ಮೋದಿ - ಟ್ರಂಪ್‌ ಸ್ನೇಹಿತರು : ಟ್ರಂಪ್‌ ಆಪ್ತ

KannadaprabhaNewsNetwork |  
Published : Jan 13, 2026, 01:15 AM ISTUpdated : Jan 13, 2026, 04:36 AM IST
Modi

ಸಾರಾಂಶ

ಭಾರತ-ಅಮೆರಿಕ ಸಂಬಂಧವು ತೆರಿಗೆ ಸಂಘರ್ಷದ ಕಾರಣ ಹಳಿಸಿರುವ ನಡುವೆಯೇ, ‘ವಾಷಿಂಗ್ಟನ್‌ಗೆ ಭಾರತದಷ್ಟು ಅತ್ಯಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದೂ ಗೋರ್‌ ಪ್ರಶಂಸೆ

 ನವದೆಹಲಿ :  ಭಾರತ-ಅಮೆರಿಕ ಸಂಬಂಧವು ತೆರಿಗೆ ಸಂಘರ್ಷದ ಕಾರಣ ಹಳಿಸಿರುವ ನಡುವೆಯೇ, ‘ವಾಷಿಂಗ್ಟನ್‌ಗೆ ಭಾರತದಷ್ಟು ಅತ್ಯಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ’ ಎಂದು ಭಾರತದಲ್ಲಿನ ಅಮೆರಿಕದ ನೂತನ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ. ಅಲ್ಲದೆ, ಮುಂದಿನ ವರ್ಷ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದೂ ತಿಳಿಸಿದ್ದಾರೆ.

ಸೋಮವಾರ ಅಮೆರಿಕ ರಾಯಭಾರ ಕಚೇರಿಯಲ್ಲಿ ಗೋರ್‌ ತಮ್ಮ ಅಧಿಕಾರ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಲು ಗೋರ್ ವೇದಿಕೆಯತ್ತ ಆಗಮಿಸುವಾಗ, 1966ರಲ್ಲಿ ಸ್ಯಾಮ್ ಮತ್ತು ಡೇವ್ ಸಂಯೋಜಿಸಿದ ‘ಹೋಲ್ಡ್ ಆನ್, ಐಯಾಮ್ ಕಮಿಂಗ್‌’ ಜನಪ್ರಿಯ ಗೀತೆ ಪ್ರಸಾರ ಮಾಡಲಾಯ್ತು.

ಇಂದು ಅಮೆರಿಕ-ಭಾರತ ವ್ಯಾಪಾರ ಮಾತುಕತೆ

ನವದೆಹಲಿ: ‘ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಮಾತುಕತೆ ಜ.13ರಂದು ನಡೆಯಲಿದೆ. ಈ ವೇಳೆ ಮುಂದಿನ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ’ ಎಂದು ಭಾರತಕ್ಕೆ ಅಮೆರಿಕದ ನೂತನ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ.ಸೋಮವಾರ ಅಮೆರಿಕ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಅವರು, ‘ಎರಡೂ ಕಡೆಯವರು ಮಾತುಕತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಿಜವಾದ ಸ್ನೇಹಿತರು. ನೈಜ ಸ್ನೇಹಿತರ ನಡುವೆ ಭಿನ್ನಮತ ಸಹಜ. ಅಷ್ಟೇ ಬೇಗ ಅವರು ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುತ್ತಾರೆ’ ಎಂದರು.ಭಾರತದ ಮೇಲೆ ಅಮೆರಿಕ ಶೇ.50ರಷ್ಟು ತೆರಿಗೆ ಹೇರಿತ್ತು. ಇದಾದ ನಂತರ ಉಭಯ ದೇಶಗಳ ಸಂಬಂಧ ಹಳಸಿದೆ. ಇದರ ನಡುವೆಯೇ ಮುಂದಿನ ಮಾತುಕತೆ ಧನಾತ್ಮಕವಾಗಿರುವ ವಿಶ್ವಾಸವನ್ನು ಗೋರ್‌ ವ್ಯಕ್ತಪಡಿಸಿದ್ದಾರೆ.

ಷೇರುಪೇಟೆ ಏರಿಕೆ:

ಗೋರ್ ಹೇಳಿಕೆ ಬೆನ್ನಲ್ಲೇ ಭಾರತದ ಷೇರುಪೇಟೆಯಲ್ಲಿ ಆಶಾವಾದ ಮೂಡಿದೆ. ಸೆನ್ಸೆಕ್ಸ್ 301.93 ಅಂಕಗಳ ಏರಿಕೆಯಾಗಿ 83,878.17 ಕ್ಕೆ ಸ್ಥಿರವಾಯಿದೆ. ನಿಫ್ಟಿ 106.95 ಅಂಕಗಳ ಏರಿಕೆಯಾಗಿ 25,790.25 ಕ್ಕೆ ತಲುಪಿದೆ.

ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯಾಗಿ ಗೋರ್‌ ಶಪಥ

ನವದೆಹಲಿ: ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯಾಗಿ ಮತ್ತು ದಕ್ಷಿಣ-ಮಧ್ಯ ಏಷ್ಯಾಕ್ಕೆ ವಿಶೇಷ ರಾಯಭಾರಿಯಾಗಿ ಸೆರ್ಗಿಯೊ ಗೋರ್ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.ದೆಹಲಿಯ ಅಮೆರಿಕ ರಾಯಭಾರ ಕಚೇರಿಯಲ್ಲಿ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಸಮಾರಂಭ ನಡೆಯಿತು. ಪ್ರಮಾಣ ವಚನ ಸ್ವೀಕರಿಸಲು ಗೋರ್ ವೇದಿಕೆಯತ್ತ ಆಗಮಿಸುವಾಗ, ಹಿನ್ನೆಲೆಯಲ್ಲಿ 1966ರಲ್ಲಿ ಸ್ಯಾಮ್ ಮತ್ತು ಡೇವ್ ಸಂಯೋಜಿಸಿದ ‘ಹೋಲ್ಡ್ ಆನ್, ಐಯಾಮ್ ಕಮಿಂಗ್‌’ ಜನಪ್ರಿಯ ಗೀತೆಯನ್ನು ಪ್ರಸಾರ ಮಾಡಿದ್ದು ವಿಶೇಷವಾಗಿತ್ತು. ಈ ವೇಳೆ ಜನರೂ ಹರ್ಷೋದ್ಗಾರ ಮಾಡುತ್ತಾ ಗೋರ್‌ಗೆ ಅಭಿನಂದನೆ ಸಲ್ಲಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಗೋರ್‌, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸ್ನೇಹ ಸಂಬಂಧಗಳನ್ನು ಶ್ಲಾಘಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!
ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು