ಉದ್ದಿಮೆಗಳಿಗೆ ಇನ್ನಷ್ಟು ಎಲ್‌ಪಿಜಿ - ವಾಣಿಜ್ಯ ಎಲ್‌ಪಿಜಿ ಪೂರೈಕೆ ಪ್ರಮಾಣ ಶೇ.70ಕ್ಕೇರಿಕೆ

Published : Mar 28, 2026, 12:04 PM IST
LPG

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷದ ಬಳಿಕ ದೇಶದ ಆದ್ಯತೆಯ ಕೈಗಾರಿಕಾ ಕ್ಷೇತ್ರಗಳಿಗೆ ಪೂರೈಕೆಯಾಗುತ್ತಿದ್ದ ವಾಣಿಜ್ಯ ಎಲ್‌ಪಿಜಿ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಅದರ ಪ್ರಮಾಣವನ್ನು ಶೇ.70ಕ್ಕೇರಿಸಿದೆ.

 ನವದೆಹಲಿ :  ಮಧ್ಯಪ್ರಾಚ್ಯ ಸಂಘರ್ಷದ ಬಳಿಕ ದೇಶದ ಆದ್ಯತೆಯ ಕೈಗಾರಿಕಾ ಕ್ಷೇತ್ರಗಳಿಗೆ ಪೂರೈಕೆಯಾಗುತ್ತಿದ್ದ ವಾಣಿಜ್ಯ ಎಲ್‌ಪಿಜಿ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಅದರ ಪ್ರಮಾಣವನ್ನು ಶೇ.70ಕ್ಕೇರಿಸಿದೆ.

ಶೇ.70ರಷ್ಟು ವಾಣಿಜ್ಯ ಗ್ಯಾಸ್‌ ಪೂರೈಕೆ

ಸ್ಟೀಲ್‌, ಆಟೋಮೊಬೈಲ್‌, ಟೆಕ್ಸ್‌ಟೈಲ್‌, ಡೈ, ಕೆಮಿಕಲ್‌, ಪ್ಲಾಸ್ಟಿಕ್‌ನಂಥ ಕಾರ್ಮಿಕ ಕೇಂದ್ರಿತ ಆದ್ಯತಾ ವಲಯದ ಕೈಗಾರಿಕೆಗಳಿಗೆ ಬೇಡಿಕೆಯ ಶೇ.70ರಷ್ಟು ವಾಣಿಜ್ಯ ಗ್ಯಾಸ್‌ ಪೂರೈಕೆಗೆ ಸೂಚನೆ ನೀಡಿದೆ.

ಈ ಕುರಿತು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ತೈಲ ಕಾರ್ಯದರ್ಶಿ ನೀರಜ್‌ ಮಿತ್ತಲ್‌ ಅವರು, ಇತರೆ ಅಗತ್ಯ ಕ್ಷೇತ್ರಗಳಿಗೆ ಬೆಂಬಲ ನೀಡುವ ಕಾರ್ಮಿಕ ಕೇಂದ್ರಿತ ಉದ್ದಿಮೆಗಳನ್ನು ಆದ್ಯತೆಯಾಗಿ ಪರಿಗಣಿಸಿ ವಾಣಿಜ್ಯ ಗ್ಯಾಸ್‌ ಪೂರೈಕೆ ಪ್ರಮಾಣವನ್ನು ಶೇ.70ಕ್ಕೆ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ.

ವಾಣಿಜ್ಯ ಎಲ್‌ಪಿಜಿಯನ್ನು ಶೇ.20ಕ್ಕೆ ಕಡಿತ

ಮಧ್ಯಪ್ರಾಚ್ಯ ಸಂಘರ್ಷ ಶುರುವಾದ ಬಳಿಕ ಹೋಟೆಲ್‌ಗಳು ಹಾಗೂ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದ್ದ ವಾಣಿಜ್ಯ ಎಲ್‌ಪಿಜಿಯನ್ನು ಶೇ.20ಕ್ಕೆ ಕಡಿತಗೊಳಿಸಲಾಗಿತ್ತು. ಕಳೆದ ಸೋಮವಾರದಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಪ್ರಮಾಣವನ್ನು ಶೇ.50ಕ್ಕೇರಿಸಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಆದ್ಯತೆಯ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದ್ದ ಎಲ್‌ಪಿಜಿ ಪ್ರಮಾಣವನ್ನು ಶೇ.70ಕ್ಕೇರಿಸುವ ಮೂಲಕ ಉದ್ಯಮ ವಲಯದ ಆತಂಕ ಕಡಿಮೆ ಮಾಡಿದೆ.

ವಾಣಿಜ್ಯ ಗ್ಯಾಸ್‌ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಹಲವು ಕೈಗಾರಿಕೆಗಳಿಗೆ ಸಮಸ್ಯೆಯಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪೆಟ್ರೋಲ್‌, ಡೀಸೆಲ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ 10 ರು.ನಷ್ಟು ಕಡಿತ
ಯುದ್ಧದಿಂದ ಸವಾಲಿನ ಪರಿಸ್ಥಿತಿ - ಟೀಂ ಇಂಡಿಯಾ ಆಗಿ ಕೆಲಸ ಮಾಡೋಣ : ಮೋದಿ ಪರಿಹಾರಗಳು