ಕೃಷಿ ಕೆಲಸ ಸುಲಭವಾಗಿಸಲು ಹೊಸ ಓಜಾ ಟ್ರ್ಯಾಕ್ಟರ್‌

Published : Aug 24, 2026, 11:43 AM IST
Nasik

ಸಾರಾಂಶ

ಮಹೀಂದ್ರಾ ಟ್ರ್ಯಾಕ್ಟರ್ಸ್ ಆರು ದಶಕಗಳಿಂದ ರೈತರ ವಿಶ್ವಾಸ ಗಳಿಸಿರುವ ಹೆಸರು. ದೇಶದ ನಂ.1 ಟ್ರ್ಯಾಕ್ಟರ್ ಬ್ರ್ಯಾಂಡ್. 2023ರಲ್ಲಿ ಓಜಾ ಮೂಲಕ ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿ ಕ್ಷೇತ್ರಕ್ಕೆ ಹೊಸ ಮುನ್ನುಡಿ ಬರೆದಿತ್ತು

 ನವ್ಯಶ್ರೀ ಶೆಟ್ಟಿ

 ನಾಸಿಕ್ : ಮಹೀಂದ್ರಾ ಟ್ರ್ಯಾಕ್ಟರ್ಸ್ ಆರು ದಶಕಗಳಿಂದ ರೈತರ ವಿಶ್ವಾಸ ಗಳಿಸಿರುವ ಹೆಸರು. ದೇಶದ ನಂ.1 ಟ್ರ್ಯಾಕ್ಟರ್ ಬ್ರ್ಯಾಂಡ್. 2023ರಲ್ಲಿ ಓಜಾ ಮೂಲಕ ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿ ಕ್ಷೇತ್ರಕ್ಕೆ ಹೊಸ ಮುನ್ನುಡಿ ಬರೆದಿತ್ತು. ಇದೀಗ ಓಜಾ ಸರಣಿ ಮೂರು ವರ್ಷ ಪೂರೈಸಿರುವ ಹೊತ್ತಲ್ಲಿ ಹೊಸ ಸರಣಿಯ ಟ್ರ್ಯಾಕ್ಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ನಾಸಿಕ್‌ನ ಸೋಮ ವೈನ್‌ಯಾರ್ಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೀಂದ್ರಾ ಓಜಾದ ಹೊಸ ಸರಣಿಯ ಟ್ರ್ಯಾಕ್ಟರ್‌ಗಳನ್ನು ಅನಾವರಣಗೊಳಿಸಲಾಯಿತು. ಮಹೀಂದ್ರಾ ಟ್ರ್ಯಾಕ್ಟರ್ಸ್, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ 21ರಿಂದ 30 ಹೆಚ್‌ಪಿ ಟ್ರ್ಯಾಕ್ಟರ್ ವಿಭಾಗ ಗಮನದಲ್ಲಿಟ್ಟುಕೊಂಡು ಸರಣಿ ಅಭಿವೃದ್ಧಿಪಡಿಸಲಾಗಿದೆ.

ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆಗಳು, ಕಬ್ಬು, ಅಂತರಬೆಳೆ ಕೃಷಿಯಲ್ಲಿ ಸುಲಭವಾಗಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಸಮತಟ್ಟಲ್ಲದ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸಬಲ್ಲದು. ಗಿಡಗಳ ಸಾಲುಗಳ ನಡುವೆಯೂ ಸುಲಭವಾಗಿ ಚಲಿಸಬಲ್ಲದು.

ಸುಲಭ ಸ್ಟೀರಿಂಗ್‌ ವಿಶೇಷ:

ರೈತರ ಅಗತ್ಯಕ್ಕೆ ತಕ್ಕಂತೆ ಸುಲಭ ನಿಯಂತ್ರಣ ವ್ಯವಸ್ಥೆ ಹೊಂದಿರುವ ಸ್ಟೀರಿಂಗ್ ಇದರ ಪ್ರಮುಖ ವೈಶಿಷ್ಟ್ಯ. 3 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಇಂಧನ ದಕ್ಷತೆ ಉತ್ತಮವಾಗಿದೆ. ಓಜಾ ಸರಣಿಯಲ್ಲಿ Proja Tech Pack ಮೂಲಕ ಎಲೆಕ್ಟ್ರಾನಿಕ್ ಪವರ್ ಟೇಕ್-ಆಫ್ (ePTO), ಎಲೆಕ್ಟ್ರಾನಿಕ್ ಡ್ರಾಫ್ಟ್ ಮತ್ತು ಡೆಪ್ತ್ ಕಂಟ್ರೋಲ್ (eDDC), ಫಾರ್ವರ್ಡ್-ರಿವರ್ಸ್ ಶಟಲ್ ಹಾಗೂ ಕ್ರೀಪರ್ ಮೋಡ್‌ನಂತಹ ಆಧುನಿಕ ಸೌಲಭ್ಯಗಳಿವೆ.

ಚಾಲಕರ ಅನುಕೂಲಕ್ಕಾಗಿ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ಹಾಗೂ ಸೈಡ್-ಶಿಫ್ಟ್ ಗೇರ್ ಕಂಟ್ರೋಲ್‌ಗಳನ್ನು ಅಳವಡಿಸಲಾಗಿದೆ. ದೀರ್ಘಕಾಲ ಟ್ರ್ಯಾಕ್ಟರ್ ಚಾಲನೆ ಮಾಡುವಾಗ ಚಾಲಕರ ಆಯಾಸವನ್ನು ಕಡಿಮೆ ಮಾಡಲು ಈ ಸೌಲಭ್ಯಗಳು ಸಹಕಾರಿಯಾಗಲಿವೆ.

ಇದರ ಜೊತೆಗೆ MyOJA ತಂತ್ರಜ್ಞಾನದ ಮೂಲಕ ಟೆಲಿಮ್ಯಾಟಿಕ್ಸ್ ವ್ಯವಸ್ಥೆ ಹಾಗೂ RoboJA ಟೆಕ್ ಪ್ಯಾಕ್ ಮೂಲಕ ಆಟೋ ಪಿಟಿಒ( Auto PTO), ಆಟೋ ಇಂಪ್ಲಿಮೆಂಟ್‌ ಲಿಫ್ಟ್‌ ( Auto Implement Lift) ಮತ್ತು ಆಟೋ ಒನ್‌ಸೈಡ್‌ ಬ್ರೇಕಿಂಗ್‌ ( Auto One-side Braking) ಸೇರಿದಂತೆ ಹಲವು ಸ್ವಯಂಚಾಲಿತ ಸೌಲಭ್ಯಗಳನ್ನು ಒದಗಿಸಲಾಗಿದೆ.ಇದು ಬೆಳೆಗಳಿಗೆ ಹಾನಿಯಾಗದಂತೆ ಗಿಡಗಳ ಸಾಲುಗಳ ನಡುವೆ ಸುಲಭವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಇಂಧನ ದಕ್ಷತೆ ಹಾಗೂ ಗ್ರಾಹಕರ ಅಗತ್ಯಕ್ಕನುಗುಣವಾಗಿ ವಿನ್ಯಾಸಗೊಳಿಸಿರುವ ಈ ಟ್ರ್ಯಾಕ್ಟರ್‌ಗಳು ಕೃಷಿ ಕಾರ್ಯಗಳ ವೆಚ್ಚವನ್ನು ಕಡಿಮೆ ಮಾಡಲಿದೆ. ಇತರ ಟ್ರ್ಯಾಕ್ಟರ್‌ಗಳಿಗೆ ಹೋಲಿಸಿದರೆ ನಿರ್ವಹಣೆ ಮತ್ತು ದುರಸ್ತಿ ವೆಚ್ಚ ಕಡಿಮೆ. ಆರು ವರ್ಷಗಳ ವಾರಂಟಿ ನೀಡಲಾಗುತ್ತಿದ್ದು, ಹಗುರ ತೂಕದ ನಾಲ್ಕು ಚಕ್ರ ಚಾಲಿತ (4WD) ಟ್ರ್ಯಾಕ್ಟರ್‌ಗಳ ವಿಭಾಗದಲ್ಲಿ ಇದು ಪ್ರಮುಖ ಆಕರ್ಷಣೆಯಾಗಿದೆ.

ಕರ್ನಾಟಕದಲ್ಲಿ ಮುಂಚೂಣಿ ಮಾರುಕಟ್ಟೆ

ಓಜಾ ಸರಣಿಯು ಕೇವಲ ತೋಟಗಾರಿಕೆ ಬೆಳೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಭತ್ತ ಸೇರಿದಂತೆ ವಿವಿಧ ಕೃಷಿಯಲ್ಲಿಯೂ ಇದರ ಬಳಕೆ ಹೆಚ್ಚುತ್ತಿದೆ. ವಿಶೇಷವಾಗಿ ಅಡಕೆ ಕೃಷಿಯಲ್ಲಿ ಕರ್ನಾಟಕದಲ್ಲಿ ಉತ್ತಮ ಬೇಡಿಕೆ ಕಂಡುಬಂದಿದೆ. ಅಡಕೆ ಬೆಳೆಗಾರರು ಓಜಾ ಬಳಸುತ್ತಿರುವ ಪ್ರಮಾಣದಲ್ಲಿ ಕರ್ನಾಟಕವೂ ಅಗ್ರ ಸ್ಥಾನಗಳಲ್ಲೊಂದು. ಓಜಾಗೆ ಮಹಾರಾಷ್ಟ್ರದ ಬಳಿಕ ಕರ್ನಾಟಕವು ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಈ ಬಗ್ಗೆ ಮಹೀಂದ್ರಾ ಟ್ರ್ಯಾಕ್ಟರ್ಸ್‌ನ ಸಿಇಒ ಹರ್ಷ್ ರಾಯ್ ಮಾತನಾಡಿ, ‘ಇಂದು ಕೃಷಿಯಲ್ಲಿ ರೈತರಿಗೆ ಬೆಳೆ ಆಧಾರಿತ ಹಾಗೂ ತಂತ್ರಜ್ಞಾನ ಆಧಾರಿತ ಯಾಂತ್ರೀಕರಣದ ಅಗತ್ಯ ಹೆಚ್ಚುತ್ತಿದೆ. ರೈತರು ಹೆಚ್ಚಿನ ಉತ್ಪಾದನೆ ಮತ್ತು ಆದಾಯ ಪಡೆಯಲು ನೆರವಾಗುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವ ದೃಷ್ಟಿಯಿಂದ ಓಜಾದ ಹೊಸ ಸರಣಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.

ಮಹೀಂದ್ರಾ ಟ್ರ್ಯಾಕ್ಟರ್ಸ್‌ನ ಹಿರಿಯ ಉಪಾಧ್ಯಕ್ಷ ಹಾಗೂ ಮಾರ್ಕೆಟಿಂಗ್ ಮತ್ತು ನ್ಯಾಷನಲ್ ಬಿಸಿನೆಸ್ ಆಪರೇಷನ್ಸ್ ಮುಖ್ಯಸ್ಥ ಪರೀಕ್ಷಿತ್ ಘೋಷ್ ಮಾತನಾಡಿ, ‘ತೋಟಗಾರಿಕೆ ಬೆಳೆಗಳು, ಕಬ್ಬು ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರಲ್ಲಿ ಓಜಾ ವಿಶ್ವಾಸ ಗಳಿಸಿದೆ. ಬೆಳೆ ಹಾಗೂ ಕೃಷಿ ವಿಧಾನಕ್ಕೆ ಅನುಗುಣವಾಗಿ ಹಲವು ಮಾದರಿಗಳಲ್ಲಿ ಓಜಾ ಲಭ್ಯ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿರಳೆ ಹೋರಾಟದಿಂದ ರಾಜಸ್ಥಾನ ಹಳ್ಳಿಗೆ ಸಿಕ್ಕಿತು ಹೊಸ ಶಾಲೆ ಕಟ್ಟಡ!
ಮಂಗಳೂರಿಗಾಗಿ ಕೇರಳಂ ಸಂಸದರ ಓಣಂ ನಿರಶನ!