ಮುಂಬೈ ಜಿಎಸ್‌ಬಿ ಸೇವಾ ಮಂಡಳಿ ಗಣೇಶೋತ್ಸವಕ್ಕೆ 703 ಕೋಟಿ ರು.ಗಳ ವಿಮೆ!

KannadaprabhaNewsNetwork |  
Published : Sep 07, 2026, 02:00 AM IST
Ganesha

ಸಾರಾಂಶ

ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿ ಎಂದೇ ಪ್ರಸಿದ್ಧವಾಗಿರುವ ಮುಂಬೈನ ಜಿಎಸ್‌ಬಿ ಸೇವಾ ಮಂಡಳಿಯು ಈ ಬಾರಿಯ ಗಣೇಶೋತ್ಸವಕ್ಕಾಗಿ 703.27 ಕೋಟಿ ರು. ಮೊತ್ತದ ಬೃಹತ್ ವಿಮಾ ರಕ್ಷಣೆಯನ್ನು ಮಾಡಿಸಿದೆ.

ಮುಂಬೈ : ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿ ಎಂದೇ ಪ್ರಸಿದ್ಧವಾಗಿರುವ ಮುಂಬೈನ ಜಿಎಸ್‌ಬಿ ಸೇವಾ ಮಂಡಳಿಯು ಈ ಬಾರಿಯ ಗಣೇಶೋತ್ಸವಕ್ಕಾಗಿ 703.27 ಕೋಟಿ ರು. ಮೊತ್ತದ ಬೃಹತ್ ವಿಮಾ ರಕ್ಷಣೆಯನ್ನು ಮಾಡಿಸಿದೆ.

ಭಕ್ತರ ಸುರಕ್ಷತೆಗಾಗಿ ಈ ವಿಮೆ

ಉತ್ಸವದ ವೇಳೆ ಏನಾದರೂ ಅವಘಡ ಸಂಭವಿಸಿದರೆ ಮಂಡಳಿಯ ಸ್ವತ್ತುಗಳು ಮತ್ತು ಭಕ್ತರ ಸುರಕ್ಷತೆಗಾಗಿ ಈ ವಿಮೆ ಮಾಡಿಸಲಾಗಿದೆ. ಕಳೆದ ವರ್ಷ ಮಂಡಳಿಯು 474 ಕೋಟಿ ರು. ಮೊತ್ತದ ವಿಮೆ ಮಾಡಿಸಿತ್ತು. ಮುಂಬೈನ ಕಿಂಗ್ಸ್ ಸರ್ಕಲ್‌ನಲ್ಲಿ 5 ದಿನಗಳ ಕಾಲ ನಡೆಯಲಿರುವ ಈ ಗಣೇಶೋತ್ಸವದ ಆಚರಣೆಗಾಗಿ ಗಣಪತಿ ಮೂರ್ತಿಯನ್ನು 66 ಕೆಜಿಗೂ ಅಧಿಕ ಚಿನ್ನ ಹಾಗೂ 335 ಕೆಜಿ ಬೆಳ್ಳಿಯ ಆಭರಣಗಳಿಂದ ಅಲಂಕರಿಸಲಾಗುತ್ತದೆ.

ಆಭರಣಗಳನ್ನು ಭಕ್ತಾದಿಗಳು ಮಂಡಳಿಗೆ ಕಾಣಿಕೆಯಾಗಿ ನೀಡಿದ್ದಾರೆ

ಈ ಆಭರಣಗಳನ್ನು ಭಕ್ತಾದಿಗಳು ಮಂಡಳಿಗೆ ಕಾಣಿಕೆಯಾಗಿ ನೀಡಿದ್ದಾರೆ. ಜಿಎಸ್‌ಬಿ ಸೇವಾ ಮಂಡಳಿಯ 72ನೇ ವರ್ಷದ ಗಣೇಶೋತ್ಸವವು ಸೆ.14ರಿಂದ 18ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರ ಸಚಿವರಿಗೆ ಇಂದುಪ್ರಧಾನಿ ಮೋದಿ ಪರೀಕ್ಷೆ- ಪ್ರಮುಖ ಯೋಜನೆ, ಸಾಧನೆ ಪರಾಮರ್ಶೆ
ಕಳ್ಳಭಟ್ಟಿ ಸೇವನೆ : ಮಧ್ಯಪ್ರದೇಶದ 11 ಜನ ಸಾವು, 25 ಮಂದಿ ಅಸ್ವಸ್ಥ