ಚಿತ್ರೀಕರಣದ ವೇಳೆ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ಪ್ರಕರಣ : ಶಾಸಕ ಮುಕೇಶ್ ಸೇರಿ 7 ಮಂದಿ ವಿರುದ್ಧ ಅತ್ಯಾಚಾರ ಪ್ರಕರಣ

KannadaprabhaNewsNetwork |  
Published : Aug 30, 2024, 01:02 AM ISTUpdated : Aug 30, 2024, 05:44 AM IST
ಮುಕೇಶ್‌ | Kannada Prabha

ಸಾರಾಂಶ

ಚಿತ್ರೀಕರಣದ ವೇಳೆ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕೇರಳದ ಸಿಪಿಎಂ ಪಕ್ಷದ ಶಾಸಕ ಹಾಗೂ ನಟ ಮುಕೇಶ್‌, ಜಯಸೂರ್ಯ, ಮಣಿಯನ್‌ಪಿಳ್ಳಾ ರಾಜು ಸೇರಿದಂತೆ ಹಲವರ ವಿರುದ್ಧ ಸ್ಥಳೀಯ ಪೊಲೀಸರು ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ.

 ತಿರುವನಂತಪುರ :ಚಿತ್ರೀಕರಣದ ವೇಳೆ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕೇರಳದ ಸಿಪಿಎಂ ಪಕ್ಷದ ಶಾಸಕ ಹಾಗೂ ನಟ ಮುಕೇಶ್‌, ಜಯಸೂರ್ಯ, ಮಣಿಯನ್‌ಪಿಳ್ಳಾ ರಾಜು ಸೇರಿದಂತೆ ಹಲವರ ವಿರುದ್ಧ ಸ್ಥಳೀಯ ಪೊಲೀಸರು ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗೆ ನಟಿಯೊಬ್ಬರು, 2013ರಲ್ಲಿ ಮುಕೇಶ್‌, ಜಯಸೂರ್ಯ, ಮಣಿಯನ್‌ಪಿಳ್ಳಾ ರಾಜು, ಇಡವೇಲು ಬಾಬು, ಅಡ್ವೋಕೇಟ್‌ ಚಂದ್ರಶೇಖರನ್‌, ಪ್ರೊಡಕ್ಷನ್‌ ಕಂಟ್ರೋಲರ್‌ ನೋಬಲ್‌ ಮತ್ತು ವಿಚು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದರು ಜೊತೆಗೆ ಪ್ರಕರಣದ ಕುರಿತು ತನಿಖೆ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿಗೆ ದೂರು ನೀಡಿದ್ದರು.

ಅದರ ಬೆನ್ನಲ್ಲೇ ಆರೋಪಿಗಳ ವಿರುದ್ಧ ಆತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಇನ್ನೊಬ್ಬ ನಟ ಸಿದ್ದಿಕಿ ವಿರುದ್ಧ ಕೂಡಾ ಅತ್ಯಾಚಾರದ ಪ್ರಕರಣ ದಾಖಲಿಸಲಾಗಿತ್ತು.

ಮುಕೇಶ್ ರಾಜೀನಾಮೆಗೆ ಆಗ್ರಹ:

ಈ ನಡುವೆ ಅತ್ಯಾಚಾರದ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಕೇಶ್‌ ರಾಜೀನಾಮೆಗೆ ಸಿಪಿಐ ನಾಯಕಿ ಆ್ಯನ್ನಿ ರಾಜಾ ಮತ್ತು ಕಾಂಗ್ರೆಸ್‌ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ. ಆದರೆ ಮುಕೇಶ್‌ ಬೆಂಬಲಕ್ಕೆ ನಿಂತಿರುವ ಆಡಳಿತಾರೂಢ ಸಿಪಿಎಂ ನಾಯಕರು, ತಕ್ಷಣಕ್ಕೆ ಮುಕೇಶ್‌ ರಾಜೀನಾಮೆ ಕೇಳುವುದಿಲ್ಲ ಎಂದು ನೇರವಾಗಿ ಅವರ ಬೆಂಬಲಕ್ಕೆ ನಿಂತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!