ಜೈಲಲ್ಲಿ ಸಹ ಜೀವನ, ಡ್ರಗ್ಸ್‌ಗೆ ಬೇಡಿಕೆ ಇಟ್ಟ ಮರ್ಚಂಟ್‌ ನೇವಿ ಅಧಿಕಾರಿ ಕೊಂದ ಹಂತಕಿ !

KannadaprabhaNewsNetwork |  
Published : Mar 24, 2025, 12:31 AM ISTUpdated : Mar 24, 2025, 04:57 AM IST
ಹಂತಕರು | Kannada Prabha

ಸಾರಾಂಶ

ಮರ್ಚಂಟ್‌ ನೇವಿ ಅಧಿಕಾರಿ ಪತಿ ಸೌರಭ್ ರಜಪೂತ್‌ರನ್ನು ಕ್ರೂರವಾಗಿ ಕೊಂದು ದೇಹವನ್ನು ತುಂಡರಿಸಿ ಡ್ರಂನಲ್ಲಿ ತುಂಬಿಟ್ಟ ಆರೋಪ ಹೊತ್ತಿರುವ ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ತಮ್ಮನ್ನು ಜೈಲಿನ ಒಂದೇ ಕೋಣೆಯಲ್ಲಿಡಲು ವಿನಂತಿಸಿದ್ದಾರೆ.

ಮೇರಠ್‌ (ಉ.ಪ್ರ.): ಮರ್ಚಂಟ್‌ ನೇವಿ ಅಧಿಕಾರಿ ಪತಿ ಸೌರಭ್ ರಜಪೂತ್‌ರನ್ನು ಕ್ರೂರವಾಗಿ ಕೊಂದು ದೇಹವನ್ನು ತುಂಡರಿಸಿ ಡ್ರಂನಲ್ಲಿ ತುಂಬಿಟ್ಟ ಆರೋಪ ಹೊತ್ತಿರುವ ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ತಮ್ಮನ್ನು ಜೈಲಿನ ಒಂದೇ ಕೋಣೆಯಲ್ಲಿಡಲು ವಿನಂತಿಸಿದ್ದಾರೆ. ಅಲ್ಲದೆ, ಡ್ರಗ್ಸ್‌ ವ್ಯಸನಿಗಳಾಗಿರುವ ಇವರು ಅದಿಲ್ಲದೇ ಒದ್ದಾಡಿದ್ದು, ಡ್ರಗ್ಸ್‌ ಬೇಡಿಕೆ ಇಟ್ಟರು ಎಂದು ಗೊತ್ತಾಗಿದೆ.

ಆದರೆ ಜೈಲಧಿಕಾರಿಗಳು ಅವರ ಕೋರಿಕೆಯನ್ನು ನಿರಾಕರಿಸಿದ್ದಾರೆ. ಪ್ರಸ್ತುತ  ಅಕ್ಕಪಕ್ಕದ ಸೆಲ್‌ಗಳಲ್ಲಿದ್ದಾರೆ.

‘ಜೈಲಿನ ನಿಯಮಗಳ ಪ್ರಕಾರ ಮಹಿಳಾ ಮತ್ತು ಪುರುಷ ಕೈದಿಗಳ ಬ್ಯಾರಕ್‌ಗಳಿಗೆ ಯಾವುದೇ ಸಂಪರ್ಕ ಇರುವಂತಿಲ್ಲ. ಅವರಿಬ್ಬರೂ ಮಾದಕ ವ್ಯಸನಿಗಳಾಗಿದ್ದಾರೆ. ಜೈಲಿನಲ್ಲಿ ಮಾದಕ ವಸ್ತು ಸಿಗದ ಕಾರಣ ತೊಳಲಾಟದಲ್ಲಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹಿರಿಯ ಜೈಲು ಅಧೀಕ್ಷಕ ವಿರೇಶ್ ರಾಜ್ ಶರ್ಮಾ ತಿಳಿಸಿದ್ದಾರೆ.

ವಕೀಲರೂ ಇಲ್ಲ:

‘ಕುಟುಂಬಸ್ಥರು ನನ್ನ ಪರವಾಗಿ ವಾದ ಮಾಡಲು ವಕೀಲರನ್ನು ನೇಮಿಸುವುದಿಲ್ಲ ಎಂದು ತಿಳಿಸಿದ್ದಾರೆ, ಹಾಗಾಗಿ ಸರ್ಕಾರಿ ವಕೀಲರನ್ನು ನನ್ನ ಪರ ವಾದಿಸಲು ನೇಮಿಸಿ’ ಎಂದು ಮುಸ್ಕಾನ್ ವಿನಂತಿ ಮಾಡಿರುವುದಾಗಿಯೂ ಜೈಲಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಿಂಸಾಪೀಡಿತ ಮಣಿಪುರಕ್ಕೆ 1 ವರ್ಷದ ಬಳಿಕ ಸರ್ಕಾರ
ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು