ಭಾರತದಲ್ಲೂ ದಂಗೆ ಆಗಲಿ : ಅಭಯ್‌ ಚೌಟಾಲ ವಿವಾದ

KannadaprabhaNewsNetwork |  
Published : Jan 03, 2026, 03:15 AM ISTUpdated : Jan 03, 2026, 07:28 AM IST
Abhay Singh Chautala

ಸಾರಾಂಶ

‘ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಲ್ಲಿ ದಂಗೆಯಾಗಿ ಸರ್ಕಾರವನ್ನು ಕಿತ್ತೊಗೆದಂತೆ, ಭಾರತದಲ್ಲಿಯೂ ಯುವಕರು ದಂಗೆ ಎಬ್ಬಿಸಿ, ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಐಎನ್‌ಎಲ್‌ಡಿ ಪಕ್ಷದ ನಾಯಕ ಅಭಯ್‌ ಚೌಟಾಲಾ ಹೇಳಿಕೆ ನೀಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ಚಂಡೀಗಢ : ‘ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಲ್ಲಿ ದಂಗೆಯಾಗಿ ಸರ್ಕಾರವನ್ನು ಕಿತ್ತೊಗೆದಂತೆ, ಭಾರತದಲ್ಲಿಯೂ ಯುವಕರು ದಂಗೆ ಎಬ್ಬಿಸಿ, ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಐಎನ್‌ಎಲ್‌ಡಿ ಪಕ್ಷದ ನಾಯಕ ಅಭಯ್‌ ಚೌಟಾಲಾ ಹೇಳಿಕೆ ನೀಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ಇದೇ ರೀತಿಯ ತಂತ್ರಗಳು ಭಾರತದಲ್ಲಿಯೂ ಆಗಬೇಕು

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೌಟಾಲಾ, ‘ಶ್ರೀಲಂಕಾದಲ್ಲಿ ಅಲ್ಲಿನ ಯುವಜನತೆಯು ದಂಗೆ ಶುರು ಮಾಡಿ ಸರ್ಕಾರವನ್ನು ಕಿತ್ತೊಗೆದರು. ಅದೇ ರೀತಿ ಬಾಂಗ್ಲಾದ ದಂಗೆಯೂ ಸರ್ಕಾರದ ಪತನಕ್ಕೆ ಕಾರಣವಾಯಿತು. ನೇಪಾಳದ ಪ್ರತಿಭಟನೆಯು ಸರ್ಕಾರ ಮುಗ್ಗರಿಸಲು ಸಾಕ್ಷಿಯಾಯಿತು. ಇದೇ ರೀತಿಯ ತಂತ್ರಗಳು ಭಾರತದಲ್ಲಿಯೂ ಆಗಬೇಕು. ಆಗ ಇಲ್ಲಿನ ಸರ್ಕಾರವೂ ಬೀಳುತ್ತದೆ’ ಎಂದರು.

ಬಿಜೆಪಿ ಕಿಡಿ:

ಚೌಟಾಲಾ ಹೇಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ, ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಸಿರುವ ಭರದಲ್ಲಿ ವಿರೋಧಿ ಮುಖಗಳು ‘ಭಾರತ ವಿರೋಧಿ, ಸಂವಿಧಾನ ವಿರೋಧಿ ಮತ್ತು ಪ್ರಜಾಸತ್ತಾತ್ಮಕ ವಿರೋಧಿ’ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ ಸರ್ಕಾರದ ವಿರುದ್ಧ ಭಾರಿ ಜನತಾ ದಂಗೆ
ಗಿಗ್‌ ಕಾರ್ಮಿಕರ ಸೇವಾ ಭದ್ರತೆಗೆ ಕೇಂದ್ರ ನಿಯಮ