ಬ್ರಿಟಿಷರಿಗೆ ಕೊಟ್ಟ ₹35,000 ಸಾಲ 109 ವರ್ಷ ನಂತರ ವಾಪಸ್‌ ಕೇಳಿದರು!

KannadaprabhaNewsNetwork |  
Published : Feb 27, 2026, 02:00 AM IST
Loan

ಸಾರಾಂಶ

ಮೊದಲನೇ ಮಹಾಯುದ್ಧದ ವೇಳೆ ಆಗಿನ ಬ್ರಿಟಿಷ್ ಸರ್ಕಾರವು ತನ್ನ ಅಜ್ಜನಿಂದ 35,000 ರು.ಗಳ ಯುದ್ಧ ಸಾಲವನ್ನು ಪಡೆದಿತ್ತು. ಇದುವರೆಗೂ ಅದನ್ನು ಪಾವತಿಸಿಲ್ಲ ಎಂದು ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಪ್ರಭಾವಿ ಉದ್ಯಮಿ ಕುಟುಂಬದ 3ನೇ ತಲೆಮಾರಿನ ಸದಸ್ಯರೊಬ್ಬರು ಆರೋಪಿಸಿದ್ದಾರೆ. 

 ಸೀಹೋರ್‌ (ಮಧ್ಯಪ್ರದೇಶ): ಮೊದಲನೇ ಮಹಾಯುದ್ಧದ ವೇಳೆ ಆಗಿನ ಬ್ರಿಟಿಷ್ ಸರ್ಕಾರವು ತನ್ನ ಅಜ್ಜನಿಂದ 35,000 ರು.ಗಳ ಯುದ್ಧ ಸಾಲವನ್ನು ಪಡೆದಿತ್ತು. ಇದುವರೆಗೂ ಅದನ್ನು ಪಾವತಿಸಿಲ್ಲ ಎಂದು ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಪ್ರಭಾವಿ ಉದ್ಯಮಿ ಕುಟುಂಬದ 3ನೇ ತಲೆಮಾರಿನ ಸದಸ್ಯರೊಬ್ಬರು ಆರೋಪಿಸಿದ್ದಾರೆ. 

ಕಾನೂನು ಪ್ರಕಾರ ನೋಟೀಸ್‌

ಇದಕ್ಕಾಗಿ ಬ್ರಿಟನ್‌ ಸರ್ಕಾರಕ್ಕೆ ಕಾನೂನು ಪ್ರಕಾರ ನೋಟೀಸ್‌ ನೀಡಲೂ ಮುಂದಾಗಿದ್ದಾರೆ.

ಉದ್ಯಮಿ ಸೇಠ್‌ ಜುಮ್ಮಾ ಲಾಲ್‌ ರುಥಿಯಾ

ಉದ್ಯಮಿ ಸೇಠ್‌ ಜುಮ್ಮಾ ಲಾಲ್‌ ರುಥಿಯಾ 109 ವರ್ಷಗಳ ಹಿಂದೆ ಬ್ರಿಟಿಷರಿಗೆ ಸಾಲ ನೀಡಿದ್ದರಂತೆ. ಅದನ್ನೀಗ ಅವರ ಮೊಮ್ಮಗ ವಿವೇಕ್‌ ರುಥಿಯಾ (65) ಮುನ್ನೆಲೆಗೆ ತಂದಿದ್ದಾರೆ. ‘1917ರಲ್ಲಿ, ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಆಡಳಿತಕ್ಕೆ ನನ್ನ ಅಜ್ಜ 35,000 ರು. ಸಾಲ ನೀಡಿದ್ದರು. ಅದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಆ ಮೊತ್ತ ಈಗ ಕೋಟಿಗಟ್ಟಲೆ ಆಗಿದೆ. ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ, ಒಂದು ಸಾರ್ವಭೌಮ ರಾಷ್ಟ್ರವು ತನ್ನ ಹಿಂದಿನ ಸಾಲಗಳನ್ನು ಮರುಪಾವತಿಸಲು ಕಾನೂನುಬದ್ಧವಾಗಿ ಬಾಧ್ಯತೆ ಹೊಂದಿರುತ್ತದೆ. ಹಾಗಾಗಿ ಸಾಲವನ್ನು ಪಾವತಿಸುವಂತೆ ಈಗಿನ ಬ್ರಿಟಿಷ್ ಸರ್ಕಾರಕ್ಕೆ ನೋಟೀಸ್‌ ಕೊಡುತ್ತೇವೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಏರ್‌ಸೆಲ್ ಡೀಲ್: ಚಿದು ವಿಚಾರಣೆಗೆ ಇ.ಡಿ.ಗೆ ಅನುಮತಿ
ಎಪ್‌ಸ್ಟೀನ್‌ ಫೈಲ್‌ನಲ್ಲಿ ಸ್ಟೀಫನ್‌ ಹಾಕಿಂಗ್‌ ಫೋಟೋ!