ಧರ್ಮದ ಆಧಾರದಲ್ಲಿ ಮುಸ್ಲಿಂ ಮೀಸಲು ಇಲ್ಲ : ಅಮಿತ್‌ ಶಾ

KannadaprabhaNewsNetwork |  
Published : Apr 17, 2026, 01:45 AM IST
Amith Shah

ಸಾರಾಂಶ

ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ. ಏಕೆಂದರೆ ಅಂತಹ ಮೀಸಲು ಸಂವಿಧಾನ ಬಾಹಿರವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. ಅಖಿಲೇಶ್‌ ಯಾದವ್‌ ಮತ್ತು ಧರ್ಮೇಂದ್ರ ಯಾದವ್‌, ಶೇ.33 ಮಹಿಳಾ ಮೀಸಲಿನಲ್ಲಿ ಮುಸ್ಲಿಮರಿಗೆ ಪ್ರತ್ಯೆಕ ಮೀಸಲು ನೀಡಬೇಕು ಎಂದರು

ನವದೆಹಲಿ: ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ. ಏಕೆಂದರೆ ಅಂತಹ ಮೀಸಲು ಸಂವಿಧಾನ ಬಾಹಿರವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಮುಸ್ಲಿಮರಿಗೆ ಪ್ರತ್ಯೆಕ ಮೀಸಲು ನೀಡಬೇಕು

ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್‌ ಯಾದವ್‌ ಮತ್ತು ಧರ್ಮೇಂದ್ರ ಯಾದವ್‌, ಶೇ.33 ಮಹಿಳಾ ಮೀಸಲಿನಲ್ಲಿ ಮುಸ್ಲಿಮರಿಗೆ ಪ್ರತ್ಯೆಕ ಮೀಸಲು ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾ, ‘ಧರ್ಮದ ಆಧಾರದ ಮೇಲೆ ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶ ನೀಡುವುದಿಲ್ಲ. ಅಂತಹ ಮೀಸಲಾತಿ ಸಂವಿಧಾನ ಬಾಹಿರ. ನಮ್ಮ ಸರ್ಕಾರದ ಈ ನಿರ್ಧಾರವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದರು.

ಸಮಾಜವಾದಿ ಪಕ್ಷ ತನ್ನೆಲ್ಲಾ ಸ್ಥಾನಗಳನ್ನೂ ಮುಸ್ಲಿಮರಿಗೆ ಬಿಟ್ಟುಕೊಡಲಿ

ಜೊತೆಗೆ ಬೇಕಿದ್ದರೆ ಸಮಾಜವಾದಿ ಪಕ್ಷ ತನ್ನೆಲ್ಲಾ ಸ್ಥಾನಗಳನ್ನೂ ಮುಸ್ಲಿಮರಿಗೆ ಬಿಟ್ಟುಕೊಡಲಿ ಎಂದು ಸಲಹೆ ನೀಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಸ್ರೇಲ್‌-ಲೆಬನಾನ್‌ ಕದನಕ್ಕೆ 10 ದಿನ ವಿರಾಮ : ಟ್ರಂಪ್‌
ದಿಲ್ಲಿ ಏರ್ಪೋರ್ಟ್‌ನಲ್ಲಿ 2 ವಿಮಾನಗಳ ಡಿಕ್ಕಿ : ತಪ್ಪಿದ ಅನಾಹುತ