ನವದೆಹಲಿ: ಹರ್ಯಾಣದ ಕುರುಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಸಂಸದರಾಗಿದ್ದ ಖ್ಯಾತ ಉದ್ಯಮಿ ನವೀನ್ ಜಿಂದಾಲ್ ಅವರು ಕಾಂಗ್ರೆಸ್ ತೊರೆದು ಭಾನುವಾರ ಬಿಜೆಪಿ ಸೇರಿದ್ದಾರೆ.
ಇದರಿಂದಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವ ಯುವ ನಾಯಕರ ಸರಣಿ ಮುಂದುವರಿದುದ್ದು, ಲೋಕಸಭೆ ಚುನಾವಣೆಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಪಡೆಗೆ ದೊಡ್ಡ ಹಿನ್ನಡೆಯಾಗಿದೆ.
ಇದೇ ವೇಳೆ, ಹರ್ಯಾಣದ ಚೌಟಾಲಾ ಕುಟುಂಬದ ಹಿರಿಯ ಸದಸ್ಯ ಹಾಗೂ ಮಾಜಿ ಸಚಿವ ರಂಜಿತ್ ಚೌಟಾಲಾ ಅವರೂ ಬಿಜೆಪಿ ಸೇರಿದ್ದಾರೆ. ಅವರು ಹರ್ಯಾಣದ ಹಿಸಾರ್‌ನಿಂದ ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ.