ಕಾಂಗ್ರೆಸ್‌ಗೆ ಮಿತ್ರರ ಬಳಸಿ ಎಸೆವ ಕೆಟ್ಟ ಚಾಳಿ: ಪ್ರಧಾನಿ ಮೋದಿ ಕಿಡಿ ಮೋದಿ

KannadaprabhaNewsNetwork |  
Published : Mar 18, 2024, 01:51 AM ISTUpdated : Mar 18, 2024, 07:55 AM IST
ಪ್ರಧಾನಿ ಮೋದಿ Kannada Prabha

ಸಾರಾಂಶ

ಪ್ರಾದೇಶಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಪ್ರಗತಿಯೊಂದಿಗೆ ಎನ್‌ಡಿಎ ಮುನ್ನಡೆಯುತ್ತದೆ ಮತ್ತು ಚುನಾವಣೆಯ ನಂತರ ನನ್ನ 3ನೇ ಅವಧಿಯಲ್ಲಿ ದೇಶವು ಇನ್ನೂ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಪಿಟಿಐ ಅಮರಾವತಿ (ಆಂಧ್ರ)

‘ಪ್ರಾದೇಶಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಪ್ರಗತಿಯೊಂದಿಗೆ ಎನ್‌ಡಿಎ ಮುನ್ನಡೆಯುತ್ತದೆ ಮತ್ತು ಚುನಾವಣೆಯ ನಂತರ ನನ್ನ 3ನೇ ಅವಧಿಯಲ್ಲಿ ದೇಶವು ಇನ್ನೂ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಬೊಪ್ಪುಡಿ ಗ್ರಾಮದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ನಾಯಕ ಪವನ್‌ ಕಲ್ಯಾಣ್‌ ಜತೆಗೂಡಿ ಎನ್‌ಡಿಎ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ‘ವಿಕಸಿತ ಭಾರತ’ ಹಾಗೂ ‘ವಿಕಸಿತ ಆಂಧ್ರಪ್ರದೇಶ’ವು ಎನ್‌ಡಿಎ ಗುರಿ. 

ಇದೇ ಗುರಿ ಆಧರಿಸಿ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಆಂಧ್ರದಲ್ಲಿ ಡಬಲ್ ಎಂಜಿನ್‌ನ ಎನ್‌ಡಿಎ ಸರ್ಕಾರವು ರಾಜ್ಯದ ತ್ವರಿತ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ. 

ಇಡೀ ವಿಶ್ವದಲ್ಲಿ ಎನ್‌ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಯಾಗುತ್ತಿದೆ’ ಎಂದು ಹೇಳಿದರು.‘ನಿನ್ನೆ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 

ಜೂ.4 ರಂದು (ಎಣಿಕೆಯ ದಿನ), ಎನ್‌ಡಿಎಗೆ 400 ಸೀಟು ಬಂದಿವೆ ಎಂದು ಇಡೀ ದೇಶ ಹೇಳುತ್ತದೆ’ ಎಂದು ಪ್ರಧಾನಿ ಹೇಳಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ತನ್ನ ಮೈತ್ರಿ ಪಾಲುದಾರರನ್ನು ಬಳಸಿಕೊಳ್ಳುವುದು ಮತ್ತು ಎಸೆಯುವುದು ಹಳೆಯ ಪಕ್ಷದ ಕಾರ್ಯಸೂಚಿಯಾಗಿದೆ’ ಎಂದು ಟೀಕಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !