ಮೋದಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದ ಹುಡುಗಿ ಕ್ಷಮೆಯಾಚನೆ

KannadaprabhaNewsNetwork |  
Published : Aug 02, 2026, 01:45 AM IST
Ruchika

ಸಾರಾಂಶ

ಜಂತರ್ ಮಂತರ್‌ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವೈರಲ್ ಆಗಿದ್ದ ಹುಡುಗಿ ಶನಿವಾರ ವಿಡಿಯೋ ಮೂಲಕ ದೇಶದ ಕ್ಷಮೆಯಾಚಿಸಿದ್ದಾಳೆ. ಜತೆಗೆ, ಕೆಲವರ ಪ್ರಭಾವಕ್ಕೆ ಒಳಗಾಗಿ ಆ ರೀತಿ ಮಾತಾಡಿದ್ದೆ ಎಂದು ತಿಳಿಸಿದ್ದಾಳೆ.

ನವದೆಹಲಿ :   ಜಂತರ್ ಮಂತರ್‌ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವೈರಲ್ ಆಗಿದ್ದ ಹುಡುಗಿ ಶನಿವಾರ ವಿಡಿಯೋ ಮೂಲಕ ದೇಶದ ಕ್ಷಮೆಯಾಚಿಸಿದ್ದಾಳೆ. ಜತೆಗೆ, ಕೆಲವರ ಪ್ರಭಾವಕ್ಕೆ ಒಳಗಾಗಿ ಆ ರೀತಿ ಮಾತಾಡಿದ್ದೆ ಎಂದು ತಿಳಿಸಿದ್ದಾಳೆ. 

ಆಕೆಯ ಬೈಗುಳಗಳನ್ನು ಉಲ್ಲೇಖಿಸಿ ವಿಡಿಯೋ ಮಾಡಿದ್ದ ಪ್ರಧಾನಿ

ಶುಕ್ರವಾರ ರಾತ್ರಿ ಆಕೆಯ ಬೈಗುಳಗಳನ್ನು ಉಲ್ಲೇಖಿಸಿ ವಿಡಿಯೋ ಮಾಡಿದ್ದ ಪ್ರಧಾನಿ, ‘ನನ್ನ ಸ್ವರ್ಗೀಯ ತಾಯಿಯನ್ನು ನಿಂದಿಸಿದ್ದಕ್ಕೆ ನೋವಾಗಿದೆ. ಆದರೆ ಮಕ್ಕಳನ್ನು ಶಿಕ್ಷಿಸುವ ಬದಲು ಸರಿದಾರಿಗೆ ತರುವುದು ನಮ್ಮ ಜವಾಬ್ದಾರಿ’ ಎಂದು ನೊಂದು ನುಡಿದಿದ್ದರು. 

ಹುಡುಗಿ ಕ್ಷಮೆ ಯಾಚಿಸಿದ್ದಾಳೆ

ಆ ಬೆನ್ನಲ್ಲೇ ಹುಡುಗಿ ಕ್ಷಮೆ ಯಾಚಿಸಿದ್ದಾಳೆ.‘ನಾನು ಜುಲೈನಲ್ಲಿ ಸ್ನೇಹಿತರೊಂದಿಗೆ ಕನ್ನಾಟ್ ಪ್ಲೇಸ್‌ಗೆ ಹೋಗಿದ್ದೆ. ಅಲ್ಲಿ ಪ್ರಧಾನಿ ವಿರುದ್ಧ ಅವಾಚ್ಯ ಮತ್ತು ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದ ಜನರ ಗುಂಪೊಂದು ಎದುರಾಯಿತು. ಅವರು ನನ್ನ ಮೇಲೆ ಪ್ರಭಾವ ಬೀರಿ, ನಾನೂ ಅದೇ ರೀತಿ ಮಾತಾಡುವಂತೆ ಪ್ರೇರೇಪಿಸಿದರು.  

ನಾನು ಹಾಗೆಯೇ ಮಾಡಿದೆ. ನಾನು ಇಡೀ ದೇಶದ ಜನರಲ್ಲಿ ನನ್ನನ್ನು ಕ್ಷಮಿಸುವಂತೆ ಕೋರುತ್ತೇನೆ. ನನಗೆ ಕೇವಲ 15 ವರ್ಷ ವಯಸ್ಸು. ಇದೇ ನನ್ನ ಮೊದಲ ಮತ್ತು ಕೊನೆಯ ತಪ್ಪು. ಇಂತಹ ಕೃತ್ಯವನ್ನು ಇನ್ನೆಂದೂ ಮಾಡುವುದಿಲ್ಲ’ ವಿಡಿಯೋದಲ್ಲಿ ತಿಳಿಸಿದ್ದಾಳೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬರೀ ರೀಲ್ಸ್‌ ಮಾಡ್ತೀರೋ, ಕೇಸ್ ಹಿಂಪಡೀತಿರೋ?: ಮೋದಿಗೆ ದೀಪ್ಕೆ ಪ್ರಶ್ನೆ
ಚಂದಾ ಚೋರಿ ಪ್ರಹಸನ: ರಾಗಾ, ಪಪ್ಪು ವಿರುದ್ಧ ಎಫ್‌ಐಆರ್‌