ಜ.14ರ ನಂತರ ನಿತಿನ್‌ಗೆ ಬಿಜೆಪಿ ಅಧ್ಯಕ್ಷ ಗಾದಿ?

KannadaprabhaNewsNetwork |  
Published : Dec 16, 2025, 01:45 AM IST
ನಿತಿನ್‌ | Kannada Prabha

ಸಾರಾಂಶ

ಬಿಜೆಪಿ ದೀಢೀರನೇ ಏಕೆ ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಿತು ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಬಿಜೆಪಿ ನಾಯಕರ ಪ್ರಕಾರ, ಕಾರ್ಯಕಾರಿ ಅಧ್ಯಕ್ಷರ ನೇಮಕವು ಮಧ್ಯಂತರ ವ್ಯವಸ್ಥೆಯಾಗಿದ್ದು. ಜ.14ರ ಮಕರ ಸಂಕ್ರಮಣದ ನಂತರ ನಿತಿನ್‌ ಕಾಯಂ ಅಧ್ಯಕ್ಷರಾಗುವ ನಿರೀಕ್ಷೆಯಿದೆ.

ಉತ್ತರ ಭಾರತೀಯರಿಗೆ ನಾಳೆಯಿಂದ ಅಶುಭ ಖಾರ್‌ ಮಾಸ

ಈ ಮಾಸ ಸಂಕ್ರಾಂತಿಗೆ ಅಂತ್ಯ । ನಂತರ ನಿತಿನ್‌ಗೆ ಪಟ್ಟ ಸಂಭವ

ಸದ್ಯಕ್ಕೆ ನಡ್ಡಾ ಬಳಿ ತರಬೇತಿ । ಮಧ್ಯಂತರ ಅವಧಿಗೆ ನೇಮಕನವದೆಹಲಿ: ಬಿಜೆಪಿ ದೀಢೀರನೇ ಏಕೆ ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಿತು ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಬಿಜೆಪಿ ನಾಯಕರ ಪ್ರಕಾರ, ಕಾರ್ಯಕಾರಿ ಅಧ್ಯಕ್ಷರ ನೇಮಕವು ಮಧ್ಯಂತರ ವ್ಯವಸ್ಥೆಯಾಗಿದ್ದು. ಜ.14ರ ಮಕರ ಸಂಕ್ರಮಣದ ನಂತರ ನಿತಿನ್‌ ಕಾಯಂ ಅಧ್ಯಕ್ಷರಾಗುವ ನಿರೀಕ್ಷೆಯಿದೆ.‘ಹಿಂದುಗಳು ಅಶುಭವೆಂದು ಪರಿಗಣಿಸುವ 1 ತಿಂಗಳ ಅವಧಿಯಾದ ಖಾರ್ ಮಾಸ ಮಂಗಳವಾರದಿಂದ ಪ್ರಾರಂಭವಾಗುತ್ತದೆ. ನಿನ್ನೆ ನಿತಿನ್‌ ಅವರನ್ನು ಈ ಮಾಸ ಆರಂಭಕ್ಕೂ ಮುನ್ನವೇ ತರಾತುರಿಯಲ್ಲಿ ಈಗ ನೇಮಿಸಲಾಗಿದೆ. ಈ ಮಾಸ ಜ.14ರ ಮಕರ ಸಂಕ್ರಾಂತಿಯಂದು ಮುಗಿಯಲಿದೆ. ನಂತರ ಹೊಸ ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಬಹುದು. ಅಲ್ಲಿಯವರೆಗೂ ನಡ್ಡಾ ಅವರ ಬಳಿ ನಿತಿನ್‌ ನಬೀನ್‌ ತರಬೇತಿ ಪಡೆಯಲಿದ್ದಾರೆ. ಈ ಹಿಂದೆ ಅಮಿತ್‌ ಶಾ ಬಳಿ ನಡ್ಡ ಕೂಡ ಇದೇ ರೀತಿ ತರಬೇತಿ ಪಡೆದಿದ್ದರು’ ಎಂದು ಅವು ಹೇಳಿವೆ.

ಬಿಜೆಪಿ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಜ.14ರ ನಂತರ 4 ದಿನ ಕಾಲ ನಡೆಯಬಹುದು ಎಂದು ಅವು ತಿಳಿಸಿವೆ.

==

ಬಿಜೆಪಿ ಕಾರ್ಯಾಧ್ಯಕ್ಷರಾಗಿ ನಿತಿನ್‌ ಅಧಿಕಾರ ಸ್ವೀಕಾರ

ಪಿಟಿಐ ನವದೆಹಲಿಭಾನುವಾರ ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿಹಾರ ಸಚಿವ ನಿತಿನ್‌ ನಬೀನ್‌ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು.

ಈ ವೇಳೆ ಪಕ್ಷದ ಅಧ್ಯಕ್ಷರೂ ಆಗಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು. ನಿತಿನ್‌ ಬಿಜೆಪಿ ಇತಿಹಾಸದಲ್ಲೇ 2ನೇ ಕಾರ್ಯಾಧ್ಯಕ್ಷರಾಗಿದ್ದು, ಶೀಘ್ರದಲ್ಲೇ ಅಧ್ಯಕ್ಷ ಹುದ್ದೆಗೆ ಪದೋನ್ನತಿ ಪಡೆಯಬಹುದು ಎಂದು ಮೂಲಗಳು ಹೇಳಿವೆ,ಬಿಜೆಪಿ ನಾಯಕ ದಿ. ನಬೀನ್‌ ಕಿಶೋರ್‌ ಅವರ ಪುತ್ರನಾಗಿರುವ ನಿತಿನ್‌, 5 ಬಾರಿ ಶಾಸಕರಾಗಿದ್ದು, ತಮ್ಮ ಕೆಲಸದಿಂದ ಗುರುತಿಸಿಕೊಂಡಿರುವ ಯುವ ನಾಯಕರಾಗಿದ್ದಾರೆ.

ಬಿಹಾರಕ್ಕೆ ಅಧ್ಯಕ್ಷ ನೇಮಕ:

ಬಿಹಾರದ ಬಿಜೆಪಿ ಅಧ್ಯಕ್ಷರಾಗಿ, ದರ್ಭಂಗಾದಿಂದ 6 ಬಾರಿ ಶಾಸಕರಾಗಿರುವ ಸಂಜಯ್ ಸರೋಗಿ ಅವರನ್ನು ನೇಮಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ