ಕ್ರಿಕೆಟ್‌ಗೆ ಆಹ್ವಾನಿಸದ್ದಕ್ಕೆ ಪಿಚ್ ಧ್ವಂಸಗೊಳಿಸಿದ ಪುರಸಭೆ ಅಧ್ಯಕ್ಷ!

KannadaprabhaNewsNetwork |  
Published : Apr 21, 2026, 04:00 AM IST
Cricket

ಸಾರಾಂಶ

ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ನಡೆದ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ತಮ್ಮನ್ನು ಆಹ್ವಾನಿಸದ್ದಕ್ಕೆ ಕೋಪಗೊಂಡ ಪುರಸಭೆ ಅಧ್ಯಕ್ಷರೊಬ್ಬರು, ಟ್ರ್ಯಾಕ್ಟರ್‌ ಬಳಸಿ ಪಿಚ್‌ ಅನ್ನೇ ಧ್ವಂಸಗೊಳಿಸಿದ ಘಟನೆ ಏ.12ರಂದು ನಡೆದಿದೆ.

 ಮುಂಬೈ :  ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ನಡೆದ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ತಮ್ಮನ್ನು ಆಹ್ವಾನಿಸದ್ದಕ್ಕೆ ಕೋಪಗೊಂಡ ಪುರಸಭೆ ಅಧ್ಯಕ್ಷರೊಬ್ಬರು, ಟ್ರ್ಯಾಕ್ಟರ್‌ ಬಳಸಿ ಪಿಚ್‌ ಅನ್ನೇ ಧ್ವಂಸಗೊಳಿಸಿದ ಘಟನೆ ಏ.12ರಂದು ನಡೆದಿದೆ.

ಜಲಗಾಂವ್‌ ಜಿಲ್ಲೆಯ ಧರಂಗಾವ್‌ನಲ್ಲಿ ಎಂಎಲ್‌ಎ ಟ್ರೋಫಿ

ಜಲಗಾಂವ್‌ ಜಿಲ್ಲೆಯ ಧರಂಗಾವ್‌ನಲ್ಲಿ ಎಂಎಲ್‌ಎ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಏರ್ಪಾಡಾಗುತ್ತು ಹಾಗೂ 12ರಂದು ಫೈನಲ್ ಪಂದ್ಯ ನಡೆಯುತ್ತಿತ್ತು. ಪಂದ್ಯಕ್ಕೆ ಆಯೋಜಕರು ಧರಂಗಾಂವ್ ಪುರಸಭೆಯ ಅಧ್ಯಕ್ಷರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಕೋಪಗೊಂಡ ಅವರು, ಅಂತಿಮ ಪಂದ್ಯ ನಡೆಯುವ ವೇಳೆಯೇ ಟ್ರ್ಯಾಕ್ಟರ್ ಕಳಿಸಿದ್ದಾರೆ. ಆ ಟ್ರ್ಯಾಕ್ಟರ್‌ ಪಿಚ್ ಮೇಲೆ ನುಗ್ಗಿ ಟರ್ಫ್ ಅನ್ನು ಅಲ್ಲಾಡಿಸಿ ಪಿಚ್ ಅನ್ನು ನಾಶ ಮಾಡಿದೆ.

ಘಟನೆಯಿಂದ ಆಟಗಾರರು, ವೀಕ್ಷಕರು ಹಾಗೂ ಆಯೋಜಕರು ಕಕ್ಕಾಬಿಕ್ಕಿ

ಘಟನೆಯಿಂದ ಆಟಗಾರರು, ವೀಕ್ಷಕರು ಹಾಗೂ ಆಯೋಜಕರು ಕಕ್ಕಾಬಿಕ್ಕಿಯಾದರು. ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತಮಿಳುನಾಡಲ್ಲಿ ಯಾರು ಆಗುತ್ತಾರೆ ಕಿಂಗ್‌?
ಬಂಗಾಳದಲ್ಲಿ ದೀದಿ-ಬಿಜೆಪಿ ಜಿದ್ದಾಜಿದ್ದಿ!