದೇವೆ’ ಎಂದರು.

ಇನ್ನು ಸರ್ಕಾರ ರಚಿಸಲು ಬಿಜೆಪಿ ಹಕ್ಕು ಮಂಡಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ ಬಿಜೆಪಿ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ಸಿದ್ಧರಿದ್ದೇವೆ ಎಂಬುದು ಸರ್ಕಾರ ರಚಿಸಲು ಹಕ್ಕು ಮಂಡಿಸುವುದಕ್ಕೆ ಸಮಾನವಾ ಗಿದೆ. ಹೊಸ ಸರ್ಕಾರವನ್ನು ವಿರೋಧಿಸುವವರು ಯಾರು ಇಲ್ಲ’ ಎಂದರು.

ರಾಜ್ಯದಲ್ಲಿ ಎರಡು ಸುಮುದಾಯ ನಡುವಿನ ಜನಾಂಗೀಯ ಘರ್ಷಣೆಯಿಂದ ಭಾರಿ ಟೀಕೆ ಎದುರಿಸಿದ್ದ ಬಿರೇನ್ ಸಿಂಗ್ ಕಳೆದ ಫೆಬ್ರವರಿಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಅಲ್ಲಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತಕ್ಕೀಗ ಮೆಕ್ಸಿಕೋ ಶೇ.50 ತೆರಿಗೆ ಹೊಡೆತ
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ