ನವದೆಹಲಿ: ಮುಸ್ಲಿಮರಿಗೂ ಬಿಜೆಪಿಗೂ ಅಷ್ಟಕ್ಕಷ್ಟೆ ಎಂಬ ಭಾವನೆಗಳು ಜನರ ಮನಸ್ಸಿನಲ್ಲಿ ಇರುವ ನಡುವೆಯೇ 32 ಲಕ್ಷ ಬಡ ಮುಸ್ಲಿಮರ ಕುಟುಂಬಗಳಿಗೆ ಬಿಜೆಪಿ ದೇಶಾದ್ಯಂತ ವಿಶೇಷ ‘ರಂಜಾನ್ ಕಿಟ್’ ನೀಡಲು ಆರಂಭಿಸಿದೆ. ಇದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮಾರ್ಗದರ್ಶನದಲ್ಲಿ ಆಗ್ನೇಯ ದೆಹಲಿಯ ನಿಜಾಮುದ್ದೀನ್‌ನಿಂದ ಕಿಟ್ ವಿತರಣೆ ಆರಂಭವಾಗಿದೆ.
ಇದರ ಅಂಗವಾಗಿ ಅವರಿಗೆ ಈದ್ ಆಚರಿಸಲು ವಿಶೇಷ ಕಿಟ್ ನೀಡಲಾಗುತ್ತದೆ. ಅದರಲ್ಲಿ ಆಹಾರ ಪದಾರ್ಥಗಳ ಜೊತೆಗೆ, ಕಿಟ್‌ಗಳಲ್ಲಿ ಬಟ್ಟೆ, ಶಾವಿಗೆ, ಖರ್ಜೂರ, ಒಣ ಹಣ್ಣುಗಳು ಮತ್ತು ಸಕ್ಕರೆ ಇವೆ. ಮಹಿಳೆಯರಿಗೆ ಸೀರೆ, ಸಲ್ವಾರ್ ಕಮೀಜ್, ಪುರುಷರಿಗೆ ಕುರ್ತಾ-ಪೈಜಾಮಾಗಳನ್ನು ನೀಡಲಾಗುತ್ತದೆ. ಪ್ರತಿ ಕಿಟ್‌ನ ಬೆಲೆ ಸುಮಾರು 500 ರಿಂದ 600 ರೂ.ಗಳಷ್ಟಿರುತ್ತದೆ ಎಂದು ವರದಿಗಳು ಹೇಳಿವೆ.