ನರೇಂದ್ರ ಮೋದಿಗೇಕೆ ಮತ ಹಾಕಬೇಕು: 101 ಕಾರಣ ನೀಡುವ ಕಾಮಿಕ್‌ ಬಿಡುಗಡೆ

KannadaprabhaNewsNetwork |  
Published : Mar 19, 2024, 12:45 AM ISTUpdated : Mar 19, 2024, 09:13 AM IST
ಮೋದಿ | Kannada Prabha

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಾವೇಕೆ ಮತ ಹಾಕಬೇಕು ಎಂಬುದನ್ನು 101 ಕಾರಣಗಳ ಸಮೇತ ವರ್ಣಿಸುವ ಕಾಮಿಕ್‌ ಪುಸ್ತಕವೊಂದು ಬಿಡುಗಡೆಯಾಗಿದೆ.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಾವೇಕೆ ಮತ ಹಾಕಬೇಕು ಎಂಬುದನ್ನು 101 ಕಾರಣಗಳ ಸಮೇತ ವರ್ಣಿಸುವ ಕಾಮಿಕ್‌ ಪುಸ್ತಕವೊಂದು ಬಿಡುಗಡೆಯಾಗಿದೆ. 

ಬರಹಗಾರ ಶಂತನು ಗುಪ್ತಾ ಈ ಪುಸ್ತಕ ಹೊರತಂದಿದ್ದಾರೆ. ಇದು ಮೋದಿಗೆ ಮತ ಹಾಕುವಂತೆ ಮತದಾರರನ್ನು ಉತ್ತೇಜಿಸುತ್ತದೆ. 

ಪುಸ್ತಕವನ್ನು ತಯಾರಿಸಲು ಅರೆ-ವಾಸ್ತವಿಕ ಶೈಲಿ, ಮಂಗಾ ಮತ್ತು ಡಿಸ್ನಿ ಶೈಲಿ, ಸಾಂಪ್ರದಾಯಿಕ ಭಾರತೀಯ ಕಾಮಿಕ್ ಪುಸ್ತಕ ಶೈಲಿ ಮತ್ತು ಕಪ್ಪು-ಬಿಳಿ ಶೈಲಿಯನ್ನು ಒಳಗೊಂಡಂತೆ 10 ಅಂತರರಾಷ್ಟ್ರೀಯ ಪ್ರಸಿದ್ಧ ಕಲಾ ಶೈಲಿ ಬಳಸಲಾಗಿದೆ. 

ಪುಸ್ತಕವು ಆರೋಗ್ಯ, ರಕ್ಷಣೆ, ಕೃಷಿ, ಶಿಕ್ಷಣ, ಸಶಸ್ತ್ರ ಪಡೆ, ವಿದೇಶಾಂಗ ನೀತಿ, ಆರ್ಥಿಕತೆ, ಉದ್ಯೋಗ, ಮೂಲಸೌಕರ್ಯ ಮತ್ತು ಭಾರತದ ಸಾಂಸ್ಕೃತಿಕ ಪುನರುಜ್ಜೀವನಕ್ಕಾಗಿ ಮೋದಿಯವರ ಕೆಲಸದ ಬಗ್ಗೆ ತಿಳಿಸುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಶ್ಮಿಕಾ-ವಿಜಯ್‌ ಮದುವೆ ಪ್ರಸಾರಕ್ಕೆ ₹60 ಕೋಟಿ ಆಫರ್‌!
ಬ್ರಹ್ಮಪುತ್ರಾ ನದಿ ಮೇಲೆ ಅತ್ಯಾಧುನಿಕ 6 ಪಥದ ಸೇತುವೆ