ರಾಮಮಂದಿರ ಸಿಇಒ ಮಿಶ್ರಾ ಮೊದಲ ಸಭೆ

KannadaprabhaNewsNetwork |  
Published : Sep 04, 2026, 02:15 AM IST
Ayodhya

ಸಾರಾಂಶ

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನೂತನ ಸಿಇಒ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಗುರುವಾರ ಅಯೋಧ್ಯೆಗೆ ಭೇಟಿ ನೀಡಿ, ಟ್ರಸ್ಟ್‌ನ ಪದಾಧಿಕಾರಿಗಳೊಂದಿಗೆ ತಮ್ಮ ಮೊದಲ ಸಭೆ ನಡೆಸಿದ್ದಾರೆ.

ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನೂತನ ಸಿಇಒ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಗುರುವಾರ ಅಯೋಧ್ಯೆಗೆ ಭೇಟಿ ನೀಡಿ, ಟ್ರಸ್ಟ್‌ನ ಪದಾಧಿಕಾರಿಗಳೊಂದಿಗೆ ತಮ್ಮ ಮೊದಲ ಸಭೆ ನಡೆಸಿದ್ದಾರೆ.

ರಾಮಘಾಟ್‌ನಲ್ಲಿರುವ ಟ್ರಸ್ಟ್

ರಾಮಘಾಟ್‌ನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ, ಟ್ರಸ್ಟ್‌ನ ಆಡಳಿತಾತ್ಮಕ ವ್ಯವಸ್ಥೆಗಳು ಮತ್ತು ಖಾತೆಗಳ ನಿರ್ವಹಣೆಯ ಕುರಿತು ಮಿಶ್ರಾ ಅವರಿಗೆ ಪ್ರಾಥಮಿಕ ಮಾಹಿತಿ ನೀಡಲಾಯಿತು. ಇನ್ನು 4-5 ದಿನಗಳಲ್ಲಿ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ದೇಣಿಗೆ ವಿವಾದದ ಹಿನ್ನೆಲೆ

ದೇಣಿಗೆ ವಿವಾದದ ಹಿನ್ನೆಲೆಯಲ್ಲಿ ಟ್ರಸ್ಟ್‌ನಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಗೋವಿಂದ ದೇವ್ ಗಿರಿ ಹೊಸ ಪ್ರಧಾನ ಕಾರ್ಯದರ್ಶಿಯಾಗಿ, ಮಹೇಶ್ ಭಾಂದ್‌ಚಂದ್ಕಾ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ. ಜತೆಗೆ ನೂತನ ಟ್ರಸ್ಟಿಯಾಗಿ ಆಯ್ಕೆಯಾಗಿರುವ ಶಿಕ್ಷಣ ತಜ್ಞೆ ಡಾ. ನಿರ್ಮಲಾ ಯಾದವ್, ಮಹಿಳಾ ಭಕ್ತರಿಗೆ ಸುಲಭ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರ ಸಚಿವರಿಗೆ ಇಂದುಪ್ರಧಾನಿ ಮೋದಿ ಪರೀಕ್ಷೆ- ಪ್ರಮುಖ ಯೋಜನೆ, ಸಾಧನೆ ಪರಾಮರ್ಶೆ
ಕಳ್ಳಭಟ್ಟಿ ಸೇವನೆ : ಮಧ್ಯಪ್ರದೇಶದ 11 ಜನ ಸಾವು, 25 ಮಂದಿ ಅಸ್ವಸ್ಥ