ತಮಿಳ್ನಾಡಿನ ಶಾಲೆ, ದೇಗುಲ, ಬಸ್‌ಸ್ಟಾಪ್‌ ಬಳಿಯ 717 ಬಾರ್‌ ಬಂದ್‌!

KannadaprabhaNewsNetwork |  
Published : May 13, 2026, 12:15 AM ISTUpdated : May 13, 2026, 05:04 AM IST
Vijay

ಸಾರಾಂಶ

ರಾಜ್ಯಾದ್ಯಂತ ಶಾಲೆ, ದೇಗುಲ ಮತ್ತು ಬಸ್‌ ನಿಲ್ದಾಣಗಳಿಂದ 500 ಮೀಟರ್‌ ವ್ಯಾಪ್ತಿಯ ಒಳಗಿರುವ 717 ಸರ್ಕಾರಿ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ಆದೇಶಿಸಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ 

 ಚೆನ್ನೈ: ರಾಜ್ಯಾದ್ಯಂತ ಶಾಲೆ, ದೇಗುಲ ಮತ್ತು ಬಸ್‌ ನಿಲ್ದಾಣಗಳಿಂದ 500 ಮೀಟರ್‌ ವ್ಯಾಪ್ತಿಯ ಒಳಗಿರುವ 717 ಸರ್ಕಾರಿ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ಆದೇಶಿಸಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. 

ಇದೇ ವೇಳೆ ಪಕ್ಷದ ಕಾರ್ಯಕರ್ತರು ಕಂಡಕಂಡಲ್ಲಿ ಪೋಸ್ಟರ್‌, ಬ್ಯಾನರ್‌ ಹಾಕುವುದು, ರಸ್ತೆಗಳಲ್ಲಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಮಾಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ವಿಸಿಕೆ ಪಕ್ಷ ಎಚ್ಚರಿಸಿದೆ.ಅಂಗಡಿ ಬಂದ್‌:ರಾಜ್ಯದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧ ಮಾಡಬೇಕು ಎಂದು ಹಲವು ಮಹಿಳಾ ಸಂಘಟನೆಗಳು ಮತ್ತು ಕೆಲ ರಾಜಕೀಯ ಪಕ್ಷಗಳ ಆಗ್ರಹದ ನಡುವೆಯೇ, ಪ್ರಾರ್ಥನಾ ಸ್ಥಳಗಳ ಸಮೀಪದ 276, ಶೈಕ್ಷಣಿಕ ಸಂಸ್ಥೆಗಳ ಬಳಿಯ 186 ಮತ್ತು ಬಸ್‌ ನಿಲ್ದಾಣದಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ಇರುವ 255 ಚಿಲ್ಲರೆ ಮದ್ಯದ ಅಂಗಡಿಗಳನ್ನು ಮುಂದಿನ 15 ದಿನಗಳಲ್ಲಿ ಮುಚ್ಚುವಂತೆ ವಿಜಯ್‌ ಆದೇಶಿಸಿದ್ದಾರೆ.

ಈ ನಡುವೆ ಇದೊಂದು ಪ್ರಚಾರದ ತಂತ್ರ. ಶಿಕ್ಷಣ ಸಂಸ್ಥೆ, ಪ್ರಾರ್ಥನಾ ಮಂದಿರ ಮತ್ತು ಬಸ್‌ ನಿಲ್ದಾಣಗಳ ಬಳಿ ಸರ್ಕಾರಿ ಮದ್ಯದ ಅಂಗಡಿಗಳೇ ಇಲ್ಲ. ಮದ್ಯ ಮಾರಾಟವೇ ರಾಜ್ಯದ ಪ್ರಮುಖ ಆದಾಯ ಎಂದು ಪ್ರಮುಖ ವಿಪಕ್ಷ ಡಿಎಂಕೆ ವ್ಯಂಗ್ಯವಾಡಿದೆ. 

ಭರ್ಜರಿ ಆದಾಯ: 

ತಮಿಳ್ನಾಡಲ್ಲಿ ಸರ್ಕಾರಿ ಸ್ವಾಮ್ಯದ ಒಟ್ಟು 4765 ಚಿಲ್ಲರೆ ಮದ್ಯದ ಅಂಗಡಿಗಳಿದ್ದು ಅಲ್ಲಿ 551 ಮಾದರಿಯ ಮದ್ಯ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷ ಮದ್ಯ ಮಾರಾಟ ಮೂಲದ ತಮಿಳ್ನಾಡು ಸರ್ಕಾರ 48344 ಕೋಟಿ ರು. ಆದಾಯ ಸಂಗ್ರಹಿಸಿತ್ತು.

ಎಲ್ಲಿ ಎಷ್ಟು ಮದ್ಯದಂಗಡಿ ಬಂದ್?

276 ಪ್ರಾರ್ಥನಾ ಸ್ಥಳಗಳ ಬಳಿ186

ಶೈಕ್ಷಣಿಕ ಸಂಸ್ಥೆಗಳ ಬಳಿ225

ಬಸ್‌ ನಿಲ್ದಾಣ ಬಳಿ 4765

ರಾಜ್ಯದಲ್ಲಿನ ಒಟ್ಟು ಮದ್ಯದಂಗಡಿ 551

48344 ಕೋಟಿ ಮದ್ಯ ಮಾರಾಟದಿಂದ ಹಣ ಸಂಗ್ರಹ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇನ್ನು ಮುಂದೆ ಪಿಎಫ್‌ಗೆ ಮಾಸಿಕ 1,800 ಕಡಿತ ಕಡ್ಡಾಯ!
ಅಯೋಧ್ಯೆ ಅಕ್ರಮ : ವಕೀಲರ ಭಾರಿ ಪ್ರತಿಭಟನೆ