;Resize=(412,232))
ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ನೆಲೆಸಿರುವ ಐಷಾರಾಮಿ ಆ್ಯಂಟೀಲಿಯಾ ಬಂಗಲೆಯ ಮಾಸಿಕ ವಿದ್ಯುತ್ ಬಿಲ್ 70 ಲಕ್ಷ ರು.ಗಳಂತೆ.
ಮನೆ 27 ಅಂತಸ್ತು ಹೊಂದಿದ್ದರೂ, ಅದು ಹೊಂದಿರುವ ಎತ್ತರ ಅಂದಾಜು 60 ಮಹಡಿ ಕಟ್ಟಡದಷ್ಟಿದೆ. ಈ ಕಟ್ಟಡದಲ್ಲಿ ಮಾಸಿಕ 6 ಲಕ್ಷ ಯುನಿಟ್‌ಗಳಷ್ಟು ವಿದ್ಯುತ್ ಬಳಕೆ ಆಗುತ್ತಿದ್ದು, ಎಲ್ಲಾ ರಿಯಾಯಿತಿ ಕಳೆದ ಬಳಿಕ 70-80 ಲಕ್ಷ ರು. ಶುಲ್ಕ ವಿಧಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ಕಟ್ಟಡದಲ್ಲಿ ಜಿಮ್, ಸ್ಪಾ, ಚಿತ್ರಮಂದಿರ, ಈಜುಕೊಳ, ದೇವಸ್ಥಾನ, 150ಕ್ಕೂ ಹೆಚ್ಚು ಕಾರು ನಿಲುಗಡೆ ತಾಣ, ಮೇಲ್ಮಹಡಿ ಉದ್ಯಾನಗಳು, 3 ಹೆಲಿಪ್ಯಾಡ್‌ಗಳು ಇವೆ. ನಿರ್ಮಾಣದ ವೇಳೆ ಇದರ ಅಂದಾಜು ವೆಚ್ಚ 4500 ಕೋಟಿ ರು.ನಷ್ಟಿದ್ದು, ಪ್ರಸ್ತುತ ಇದರ ಮೌಲ್ಯ 15000 ಕೋಟಿ ರು.ಗಿಂತ ಹೆಚ್ಚಿದೆ.