1000 ವರ್ಷ ಪುರಾತನ ತಾಮ್ರ ಫಲಕ ಮರಳಿಸಿದ ನೆದರ್ಲೆಂಡ್‌

KannadaprabhaNewsNetwork |  
Published : May 17, 2026, 01:15 AM IST
Modi

ಸಾರಾಂಶ

ಸದ್ಯ ನೆದರ್ಲೆಂಡ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ಅನ್ನೈಮಂಗಲಂ ತಾಮ್ರದ ಫಲಕಗಳನ್ನು ಹಸ್ತಾಂತರಿಸಿದೆ. ರಾಜೇಂದ್ರ ಚೋಳ I ಕಾಲದ ಈ ತಾಮ್ರ ಫಲಕದಲ್ಲಿನ ಕೆತ್ತನೆಗಳು ಹಸ್ತಾಂತರ

ಹೇಗ್‌: ಸದ್ಯ ನೆದರ್ಲೆಂಡ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ಅನ್ನೈಮಂಗಲಂ ತಾಮ್ರದ ಫಲಕಗಳನ್ನು ಹಸ್ತಾಂತರಿಸಿದೆ.

ನೆದರ್ಲೆಂಡ್‌ನಲ್ಲಿ ಲೈಡೆನ್ ಫಲಕಗಳು

ನೆದರ್ಲೆಂಡ್‌ನಲ್ಲಿ ಲೈಡೆನ್ ಫಲಕಗಳು ಎಂದು ಕರೆಯಲ್ಪಡುವ ಅನ್ನೈಮಂಗಲಂ ಅನ್ನು ಭಾರತಕ್ಕೆ ಮರಳಿ ತರಲು 2012ರಿಂದಲೂ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಕೊನೆಗೂ ಫಲಪ್ರದವಾಗಿದೆ. ರಾಜೇಂದ್ರ ಚೋಳ I ಕಾಲದ ಈ ತಾಮ್ರ ಫಲಕದಲ್ಲಿನ ಕೆತ್ತನೆಗಳು ತಮಿಳು ಭಾಷೆಯಲ್ಲಿದೆ. ಇದು 21 ದೊಡ್ಡ ಫಲಕ ಮತ್ತು 3 ಸಣ್ಣ ಫಲಕಗಳನ್ನು ಹೊಂದಿದ್ದು, 30 ಕೇಜಿ ತೂಕ ಹೊಂದಿದ್ದು ಉಂಗುರದಿಂದ ಬಂಧಿಸಲ್ಪಟ್ಟಿದೆ. 

ನೆದರ್ಲೆಂಡ್‌ ತಲುಪಿದ್ದು ಹೇಗೆ?:

ತಮಿಳುನಾಡಿನ ನಾಗಪಟ್ಟಣಂ ಡಚ್‌ ಈಸ್ಟ್‌ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಡಚ್‌ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬಾತ 1703-1712ರ ಅವಧಿಯಲ್ಲಿ ಈ ಶಾಸನಗಳನ್ನು ವಶಪಡಿಸಿಕೊಂಡಿದ್ದ. ಆ ಬಳಿಕ ಕಾಲಾಂತರದಲ್ಲಿ ಅದು ಲೈಡೆನ್ ವಿವಿ ಸೇರಿತ್ತು. ಅಲ್ಲಿ ನಿಬಂಧನೆಗಳೊಂದಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇನ್ನು ಮುಂದೆ ಪಿಎಫ್‌ಗೆ ಮಾಸಿಕ 1,800 ಕಡಿತ ಕಡ್ಡಾಯ!
ಅಯೋಧ್ಯೆ ಅಕ್ರಮ : ವಕೀಲರ ಭಾರಿ ಪ್ರತಿಭಟನೆ