ಮದುವೆ ಬೆನ್ನಲ್ಲೇ ಸೋನಾಕ್ಷಿ ಆಸ್ಪತ್ರೆಗೆ: ಗರ್ಭಿಣಿ ವದಂತಿ!

KannadaprabhaNewsNetwork | Updated : Jun 30 2024, 05:53 AM IST

ಸಾರಾಂಶ

ಇತ್ತೀಚೆಗಷ್ಟೇ ಮದುವೆಯಾಗಿದ್ದ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್‌ ಇಕ್ಬಾಲ್‌ ಶನಿವಾರ ಆಸ್ಪತ್ರೆಯೊಂದಕ್ಕೆ ತೆರಳಿದ್ದು ಭಾರೀ ವದಂತಿಗೆ ಕಾರಣವಾಗಿದೆ. ಸೋನಾಕ್ಷಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಈ ಹಿನ್ನೆಲೆಯಲ್ಲಿ ಪತಿಯ ಜೊತೆಗೆ ಆಸ್ಪತ್ರೆಗೆ ತೆರಳಿದ್ದರು ಎಂಬ ವದಂತಿ ಹಬ್ಬಿದೆ.

ಮುಂಬೈ: ಇತ್ತೀಚೆಗಷ್ಟೇ ಮದುವೆಯಾಗಿದ್ದ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್‌ ಇಕ್ಬಾಲ್‌ ಶನಿವಾರ ಆಸ್ಪತ್ರೆಯೊಂದಕ್ಕೆ ತೆರಳಿದ್ದು ಭಾರೀ ವದಂತಿಗೆ ಕಾರಣವಾಗಿದೆ. ಸೋನಾಕ್ಷಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಈ ಹಿನ್ನೆಲೆಯಲ್ಲಿ ಪತಿಯ ಜೊತೆಗೆ ಆಸ್ಪತ್ರೆಗೆ ತೆರಳಿದ್ದರು ಎಂಬ ವದಂತಿ ಹಬ್ಬಿದೆ. ಇಬ್ಬರೂ ಆಸ್ಪತ್ರೆಗೆ ತೆರಳಿ, ಮರಳುವ ವೇಳೆ ಪಾಪಾರಾಜಿಗಳಿಗೆ ಫೋಸ್‌ ನೀಡದೇ ತಪ್ಪಿಸಿದ್ದು ಈ ವದಂತಿಗೆ ಇನ್ನಷ್ಟು ಬಣ್ಣ ನೀಡಿದೆ. ಜೂ.23ರಂದಷ್ಟೇ ಸೋನಾಕ್ಷಿ ಮತ್ತು ಜಹೀರ್‌ ಮನೆಯಲ್ಲೇ ಸರಳ ವಿವಾಹವಾಗಿದ್ದರೂ, ಇಬ್ಬರೂ ಕಳೆದ 2 ವರ್ಷಗಳಿಂದ ನಂಟಿನಲ್ಲಿದ್ದರು. ಎರಡು ವರ್ಷಗಳ ಹಿಂದೆಯೇ ಜೋಡಿಯ ವಿವಾಹ ನಿಶ್ಚಿತಾರ್ಥವಾಗಿತ್ತು ಎಂಬೆಲ್ಲಾ ಪುಕಾರು ಹಬ್ಬಿದೆ.

ಕಾಲಿಗೆ ಪೆಟ್ಟಾದವನ ಮರ್ಮಾಂಗಕ್ಕೆ ಶಸ್ತ್ರ ಚಿಕಿತ್ಸೆ: ಮಹಾ ವೈದ್ಯ ಎಡವಟ್ಟು

ಥಾಣೆ: ಕಾಲಿಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಒಂಬತ್ತು ವರ್ಷದ ಬಾಲಕನಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಸುನ್ನತಿ ಶಸ್ತ್ರ ಚಿಕಿತ್ಸೆ ಮಾಡಿ ದೊಡ್ಡ ಎಡವಟ್ಟು ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಕಾಲಿಗೆ ಪೆಟ್ಟಾಗಿದೆ ಎಂದು ಆಸ್ಪತ್ರೆಗೆ ದಾಖಲಿಸಿದರೆ ಆತನ ಖಾಸಗಿ ಅಂಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿದ ವೈದ್ಯಾಧಿಕಾರಿ, ಆ ಬಾಲಕನಿಗೆ ಕಾಲಿಗೆ ಪೆಟ್ಟಾಗಿದ್ದು ನಿಜ, ಆದರೆ ಆ ಬಾಲಕ ಪೈಮೋಸಿಸ್‌(ಶಿಶ್ನಾಗ್ರಚರ್ಮ ಸಂಕೋಚನ)ನಿಂದಲೂ ಬಳಲುತಿದ್ದ. ವೈದ್ಯರು ಎರಡೂ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ. ಆದರೆ ಸುನ್ನತಿ ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯರು, ಪೋಷಕರಿಗೆ ತಿಳಿಸುವುದನ್ನು ಮರೆತಿದ್ದಾರೆ. ವೈದ್ಯರು ಮಾಡಿದ್ದು ಸರಿಯಾಗಿದೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ವೈದ್ಯರು ನೀಡಿದ ವಿವರಣೆಯನ್ನು ಸ್ವೀಕರಿಸಲು ಪೋಷಕರು ನಿರಾಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನಡೆದಿದ್ದು ಏನು?: ಒಂಬತ್ತು ವರ್ಷದ ಬಾಲಕ ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದನು. ಆತನನ್ನು ಚಿಕಿತ್ಸೆಗಾಗಿ ಜೂ.15 ರಂದು ಥಾಣೆ ಜಿಲ್ಲೆಯ ಶಹಾಪುರ ಉಪ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತನ ಕಾಲಿಗೆ ಬದಲಾಗಿ ಗಾಯವಾಗಿರುವುದನ್ನು ಮರೆದು ಸುನ್ನತಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ನಂತರ ತಮ್ಮ ದೊಡ್ಡ ಎಡವಟ್ಟನ್ನು ಅರಿತು ನಂತರ ಗಾಯಗೊಂಡ ಕಾಲಿಗೆ ಚಿಕಿತ್ಸೆ ನೀಡಿದ್ದಾರೆ.

Share this article