ಬಿಸಿಲ ಧಗೆಯಲ್ಲೂ ಎಸಿ ಬಳಸಲ್ಲ, ಜೇಬಲ್ಲಿ ಈರುಳ್ಳಿ ಇಟ್ಕೋತೀನಿ: ಸಿಂಧಿಯಾ

Published : Apr 28, 2026, 07:44 AM IST
Carry an onion in your pocket Jyoti raditya Scindia mantra to beat summer heat

ಸಾರಾಂಶ

ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಬಿಸಿಲ ಬೇಗೆ ತಡೆಯಲಾಗದೇ ಜನತೆ ಹವಾನಿಯಂತ್ರಿತ ವ್ಯವಸ್ಥೆಗೆ (ಎಸಿ) ಮೊರೆ ಹೋಗುತ್ತಿರುವಾಗ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತ್ರ ಕಿಸೆಯಲ್ಲಿ ಈರುಳ್ಳಿ ಇಟ್ಟುಕೊಂಡೇ ಬಿಸಿಲ ಧಗೆ ನಿವಾರಿಸಿಕೊಳ್ಳುತ್ತಿದ್ದಾರಂತೆ.

ಚಂಬಲ್‌: ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಬಿಸಿಲ ಬೇಗೆ ತಡೆಯಲಾಗದೇ ಜನತೆ ಹವಾನಿಯಂತ್ರಿತ ವ್ಯವಸ್ಥೆಗೆ (ಎಸಿ) ಮೊರೆ ಹೋಗುತ್ತಿರುವಾಗ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತ್ರ ಕಿಸೆಯಲ್ಲಿ ಈರುಳ್ಳಿ ಇಟ್ಟುಕೊಂಡೇ ಬಿಸಿಲ ಧಗೆ ನಿವಾರಿಸಿಕೊಳ್ಳುತ್ತಿದ್ದಾರಂತೆ.

ಖುದ್ದು ಸಿಂಧಿಯಾ ಈ ಹೇಳಿಕೆ

ಹೌದು.. ಈ ಖುದ್ದು ಸಿಂಧಿಯಾ ಈ ಹೇಳಿಕೆ ನೀಡಿದ್ದು, ಜನತೆಗೆ ನೀವೂ ಇದನ್ನೇ ಪಾಲಿಸಿ ಎಂದು ಸಲಹೆ ನೀಡಿದ್ದಾರೆ. ಸಚಿವರ ಈ ಹೇಳಿಕೆ ಭಾರೀ ವೈರಲ್‌ ಆಗಿದ್ದು, ಥರಾವರಿ ಪ್ರತಿಕ್ರಿಯೆಗಳಿಗೆ ಗುರಿಯಾಗಿದೆ.

ನಾನು ನನ್ನ ಕಾರಿನಲ್ಲಿ ಹವಾನಿಯಂತ್ರಕ (ಎಸಿ) ಬಳಸುವುದಿಲ್ಲ

ಮಧ್ಯಪ್ರದೇಶದ ಶಿವಪುರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಸಿಂಧಿಯಾ, ‘ನಾನು ನನ್ನ ಕಾರಿನಲ್ಲಿ ಹವಾನಿಯಂತ್ರಕ (ಎಸಿ) ಬಳಸುವುದಿಲ್ಲ, ಎಸಿ ವಾತಾವರಣದಲ್ಲಿ ಕುಳಿತುಕೊಳ್ಳುವುದಿಲ್ಲ’ ಎಂದರು.

‘ಮೇ ಮತ್ತು ಜೂನ್ ತಿಂಗಳ 51 ಡಿಗ್ರಿ ಶಾಖದಲ್ಲಿಯೂ ಹೇಗೆ ಇರುತ್ತೀರಿ ಎಂದು ಜನ ನನ್ನನ್ನು ಕೇಳುತ್ತಾರೆ. ಆಗ ನಾನು ‘ಇದು ಚಂಬಲ್ ಚರ್ಮ’ ಎನ್ನುತ್ತೇನೆ. ನಾನು ನಿಮಗೆ ಇನ್ನೊಂದು ವಿಷಯವನ್ನು ಹೇಳುತ್ತೇನೆ. ನಿಮ್ಮ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳಿ. ಏನೂ ಆಗುವುದಿಲ್ಲ. ಇಂದಿನ ಕಾಲದಲ್ಲಿ, ಎಲ್ಲರೂ ಪೆಟ್ಟಿಗೆಗಳನ್ನು ಹೊತ್ತೊಯ್ಯುತ್ತಿದ್ದಾರೆ. ಆದರೆ ಸಂವಹನ ಸಚಿವರು (ತಾನು) ಈರುಳ್ಳಿಯನ್ನು ಹೊತ್ತೊಯ್ಯುತ್ತಿದ್ದಾರೆ. ಇವೆಲ್ಲ ಹಳೆಯ ವಿಧಾನಗಳು. ಆದರೆ ವೈದ್ಯಕೀಯ ಮುಂದುವರಿದಂತೆ, ನಾವು ಈ ವಿಷಯಗಳನ್ನು ಮರೆಯಬಾರದು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನರಭಕ್ಷಕರಾದ್ರಾ ರಷ್ಯಾ ಸೈನಿಕರು?
ಬಿರಿಯಾನಿ ತಿಂದ ಬೆನ್ನಲ್ಲೇ ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು