ಮಹಿಳಾ ಮೀಸಲಾತಿ ವಿಧೇಯಕ ಏಕಮತದಿಂದ ಬೆಂಬಲಿಸಿ: ಮೋದಿ

Published : Apr 13, 2026, 12:35 PM IST
narendra modi

ಸಾರಾಂಶ

2029ರಲ್ಲಿ ನಡೆಯಲಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ಮಹಿಳಾ ಮೀಸಲಾತಿ ಅಗತ್ಯವಾಗಿ ಜಾರಿಗೆ ತರಬೇಕು. ಈ ಸಂಬಂಧ ಎಲ್ಲಾ ರಾಜಕೀಯ ಪಕ್ಷಗಳು ಸಂಸತ್ತಿನಲ್ಲಿ ಒಕ್ಕೊರಲಿನಿಂದ ಮಹಿಳಾ ಮೀಸಲಾತಿ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ನೀಡಬೇಕು’  -  ಪ್ರಧಾನಿ ಮೋದಿ

 ನವದೆಹಲಿ: ‘2029ರಲ್ಲಿ ನಡೆಯಲಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ಮಹಿಳಾ ಮೀಸಲಾತಿ ಅಗತ್ಯವಾಗಿ ಜಾರಿಗೆ ತರಬೇಕು. ಈ ಸಂಬಂಧ ಎಲ್ಲಾ ರಾಜಕೀಯ ಪಕ್ಷಗಳು ಸಂಸತ್ತಿನಲ್ಲಿ ಒಕ್ಕೊರಲಿನಿಂದ ಮಹಿಳಾ ಮೀಸಲಾತಿ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ನೀಡಬೇಕು’ ಎಂದು ಪ್ರಧಾನಿ ಮೋದಿ, ಸಂಸತ್ತಿನ 3 ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ ಲೋಕಸಭೆ ಮತ್ತು ರಾಜ್ಯಸಭೆಯ ಸಭಾನಾಯಕರಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಬಲ:

‘ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಹೊಸ ಶಕ್ತಿ ತುಂಬಿ, ಸಾರ್ವಜನಿಕ ವಿಶ್ವಾಸ ಬಲಪಡಿಸಲಿದೆ. ಇದು ಆಡಳಿತದಲ್ಲಿ ಮಹಿಳೆಯರ ಭಾಗೀದಾರಿಕೆ ಹೆಚ್ಚಿಸಲೂ ಅವಕಾಶ ಮಾಡಿಕೊಡುತ್ತದೆ. ಏ.16ರಿಂದ 18ರ ವರೆಗೆ ವಿಶೇಷ ಬಜೆಟ್‌ ಅಧಿವೇಶನ ಕರೆದಿದ್ದು, ಇದು ಪ್ರಜಾಪ್ರಭುತ್ವ ಬಲಪಡಿಸಲು, ಎಲ್ಲರನ್ನೂ ಜತೆಗೆ ಕರೆದೊಯ್ಯಲು ನಮ್ಮ ಬದ್ಧತೆ ಪ್ರದರ್ಶಿಸಲು ಸಿಕ್ಕ ಅವಕಾಶವಾಗಿದೆ. ಈ ವೇಳೆ ಮಹಿಳಾ ಮೀಸಲಾತಿ ವಿಧೇಯಕ ಸೇರಿ ಕೆಲ ವಿಧೇಯಕಗಳ ಕುರಿತು ವಿಸ್ತೃತ ಚರ್ಚೆ ನಡೆಸಿ ಅಂಗೀಕಾರ ಪಡೆಯಲು ಉದ್ದೇಶಿಸಿದೆ’ ಎಂದು ಹೇಳಿದ್ದಾರೆ.

ಮಹಿಳಾ ಮೀಸಲಾತಿ ವಿಧೇಯಕವನ್ನು 2023

ಮಹಿಳಾ ಮೀಸಲಾತಿ ವಿಧೇಯಕವನ್ನು 2023ರಲ್ಲೇ ಅಂಗೀಕರಿಸಿದ್ದು, ಆಗ 2027ರ ಜನಗಣತಿ ಆಧಾರದ ಮೇಲೆ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿತ್ತು. ಆದರೆ, ಆ ರೀತಿಯೇನಾದರೂ ಮಾಡಿದರೆ 2034ರ ವರೆಗೆ ಮೀಸಲಾತಿ ಜಾರಿ ಕಷ್ಟ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೇ ಮಹಿಳಾ ಮೀಸಲಾತಿ ಜಾರಿಗೆ ಉದ್ದೇಶಿಸಿರುವ ಕೇಂದ್ರ ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಹಾ ಐಟಿ ಕಂಪನಿಯಲ್ಲಿ ಕಾರ್ಪೊರೆಟ್‌ ಜಿಹಾದ್‌ ಸದ್ದು!
ಹಾಡು ನಿಲ್ಲಿಸಿದ ಕ್ವೀನ್‌ ಆಫ್‌ ಇಂಡಿಪಾಪ್‌