50 ಕೇಸಲ್ಲಿ ಬೇಕಿದ್ದ ಕುಖ್ಯಾತ ನಕ್ಸಲ್‌ ಕಾಶಿಯಲ್ಲಿ ಹತ್ಯೆ

KannadaprabhaNewsNetwork |  
Published : Sep 21, 2026, 03:45 AM IST
Naxal

ಸಾರಾಂಶ

ಸುಮಾರು 50 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಾಗೂ 30 ಲಕ್ಷ ರು. ಇನಾಮು ಹೊಂದಿದ್ದ ಕುಖ್ಯಾತ ನಕ್ಸಲ್‌ ಬ್ರಿಜೇಶ್‌ ಗುಂಜು ಭಾನುವಾರ ಉತ್ತರಪ್ರದೇಶದ ವಾರಾಣಸಿಯಲ್ಲಿ ಭಯೋತ್ಪಾದನಾ ನಿಗ್ರಹ ದಳ ನಡೆಸಿದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

ವಾರಣಾಸಿ : ಸುಮಾರು 50 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಾಗೂ 30 ಲಕ್ಷ ರು. ಇನಾಮು ಹೊಂದಿದ್ದ ಕುಖ್ಯಾತ ನಕ್ಸಲ್‌ ಬ್ರಿಜೇಶ್‌ ಗುಂಜು ಭಾನುವಾರ ಉತ್ತರಪ್ರದೇಶದ ವಾರಾಣಸಿಯಲ್ಲಿ ಭಯೋತ್ಪಾದನಾ ನಿಗ್ರಹ ದಳ ನಡೆಸಿದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

ನಿಷೇಧಿತ ತೃತೀಯ ಪ್ರಸ್ತುತಿ ಸಮಿತಿ (ಟಿಪಿಸಿ) ಪ್ರಮುಖ ಸದಸ್ಯನಾಗಿದ್ದ

ನಿಷೇಧಿತ ತೃತೀಯ ಪ್ರಸ್ತುತಿ ಸಮಿತಿ (ಟಿಪಿಸಿ) ಪ್ರಮುಖ ಸದಸ್ಯನಾಗಿದ್ದ ಈತ 1996ರಿಂದಲೂ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. 2 ದಶಕಗಳಿಂದ ತಲೆ ಮರೆಸಿಕೊಂಡಿದ್ದ. ಆತ ವಾರಣಾಸಿ ಪ್ರವೇಶಿಸಿದ್ದಾನೆ ಎನ್ನುವ ಖಚಿತ ಮಾಹಿತಿ ಮೇಲೆ ಎಟಿಎಸ್‌ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.

ಗುಂಜು ಹಾಗೂ ಆತನ ಸಹಚರ ದಾಳಿ

ಲಂಕಾ ಮೈದಾನ ಕಡೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ತಡೆದು ನಿಲ್ಲಿಸಿದಾಗ ಸಿಬ್ಬಂದಿ ಮೇಲೆ ಗುಂಜು ಹಾಗೂ ಆತನ ಸಹಚರ ದಾಳಿ ನಡೆಸಿದ್ದಾರೆ. ಈ ವೇಳೆ ಎಟಿಎಸ್‌ ಸಿಬ್ಬಂದಿ ಗುಂಡು ಹಾರಿಸಿದ್ದು, ಬ್ರಿಜೇಶ್‌ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ಆತನ ಸಹಚರ ಪರಾರಿಯಾಗಿದ್ದಾನೆ.

ಚಕಮಕಿಯಲ್ಲಿ ಇಬ್ಬರು ಸಿಬ್ಬಂದಿ ಕೂಡ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಎನ್‌ಕೌಂಟರ್ ಸ್ಥಳದಿಂದ ಎರಡು ಪಿಸ್ತೂಲ್‌ಗಳು, ಒಂದು ಕಾರ್ಬೈನ್, ದೊಡ್ಡ ಪ್ರಮಾಣದ ಮದ್ದುಗುಂಡುಗಳು ಮತ್ತು 1 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಚು.ಆಯುಕ್ತ, ಜೈಶಂಕರ್‌,ಸೂದ್‌ಗೆ SIR ನೋಟಿಸ್‌- ದಾಖಲೇಲಿ ಗೊಂದಲ ಕಾರಣ ನೋಟಿಸ್‌
ಪೆರಿಯಾರ್‌ರ ಬ್ರಾಹ್ಮಣ ವಿರೋಧಿ ನಡೆ ಒಪ್ಪಲ್ಲ : ಅಣ್ಣಾಮಲೈ ಸ್ಪಷ್ಟನೆ