-ಅಸ್ಸಾಂ ಹೆದ್ದಾರೀಲಿ ವಿಮಾನ ಇಳಿಸಿ ಪ್ರಧಾನಿಯಿಂದ ನೆಲೆ ಉದ್ಘಾಟನೆ- ಚೀನಾ ಗಡಿಗೆ 300 ಕಿ.ಮೀ. ಸನಿಹದಲ್ಲೇ ನಿರ್ಮಾಣ, ಪ್ರತಿತಂತ್ರಕ್ಕೆ ಸಜ್ಜು
ಹೈವೈ ಲ್ಯಾಂಡಿಂಗ್ ನಿರ್ಮಾಣ ವೆಚ್ಚ
=4.2 ಕಿ.ಮೀ.
==
ತುರ್ತು ಸಮಯದಲ್ಲಿ ಹೆದ್ದಾರಿಯ ಮೇಲೆ ಯುದ್ಧ ವಿಮಾನ ಇಳಿಸಲು ಸಾಧ್ಯ
ನೈಸರ್ಗಿಕ ವಿಪತ್ತಿನ ವೇಳೆಯೂ ಇವುಗಳನ್ನು ಬಳಸಿಕೊಳ್ಳಲು ಅವಕಾಶ
ಬ್ರಹ್ಮಪುತ್ರಾ ನದಿಯಡಿಅವಳಿ ಸುರಂಗ ಮಾರ್ಗ- ನದಿಯಡಿ 34 ಕಿ.ಮೀ. ದೂರದ ರಸ್ತೆ-ರೈಲು ಮಾರ್ಗ- ಅಸ್ಸಾಂನ ಗೋಹ್ಪುರ್-ನುಮಲಿಗಢ್ ನಡುವೆ ನಿರ್‍ಮಾಣನವದೆಹಲಿ: ದೇಶದ ಮೊದಲ ರಸ್ತೆ-ರೈಲು ಅವಳಿ ಸುರಂಗ ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ. ಈ ಮಾರ್ಗ ಅಸ್ಸಾಂನ ಗೋಹ್ಪುರ್-ನುಮಲಿಗಢ್ ನಡುವೆ ಬ್ರಹ್ಮಪುತ್ರಾ ನದಿಯಡಿ ವಾಹನ, ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ. ನೀರೊಳಗಿನ 35 ಕಿ.ಮೀ.ನಷ್ಟು ದೂರದವರೆಗೆ ಸುರಂಗ ನಿರ್ಮಾಣವಾಗಲಿದೆ. ಇದು ದೇಶದ ಮೊದಲ, ವಿಶ್ವದ 2ನೇ ಇಂಥ ಯೋಜನೆ. 18,662 ಕೋಟಿ ರು. ವೆಚ್ಚದದಲ್ಲಿ ಇದು ಜಾರಿಯಾಗಲಿದೆ. ಯೋಜನೆಯಿಂದ ಉಭಯ ಪ್ರದೇಶಗಳ ನಡುವಿನ ಸಂಚಾರದ ಅವಧಿ 6 ಗಂಟೆಯಿಂದ ಕೇವಲ 20 ನಿಮಿಷಕ್ಕೆ ಇಳಿಯಲಿದೆ.ಪಿಟಿಐ ಗುವಾಹಟಿ
2021ರಲ್ಲಿ ರಾಜಸ್ಥಾನದ ಬಾಢ್ಮೇರ್ ಜಿಲ್ಲೆಯಲ್ಲಿ ದೇಶದ ಮೊದಲ ಇಎಲ್‌ಎಫ್ ಅನ್ನು ಉದ್ಘಾಟಿಸಲಾಗಿತ್ತು. ಇದೀಗ ಅಸ್ಸಾಂನಲ್ಲಿ ನಿರ್ಮಿಸಲಾಗಿರುವುದು ದೇಶದ 2ನೇ ಇಎಲ್‌ಎಫ್ ಆಗಿದ್ದು, ಈಶಾನ್ಯ ಭಾರತದ ಮೊದಲನೆಯದರು ಎಂಬುದು ವಿಶೇಷ.
ಏನಿದರ ಪ್ರಯೋಜನ?:
ಮೋರಾನ್‌ನಲ್ಲಿ ನಿರ್ಮಾಣವಾಗಿರುವ ತುರ್ತು ಭೂಸ್ಪರ್ಶ ನೆಲೆಯು ರಕ್ಷಣೆ, ಸರಕು ಸಾಗಾಟ ಮತ್ತು ನೈಸರ್ಗಿಕ ವಿಪತ್ತಿನ ಸಂದರ್ಭಗಳಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಮತ್ತು ಸರಕು ವಿಮಾನಗಳಿಗೆ ರನ್ ವೇ ರೀತಿ ಕಾರ್ಯನಿರ್ವಹಿಸಲಿದೆ. ಇದನ್ನು ನಾಗರಿಕ ಮತ್ತು ಸೇನಾ ಬಳಕೆ ಎರಡೂ ಉದ್ದೇಶದಿಂದ ನಿರ್ಮಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ದಿಬ್ರುಗಢ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಕೆಲಸ ಮಾಡಲಿದೆ.ಈಶಾನ್ಯ ಭಾರತದಲ್ಲಿ ನೈಸರ್ಗಿಕ ವಿಕೋಪಗಳು ಅಥವಾ ಕಾರ್ಯತಂತ್ರದ ಆವಶ್ಯಕತೆಗಳ ಸಮಯದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಸಿಬ್ಬಂದಿಯನ್ನು ನಿಯೋಜಿಸಲು ಅನುವು ಮಾಡಿಕೊಡುತ್ತದೆ. 40 ಟನ್‌ಗಳವರೆಗಿನ ಯುದ್ಧವಿಮಾನಗಳನ್ನು ನಿರ್ವಹಿಸುವ ಮತ್ತು 74 ಟನ್‌ಗಳವರೆಗಿನ ಗರಿಷ್ಠ ಟೇಕ್-ಆಫ್ ತೂಕದ ವಿಮಾನಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಹಿಮ್ಮೆಟ್ಟಿಸಲು ತಂತ್ರ:ಮೋರಾನ್‌ನಿಂದ ಚೀನಾ ಗಡಿ ಸುಮಾರು 300 ಕಿ.ಮೀ. ಮತ್ತು ಮ್ಯಾನ್ಮಾರ್ ಗಡಿ 200 ಕಿ.ಮೀ. ದೂರದಲ್ಲಿವೆ. ಚೀನಾವು ಆಗಾಗ ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬರುತ್ತಿರುತ್ತದೆ. ಇನ್ನು ಅದರಿಂದ ಯಾವುದೇ ರೀತಿಯ ಪ್ರಚೋದನೆ ಉಂಟಾದರೆ, ಯಶಸ್ವಿಯಾಗಿ ಹಿಮ್ಮೆಟ್ಟಿಸುವಲ್ಲಿ ಇಎಲ್‌ಎಫ್ ಮಹತ್ವದ ಪಾತ್ರ ವಹಿಸಲಿದೆ.
ಮೋದಿಗೆ ಸಾಂಪ್ರದಾಯಿಕ ಸ್ವಾಗತ:ಪ್ರಧಾನಿ ಮೋದಿ ಸಿ-130ಜೆ ವಿಮಾನದ ಮೂಲಕ ಮೋರಾನ್‌ನಲ್ಲಿ ಬಂದಿಳಿಯುತ್ತಿದ್ದಂತೆ, ಅವರನ್ನು ಸಾಂಪ್ರದಾಯಿಕ ‘ಮುಗ ಗಮೋಸಾ’ದೊಂದಿಗೆ (ಸ್ಕಾರ್ಫ್) ಸ್ವಾಗತಿಸಲಾಯಿತು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ‘ಜಪಿ’ (ಶಿರಸ್ತ್ರಾಣ) ಮತ್ತು ರಾಣಿ ಸತಿ ಸಾಧಿನಿಯ ಭಾವಚಿತ್ರವನ್ನು ನೀಡಿ ಸನ್ಮಾನಿಸಿದರು. ವಾಯುಪಡೆಯ ಮುಖ್ಯಸ್ಥರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ವೈಮಾನಿಕ ಪ್ರದರ್ಶನ:ಮೋದಿಯವರು ಇಎಲ್‌ಎಫ್‌ನಲ್ಲಿ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಂಡರು. ವಾಯುಪಡೆಯ ಪೈಲಟ್‌ಗಳು ಮೋರಾನ್ ಬೈಪಾಸ್‌ನಲ್ಲಿ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡುವ ಮೂಲಕ ಸುಮಾರು 20 ನಿಮಿಷ ಕಾಲ ಪ್ರದರ್ಶನ ನೀಡಿದರು. ಸುಖೋಯ್-30 ಎಂಕೆಐ ವಿಮಾನ ಇಎಲ್‌ಎಫ್‌ನಿಂದ ಮೊದಲು ಟೇಕಾಫ್ ಆದರೆ, ರಫೇಲ್ ಅದನ್ನು ಹಿಂಬಾಲಿಸಿತು.