ನೆತನ್ಯಾಹು ಮತ್ತೆ 3 ವಿಡಿಯೋ, ಎರಡೂ ನಕಲಿ ?

KannadaprabhaNewsNetwork |  
Published : Mar 18, 2026, 01:15 AM IST
Netanyahu

ಸಾರಾಂಶ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಮೃತಪಟ್ಟಿದ್ದಾರೆ ಎಂಬ ವದಂತಿಗೆ ತೆರೆ ಎಳೆಯುವ ಸಲುವಾಗಿ ಅವರ ಎಕ್ಸ್‌ ಖಾತೆಯಲ್ಲಿ ಮಂಗಳವಾರ ಮತ್ತೆ ಎರಡು ವಿಡಿಯೋ ಪೋಸ್ಟ್‌ ಮಾಡಲಾಗಿದೆ. ಆದರೆ ಈ ಪೋಸ್ಟ್‌ಗಳು ಕೂಡಾ ನಕಲಿ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ನೆತನ್ಯಾಹು ಜೀವಂತ ಇರುವ ಬಗ್ಗೆ ಅನುಮಾನಗಳು ಮುಂದುವರೆದಿವೆ.

ಜೆರುಸಲೇಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಮೃತಪಟ್ಟಿದ್ದಾರೆ ಎಂಬ ವದಂತಿಗೆ ತೆರೆ ಎಳೆಯುವ ಸಲುವಾಗಿ ಅವರ ಎಕ್ಸ್‌ ಖಾತೆಯಲ್ಲಿ ಮಂಗಳವಾರ ಮತ್ತೆ ಎರಡು ವಿಡಿಯೋ ಪೋಸ್ಟ್‌ ಮಾಡಲಾಗಿದೆ. ಆದರೆ ಈ ಪೋಸ್ಟ್‌ಗಳು ಕೂಡಾ ನಕಲಿ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ನೆತನ್ಯಾಹು ಜೀವಂತ ಇರುವ ಬಗ್ಗೆ ಅನುಮಾನಗಳು ಮುಂದುವರೆದಿವೆ.

ವಿಡಿಯೋದಲ್ಲೇನಿದೆ?:

ಮೊದಲಿಗೆ ಪರ್ಶಿಯನ್ನರ ಹೊಸ ವರ್ಷವಾದ ನೌರುಜ್‌ಗೆ ನೆತನ್ಯಾಹು ಶುಭಕೋರಿದ ವಿಡಿಯೋ ಪೋಸ್ಟ್‌ ಮಾಡಲಾಗಿದೆ. ಬಳಿಕ, ಇರಾನ್‌ನ ಹಿರಿಯ ಭದ್ರತಾ ಅಧಿಕಾರಿ ಲಾರಿಜಾನಿ ಹತ್ಯೆ ಮತ್ತು ಮುಂದಿನ ದಿನಗಳಲ್ಲಿ ಇರಾನ್‌ ಮೇಲೆ ಮತ್ತಷ್ಟು ದಾಳಿ ಮಾಡುವ ಕುರಿತು ನೆತನ್ಯಾಹು ಮಾತನಾಡಿದ ವಿಡಿಯೋ ಇದೆ. ನಂತರ ಅವರು ಇಸ್ರೇಲ್‌ಗೆ ಅಮೆರಿಕದ ರಾಯಭಾರಿಯಾಗಿರುವವರ ಜತೆ ಮಾತನಾಡುತ್ತಿರುವ ವಿಡಿಯೋ ಪೋಸ್ಟ್‌ ಮಾಡಲಾಗಿದೆ.

ಆದರೆ ಇವೆರಡೂ ಎಐ ಸೃಷ್ಟಿತ ಎಂಬ ಅನುಮಾನ ಮೂಡಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಒಂದು ವಿಡಿಯೋದಲ್ಲಿ ನೆತನ್ಯಾಹು ಅವರ ಹಲ್ಲುಗಳು ಅದೃಶ್ಯವಾಗಿರುವುದು ಕಂಡುಬಂದಿದೆ. ಜತೆಗೆ ಕೆಲವೇ ನಿಮಿಷಗಳ ಅಂತರದಲ್ಲಿ ಪೋಸ್ಟ್‌ ಆದ ಎರಡೂ ವಿಡಿಯೋಗಳಲ್ಲಿ ಹಲವು ಸೂಕ್ಷ್ಮ ಭಿನ್ನತೆಗಳು ಕಂಡುಬಂದಿವೆ.

ಹಿಂದೇನಾಗಿತ್ತು?: 

ಕೆಲ ದಿನಗಳ ಹಿಂದಿನ ವಿಡಿಯೋದಲ್ಲಿ ನೆತನ್ಯಾಹು ಕೈಯ್ಯಲ್ಲಿ 6 ಬೆರಳುಗಳು ಕಂಡುಬಂದಿದ್ದು, ಅದು ಎಐ ನಿರ್ಮಿತ ಎಂಬ ವಾದ ಜೋರಾಗಿ ಕೇಳಿಬಂದಿತ್ತು. ಇದಕ್ಕೆ ಸ್ಪಷ್ಟನೆ ನೀಡಲು ಅವರು ಕಾಫಿ ಕೆಫೆಯಲ್ಲಿ ಮಾತನಾಡಿ, ತಮ್ಮೆರಡೂ ಕೈಗಳನ್ನು ತೋರಿಸಿದ್ದರು. ಅದೂ ಎಐ ಕೃಪೆಯಿಂದಾದ ವಿಡಿಯೋ ಎಂಬ ಚರ್ಚೆಗೆ, ಸಾರ್ವಜನಿಕರೊಂದಿಗೆ ಬೆರೆತ ಇನ್ನೊಂದು ವಿಡಿಯೋ ಉತ್ತರವಾಗಿ ಬಂದಿತ್ತು. ಅದರಲ್ಲೂ ಹಲವು ಲೋಪಗಳು ಕಂಡುಬಂದಿದ್ದವು. ಇದೀಗ ಇನ್ನೆರಡು ವಿಡಿಯೋಗಳು ಪೋಸ್ಟ್‌ ಆಗಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

- ಇಂದು 5 ರಾಜ್ಯಗಳ ವಿಧಾನಸಭಾ ಫಲಿತಾಂಶ - ಪಂಚ ಗದ್ದುಗೆ ಯಾರಿಗೆ?
ಖಲಿಸ್ತಾನಿ ಧ್ವಜ ಪ್ರದರ್ಶನಕ್ಕೆ ಹಾಡು ನಿಲ್ಲಿಸಿ ಗಾಯಕ ದಿಲ್ಜೀತ್‌ ಗರಂ